Breaking News

ರಾಷ್ಟ್ರೀಯ

ಬೆಂಗಳೂರಿನಲ್ಲಿ ಜೋಡಿ ಕೊಲೆ;

ಬೆಂಗಳೂರು,  ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಇದೀಗಬೆಂಗಳೂರಿನಕುಂಬಾರಪೇಟೆಯ(Kumbarpet) ಹರಿ ಅಂಗಡಿ ಮಳಿಗೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರ ಹತ್ಯೆ ಮಾಡಿದ್ದಾರೆ. ಸುರೇಶ್, ಮಹೇಂದ್ರ ಮೃತ ರ್ದುದೈವಿಗಳು. ಆಸ್ತಿ ವಿಚಾರಕ್ಕೆ ಸಂಬಂಧಿಕರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೇಂದ್ರ ವಿಭಾಗ ಡಿಸಿಪಿ ಹೇಳಿದ್ದಿಷ್ಟು ಇನ್ನು ಈ ಕುರಿತು ಮಾತನಾಡಿದ ಕೇಂದ್ರ …

Read More »

ಕಾಂಗ್ರೆಸ್​ ಕಚೇರಿಯೊಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು

ಬೆಳಗಾವಿ, : ರಾಜ್ಯ ಸರ್ಕಾರದ (Karnataka Congress Government) ವಿರುದ್ಧ ಬಿಜೆಪಿ (BJP) ಕಾರ್ಯಕರ್ತರು ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಿದ್ದು, ಬೆಳಗಾವಿಯಲ್ಲಿ (Belagavi)ಕಾಂಗ್ರೆಸ್​ ಕಚೇರಿಯೊಳಗೆ (Congress Office) ನುಗ್ಗಿದರು. ಸಂಸದ ಡಿಕೆ ಸುರೇಶ್ (DK Suresh) ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಕೊನೆಗೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಚೇರಿಯಿಂದ ಎಳೆದು ಹೊರ ತಂದರು. ಬಳಿಕ ಬಿಜೆಪಿ …

Read More »

ಅದು ಭಾರತೀಯ ಜನತಾ ಪಕ್ಷಅಲ್ಲ, ಬ್ರಿಟಿಷ್ ಜನತಾ ಪಕ್ಷ:ಮಧು ಬಂಗಾರಪ್ಪ

ಬೆಂಗಳೂರು, : “ಅದು ಭಾರತೀಯ ಜನತಾ ಪಕ್ಷ (bharatiya janata party) ಅಲ್ಲ, ಬ್ರಿಟಿಷ್ ಜನತಾ ಪಕ್ಷ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ”? ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ನಡೆಸಿದರು. ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ …

Read More »

ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಶರದ್ಚಂದ್ರ ಪವಾರ್

ಮುಂಬೈ: ತಾವು ಸ್ಥಾಪಿಸಿದ ಪಕ್ಷವಾದ ಎನ್‌ಸಿಪಿಯ (NCP) ಹೆಸರು ಮತ್ತು ಚಿಹ್ನೆಗಾಗಿ ನಡೆದ ಜಗಳದಲ್ಲಿ ಭಾರಿ ಹಿನ್ನಡೆಯನ್ನು ಎದುರಿಸಿದ ಒಂದು ದಿನದ ನಂತರ, ಹಿರಿಯ ನಾಯಕಶರದ್ ಪವಾರ್(Sharad Pawar) ಅವರ ಬಣಕ್ಕೆ ಚುನಾವಣಾ ಆಯೋಗವು ಬುಧವಾರ ಹೊಸ ಹೆಸರನ್ನು ನಿಗದಿಪಡಿಸಿದೆ. ಶರದ್ ಪವಾರ್ ಬಣಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ – ಶರದ್ಚಂದ್ರ ಪವಾರ್ ಎಂಬ ಹೆಸರು ಸಿಕ್ಕಿದೆ. ಚುನಾವಣಾ ಸಂಸ್ಥೆಯು ಅಜಿತ್ ಪವಾರ್ (Ajit pawar) ಬಣವನ್ನು ನಿಜವಾದ ರಾಷ್ಟ್ರೀಯವಾದಿ …

Read More »

ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ: ದೂರಿನ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಕೋರ್ಟ್

ಮಂಗಳೂರು, ಫೆಬ್ರವರಿ 7: ಕೇಂದ್ರದ ಮಧ್ಯಂತರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಬರದಲ್ಲಿ ದಕ್ಷಿಣ ಭಾರತ ಪ್ರತ್ಯೇಕ ದೇಶದ ಬಗ್ಗೆ ಸಂಸದ ಡಿ.ಕೆ.ಸುರೇಶ್(DK Suresh)ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಡಿಕೆ ಸುರೇಶ್ ವಿರುದ್ದದ ದೂರಿನ‌ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ. …

Read More »

ಕಾಂಗ್ರೆಸ್​ ತೊರೆದು ವಾಪಸ್ ಬಿಜೆಪಿ ಸೇರ್ಪಡೆಗೆ ಮುಂದಾದ ಮಾಜಿ ಶಾಸಕ!

ದಾವಣಗೆರೆ, : ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮತ್ತೆ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಲೋಕಾಯುಕ್ತ ಬಲೆಗೆ ಬಿದ್ದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರು ನಾಳೆ ಅಂದರೆ ಫೆಬ್ರವರಿ 07ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್​​ ಮಾಜಿ ಶಾಸಕ ಎಚ್. ಪಿ. ರಾಜೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪರಿಶಿಷ್ಟ ಪಂಗಡ ಮೀಸಲು‌ ಕ್ಷೇತ್ರದ ಕಾಂಗ್ರೆಸ್​ನ ಮಾಜಿ ಶಾಸಕ ಎಚ್. …

Read More »

ಎಣ್ಣೆ ಮತ್ತಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿಯಿಂದ ಯುವಕನ ಮೇಲೆ ಗುಂಡಿನ ದಾಳಿ

ಬೆಂಗಳೂರು, : ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಎಂಬ ವ್ಯಕ್ತಿ ಎಣ್ಣೆ ಮತ್ತಿನಲ್ಲಿ ಪರಿಚಿತರ ಮನೆಗೆ ಹೋಗಿದ್ದು ಮನೆಯಲ್ಲಿದ್ದ ಯುವಕನ ಮೇಲೆ ಗುಂಡು (Firing) ಹಾರಿಸಿದ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿನಿಮಾ‌ ಸ್ಟೈಲ್ ನಲ್ಲಿ‌ ಮನೆಗೆ ಎಂಟ್ರಿ ಕೊಟ್ಟ ಪರಶುರಾಮ್ ಅವರನ್ನು ಮನೆಯೊಳಗೆ ಬರದಂತೆ ಸೂರಜ್ ತಡೆದಿದ್ದು ಕೋಪಗೊಂಡ ಪರಶುರಾಮ್ ತಮ್ಮ ಕೈಯಲ್ಲಿದ್ದ ಗನ್​ನಿಂದ ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಗುಂಡು ಗೋಡೆಗೆ …

Read More »

ರಾಷ್ಟ್ರ ರಾಜಧಾನಿಯಲ್ಲಿ ಇಂದು ʻಕೈʼ ರಣಕಹಳೆ: ಎಲ್ಲರ ಚಿತ್ತ ಕಾಂಗ್ರೆಸ್‌ ನಾಯಕರ ಹೋರಾಟದತ್ತ

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರಾಜ್ಯದ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ಇಂದು ತಮ್ಮ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. “ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ರಾಜ್ಯದ ಜನ ನಮಗೆ ಅವಕಾಶ ಕೊಟ್ಟಿದ್ದು ಅವರಿಗೆ ನ್ಯಾಯ ಒದಗಿಸಿ ಋಣ ತೀರಿಸುವುದು ನಮ್ಮ ಕರ್ತವ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೇಂದ್ರ ಸರ್ಕಾರದ ಜತೆ ಸಹಕಾರ, ಸಮನ್ವಯತೆ ಮೂಲಕ ನಡೆದುಕೊಂಡು ಬರುತ್ತಿದ್ದೇವೆ. …

Read More »

‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಶೇ. 50 ಮಿತಿ ರದ್ದು: ರಾಹುಲ್ ಗಾಂಧಿ ಘೋಷಣೆ

ರಾಂಚಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ಈಗ ಮೀಸಲಾತಿಗೆ ಇರುವ ಗರಿಷ್ಠ ಶೇಕಡ 50ರಷ್ಟು ಮಿತಿಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಭಾರತ್ ಚೋಡೋ ನ್ಯಾಯ ಯಾತ್ರೆ ಅಂಗವಾಗಿ ರಾಂಚಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.   ಮೀಸಲಾತಿಗೆ ಶೇಕಡ 50ರಷ್ಟು ಗರಿಷ್ಠ ಮಿತಿಯನ್ನು ಇಂಡಿಯಾ ಒಕ್ಕೂಟ ಕಿತ್ತೊಗೆಯಲಿದೆ. ದಲಿತರು, …

Read More »

ಇಂದಿನಿಂದ 29 ರೂ.ನ ‘ಭಾರತ್ ಬ್ರ್ಯಾಂಡ್’ ಅಕ್ಕಿ ಮಾರಾಟ

ಬೆಂಗಳೂರು : ಜನಸಾಮಾನ್ಯರಿಗೆ ಗುಡ್ ನ್ಯೂಸ್ ಎಂಬಂತೆ ಇಂದಿನಿಂದ 29 ರೂ.ನ ‘ಭಾರತ್ ಬ್ರ್ಯಾಂಡ್’ ಅಕ್ಕಿ ಮಾರಾಟವಾಗುತ್ತಿದೆ. ಹೌದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಚಾಲನೆ ಸಿಗಲಿದೆ. ಈ ಮೂಲಕ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ.   ನಾಫೆಡ್-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಭಾರತ್ ಅಕ್ಕಿ …

Read More »