Breaking News

ರಾಷ್ಟ್ರೀಯ

ಜನಸ್ಪಂದನೆಗೆ ಜನರ ವೇದನೆಯೇ ಉತ್ತರ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗುರುವಾರ ರಾಜ್ಯಮಟ್ಟದ ಜನಸ್ಪಂದನ (Jana Spandana) ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. 12,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ(BJP) ವ್ಯಂಗ್ಯವಾದಿದ್ದು, ಜನಸ್ಪಂದನೆಗೆ ಜನರ ವೇದನೇಯೇ ಉತ್ತರ ಎಂದು ಹೇಳಿದೆ.   ಈ ಬಗ್ಗೆ ಎಕ್ಸ್ ನಲ್ಲಿ (X) ಟೀಕೆ ಮಾಡಿರುವ ಬಿಜೆಪಿ, “ಕಾಂಗ್ರೆಸ್ಸಿಗರ ಪೊಲಿಟಿಕಲ್ ಸ್ಟಂಟ್ ಜನಸ್ಪಂದನೆಗೆ ಜನರ ವೇದನೆಯೇ ಉತ್ತರ” ಎಂದು ಬರೆದುಕೊಂಡಿದೆ. ಅಲ್ಲದೇ, …

Read More »

ಯೋಧೆ ಪದ್ಮಶ್ರೀಗೆ ನಾಗರಿಕ ಸನ್ಮಾನ

ಪರಮಾನಂದವಾಡಿ: ‘ದೇಶಾಭಿಮಾನವೇ ನಮ್ಮ ಸೈನಿಕರಿಗೆ ಧೈರ್ಯ, ಶೌರ್ಯ ತುಂಬುತ್ತದೆ. ಹೀಗಾಗಿ ಸೈನಿಕರು ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡುವುದಕ್ಕೂ ಹಿಂದೆ ಸರಿಯುವುದಿಲ್ಲ. ಈ ದೇಶಾಭಿಮಾನ ಎಲ್ಲರಿಗೂ ಮಾದರಿ’ ಎಂದು ಮುಖಂಡ ಬಸವರಾಜ ಸನದಿ ಹೇಳಿದರು. ರಾಯಬಾಗ ತಾಲ್ಲೂಕಿನ ಪ್ರಥಮ ಮಹಿಳಾ ಯೋಧರಾದ ಪದ್ಮಶ್ರೀ ಸಂಜು ವಾಳಕೆ ಅವರು ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು, ರಾಷ್ಟ್ರಪತಿ ಅವರಿಂದ ಗೌರವ ಪ್ರಶಸ್ತಿ ‍‍‍ಪಡೆದ ಕಾರಣ, ಗ್ರಾಮದಲ್ಲಿ ಗುರುವಾರ …

Read More »

ಮತ್ತೆ ಮೋದಿ ಸರ್ಕಾರ ಪಕ್ಕಾ! ‘ಇಂಡಿಯಾ’ ಕೂಟಕ್ಕೆ ಸೋಲೇ ಗತಿ?

ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election) ಪೂರ್ವ ಸಮೀಕ್ಷೆಗಳ ವರದಿ ಹೊರಬಿದ್ದಿದ್ದು, ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಿಗುವ (Win for NDA) ಸಾಧ್ಯತೆ ಗೋಚರಿಸಿದೆ(Lok Sabha Pre Poll Survey). ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಟೈಮ್ಸ್‌ನೌ ಹಾಗೂ ಇಂಡಿಯಾ ಟುಡೆ- ಸಿ ವೋಟರ್‌ ನಡೆಸಿದ ಪ್ರತ್ಯೇಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಉತ್ತರ …

Read More »

ಸಿಲ್ಲಿವಿಚಾರ ಬಿಟ್ಟು ಬಡತನ.. ನಿರುದ್ಯೋಗದ ಬಗ್ಗೆ ಮಾತಾಡಿ: ಸಿಎಂ ಕಿಡಿ

ಬೆಂಗಳೂರು: ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯದ ಕುರಿತು ಜನಸ್ಪಂದನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು. ಈ ದೇಶದ ಬಡವರ ಬಗ್ಗೆ, ಬೆಲೆ ಏರಿಕೆ, ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ …

Read More »

ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು: ಧ್ವನಿ ಎತ್ತಿದ ಬಿಜೆಪಿ ಶಾಸಕ ಹರೀಶ್ ಪೂಂಜಾ

ಮಂಗಳೂರು, : ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡಿತ್ತಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಇದು ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ(Harish Poonja)ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. “ಈ ಆರ್ಥಿಕ ವರ್ಷದಿಂದ ಹಿಂದೂಗಳು ಕಟ್ಟಿರುವ …

Read More »

ಈ-ಮೇಲ್ ಮೂಲಕವೂ ವಿವಾಹ ನೋಂದಣಿ ಸೇರಿದಂತೆ ಇಂದಿನ ಸಚಿವ ಸಂಪುಟದ ತೀರ್ಮಾನಗಳು

ಬೆಂಗಳೂರು,: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್​ಕೆ ಪಾಟೀಲ್​, ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ ನೀಡಿದ್ದು, ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. 45% ನಷ್ಟು ಮೇಲ್ಮಟ್ಟದ ಹುದ್ದೆಗಳು ಇನ್ನೂ ಖಾಲಿ ಇವೆ. ಅದನ್ನು ಭರ್ತಿ ಮಾಡಲು ಕ್ಯಾಬಿನೆಟ್​ನಿಂದ ತೀರ್ಮಾನ ಮಾಡಲಾಗಿದೆ. ಕೆಎಎಸ್​ (ಸೂಪರ್ ಟೈಮ್ ಸ್ಕೇಲ್) ಮತ್ತು ಕೆಎಎಸ್ (ಆಯ್ಕೆ ಶ್ರೇಣಿ) …

Read More »

ಅಂಗನವಾಡಿ ಮಕ್ಕಳ ದಣಿವು ತಣಿಸಲು ನೀರು ಸಿಗುವವರೆಗೂ ಬಾವಿ ತೋಡುವೆ:ಏಕಾಂಗಿ ಮಹಿಳೆ ಗೌರಿ

ಜನವರಿ 30 ನೇ ತಾರೀಕಿನಿಂದ ಗೌರಿ ನಾಯ್ಕ ಅವರು ಏಕಾಂಗಿ ಪ್ರಯತ್ನದಿಂದ ಇದೀಗ 15 ಅಡಿಗೂ ಹೆಚ್ಚು ಆಳ ಬಾವಿ ತೋಡಿದ್ದಾರೆ. ಎಲ್ಲಿಯವರೆಗೆ ಬಾವಿಯಲ್ಲಿ ಗಂಗೆ ಬರುವುದಿಲ್ಲವೂ ಅಲ್ಲಿಯವರೆಗೂ ಬಾವಿ ತೋಡುವ ಕೆಲಸ ಮಾಡಿ ಗಂಗೆ ತರಿಸುವ ಛಲದಲ್ಲಿದ್ದಾರೆ ಈ ಗೌರಿ. ಆ ಮಹಿಳೆ (Sirsi woman) ಜಮೀನಿನಲ್ಲಿ ನೆಟ್ಟಿದ ಅಡಿಕೆ ಮರಕ್ಕೆ ನೀರು ಹಾಯಿಸಲು, ಏಕಾಂಗಿಯಾಗಿ ಬಾವಿ ತೊಡಿ ಅಡಿಕೆ ಮರಗಳನ್ನು ಉಳಿಸಿ, ಅನೇಕರು ನಿಬ್ಬೆರಗಿಸುವಂತೆ ಮಾಡಿದ್ದರು. ಸದ್ಯ …

Read More »

ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ

ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ಮೂಡಲಗಿಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದ ಚರ್ಚ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ ಚರ್ಚ್ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನ ದಾನ ಮಾಡಿದ ಮರೆಪ್ಪ ಮರೆಪ್ಪಗೋಳ ದಂಪತಿ   ಮೂಡಲಗಿ- ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ ಚರ್ಚ ನಿರ್ಮಾಣಕ್ಕೆ ೧೭ …

Read More »

ರಾಯಚೂರಿನಲ್ಲಿ ಪತ್ತೆಯಾದ ವಿಗ್ರಹಗ ಪುರಾತತ್ವ ಇಲಾಖೆ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ

ರಾಯಚೂರು, : ಮೊನ್ನೆಯಷ್ಟೇ ರಾಯಚೂರು ಹಾಗೂ ತೆಲಂಗಾಣ ಗಡಿ ಭಾಗದ ಕೃಷ್ಣಾ ನದಿ ಒಡಲಿನಲ್ಲಿ ಐತಿಹಾಸಿ ವಿಗ್ರಹಗಳು ಪತ್ತೆಯಾಗಿದ್ದವು. ರಾಯಚೂರು ತಾಲ್ಲೂಕಿನ ದೇವಸುಗುರು(Devarsugur) ಗ್ರಾಮ ಹಾಗೂ ಸುತ್ತಲಿನ ಜನ ಸಖತ್ ಖುಷ್ ಆಗಿದ್ದರು. ಜೊತೆಗೆಐತಿಹಾಸಿಕ ವಿಗ್ರಹಗಳು(Idols) ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಒಂದೊಂದು ರೀತಿಯ ಐತಿಹಾಸಿಕ ವೈಶಿಷ್ಟ್ಯವಿರುವ ಬಗ್ಗೆ ಇತಿಹಾಸ ತಜ್ಞರು ಹೇಳಿದ್ದು, ಈ ವಿಗ್ರಹಗಳು 11 ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, …

Read More »

ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ

ಬೆಂಗಳೂರು, : ಕರ್ನಾಟಕದಲ್ಲಿ ಹುಕ್ಕಾ ಬಾರ್ (Hookah Bar) ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ (Karnataka Health and Family Welfare department) ಆದೇಶ ಹೊರಡಿಸಿದೆ. ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾಧಭರಿತ, ಸ್ವಾಧರಹಿತ ಮೇಲಾಸಿಸ್ , ಶಿಶಾ ಹಾಗೂ ಇದೇ ಮಾದರಿಯ ಇನಿತ್ತರ ಹೆಸರುಗಳಿಂದ ಕರೆಯುವ ಹುಕ್ಕಾ ಉತ್ಪನ್ನ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹುಕ್ಕಾ ಬಾರ್‌ಗಳ …

Read More »