ಕೊಪ್ಪಳ, ಫೆಬ್ರವರಿ 11: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ದಿಗಾಗಿ ಪ್ರತಿವರ್ಷ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಸರ್ಕಾರ ನೀಡಿರುವ ಹಣದಲ್ಲಿ ಸರಿಯಾಗಿ ಕಾಮಗಾರಿಗಳನ್ನು ಮಾಡಿದ್ದರೆ, ಅನೇಕ ನಗರಗಳು ಅಭಿವೃದ್ದಿಯಾಗುತ್ತಿದ್ದವು. ಗಂಗಾವತಿ (Gangavati) ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ ನೂರಾರು ಕೋಟಿ ಹಣ ಜಾರಿಯಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಳಪೆ ಕಾಮಾಗರಿ ಮಾಡಿ, ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ …
Read More »ಅಮಿತ ಶಾ ರಿಗೆ ಶ್ರೀಗಂಧದಲ್ಲಿ ಕೆತ್ತನೆ ಮಾಡಿದ ಚಾಮುಂಡೇಶ್ವರಿ ದೇವಿಯ ವಿಗ್ರಹನೀಡಿದ ಸುತ್ತೂರು ಶ್ರೀ
ಮೈಸೂರು, ಫೆ.11: ಕೇಂದ್ರ ಗೃಹ ಸಚಿವಅಮಿತ್ ಶಾ (Amit Shah)ಅವರು ಮೈಸೂರು ಜಿಲ್ಲೆಯ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದರು. ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಅಮಿತ್ ಶಾ ಅವರಿಗೆ ಶ್ರೀಗಂಧದಲ್ಲಿ ಕೆತ್ತನೆ ಮಾಡಿದ ಚಾಮುಂಡೇಶ್ವರಿ ದೇವಿಯ ವಿಗ್ರಹ ಹಾಗೂ ಅಮಿತ್ ಶಾ ಭಾವಚಿತ್ರ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೂ ಮುನ್ನ ಅಮಿತ್ ಶಾ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
Read More »ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್ಗಳು
ಯಾದಗಿರಿ, : ಕಾಡು ಪ್ರಾಣಿಗಳ (Wild Animals) ಹಾವಳಿಯಿಂದ ಬೆಳೆ ರಕ್ಷಣೆ ಮಾಡಲು ಯಾದಗಿರಿ ಜಿಲ್ಲೆಯ ರೈತರು (Yadgir Farmers) ಬಿಯರ್ ಬಾಟಲ್ಗಳು ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳ ಮೊರೆ ಹೋಗಿದ್ದಾರೆ! ಕಾಡು ಹಂದಿ ಹಾಗೂ ಹಕ್ಕಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಖಾಲಿ ಬಿಯರ್ ಬಾಟಲ್ಗಳ ಮೊರೆ ಹೋಗಿದ್ದಾರೆ. ಅಷ್ಟೇ ಯಾಕೆ ಬಿಸಾಡುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನೂ ಬಳಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯ ರೈತರು ಕೂಡ ಹೆಚ್ಚಾಗಿ ಬಿಳಿ …
Read More »ಪಟ್ಟಾ ಜಮೀನು ಪರಭಾರೆ ಅವ್ಯವಹಾರ: ತನಿಖೆಗೆ ಸೂಚನೆ
ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಐತಿಹಾಸಿಕ ಜಲದುರ್ಗ ಜಹಗೀರಿ ಪಟ್ಟಾ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಪರಭಾರೆ ಮಾಡುತ್ತಿರುವ ಕುರಿತಂತೆ ಪ್ರಜಾವಾಣಿ ಸರಣಿ ವರದಿ ಆಧರಿಸಿ ಅವ್ಯವಹಾರ ತನಿಖೆ ನಡೆಯಿಸಿ ತಿಂಗಳಲ್ಲಿ ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಸೂಚಿಸಿದ್ದಾರೆ. ‘ಜಹಗೀರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ’ ಹಾಗೂ ‘ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ …
Read More »ವಾ.ಕ.ರ.ಸಾ ಸಂಸ್ಥೆʼಯ ಧಾರವಾಡ ಘಟಕದಲ್ಲಿ ʻQRʼ ಕೋಡ್ ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಜಾರಿ
ಧಾರವಾಡ : , 2024 ರಿಂದ ಜಾರಿಗೆ ಬರುವಂತೆ ವಾ.ಕ.ರ.ಸಾ ಸಂಸ್ಥೆಯ ಧಾರವಾಡ ಘಟಕದ ಅನುಸೂಚಿಗಳ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ನೀಗಿಸುವ ಹಾಗೂ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಿ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಯು.ಪಿ.ಆಯ್ ಮುಖಾಂತರ ಕ್ಯೂ.ಆರ್ ಕೋಡ್ ಬಳಸಿ ಟಿಕೇಟ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಮುಂಬರುವ ಕೆಲವೇ ದಿನಗಳಲ್ಲಿ ವಿಭಾಗದ ವ್ಯಾಪ್ತಿಯ ಘಟಕಗಳಾದ ಸವದತ್ತಿ, ರಾಮದುರ್ಗ, ಹಳಿಯಾಳ, ದಾಂಡೇಲಿಯಲ್ಲಿಯೂ ಸಹ ಈ ವ್ಯವಸ್ಥೆ …
Read More »ವೈಫಲ್ಯಗಳನ್ನು ಮುಚ್ಚಿಹಾಕಲು ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೊಸ ನಾಟಕ: ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಅಭಿವೃದ್ಧಿಶೂನ್ಯ ಸರಕಾರವನ್ನು ನಾವು ನೋಡುತ್ತಿದ್ದೇವೆ; ಇದು ನಿಜಕ್ಕೂ ದುರದೃಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು. ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೊಸ ನಾಟಕವನ್ನು ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಿದರು. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ …
Read More »ಸಂಸತ್ನಲ್ಲಿ ನಿರ್ಮಲಾ ಸೀತಾರಾಮನ್ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ: ಪರಮೇಶ್ವರ್
ಬೆಂಗಳೂರು, ಅನುದಾನದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ವಿಚಾರವಾಗಿಬಿಜೆಪಿ-ಕಾಂಗ್ರೆಸ್ನಡುವೆ ಆರೋಪ-ಪ್ರತ್ಯಾರೋಪಗಳ ನಡುವೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಅಂಕಿ-ಅಂಶಗಳ ಮೂಲಕ ಕಾಂಗ್ರೆಸ್ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ರಾಜ್ಯ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ (Dr.G.Parameshwar), ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಕೇಂದ್ರದಿಂದ ಒಂದೇ ಒಂದು ರೂಪಾಯಿ ನಮಗೆ …
Read More »ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ
ಮೈಸೂರು, : ಜಿಲ್ಲೆಗೆ ಕೇಂದ್ರ ಗೃಹ ಸಚಿವುಅಮಿತ್ ಶಾ (Amit Shah)ಆಗಮನ ಹಿನ್ನೆಲೆ ಮೈಸೂರು ಕಾಂಗ್ರೆಸ್ (Congress) ಘಟಕದಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಮೈಸೂರು (Mysuru) ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ “ನನ್ನ ತೆರಿಗೆ ನನ್ನ ಹಕ್ಕು” ಘೋಷಣೆಯೊಂದಿಗೆ “ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?” ಎಂಬ ಪ್ರಶ್ನೆಯೊಂದಿಗೆ ಪೋಸ್ಟರ್ ಅಭಿಯಾನ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಅಮಿತ್ ಶಾ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಲು …
Read More »ಶ್ರೀರಾಮನನ್ನು ನಾನೂ ಗೌರವಿಸುತ್ತೇನೆ: ಓವೈಸಿ
ಹೊಸದಿಲ್ಲಿ: ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಸರ್ಕಾರ ಒಂದು ಸಮುದಾಯದ್ದೇ ಅಥವಾ ಒಂದು ಧರ್ಮಕ್ಕೆ ಸೇರಿದ್ದೇ ಅಥವಾ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಎಐಎಂಐಎಂ (AIMIM) ಸಂಸದ (MP) ಅಸಾದುದ್ದೀನ್ ಓವೈಸಿ (Asaduddin Owaisi) ಪ್ರಶ್ನಿಸಿದರು. ಲೋಕಸಭೆಯಲ್ಲಿ(lok sabha) ಶನಿವಾರ ಮಾತನಾಡಿದ ಅವರು ಐತಿಹಾಸಿಕ ಅಯೋಧ್ಯೆ (ayodhya) ರಾಮ ಮಂದಿರ (ram mandir) ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾ ಕುರಿತು …
Read More »ಹಟ್ಟಿ ಚಿನ್ನದ ಗಣಿ ನಿಗಮ ಮಂಡಳಿ ನೀಡಿದ್ದಕ್ಕೆ ಅಸಮಾಧಾನ; ಅಧಿಕಾರ ವಹಿಸಿಕೊಳ್ಳದ ಶಾಸಕ ಜೆ.ಟಿ.ಪಾಟೀಲ್
ಬಾಗಲಕೋಟೆ, : ನಿಗಮ ಮಂಡಳಿ ಅಧಿಕಾರ ವಹಿಸಿಕೊಳ್ಳದೆ ಕಾಂಗ್ರೆಸ್ ಶಾಸಕ ಜೆ.ಟಿ.ಪಾಟೀಲ್ (JT Patil) ಅವರು ಹಟ್ಟಿ ಚಿನ್ನದ ಗಣಿ ನಿಗಮ (Hutti Gold Mines Corporation) ನೀಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿಗಮ ಮಂಡಳಿ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲು ತಟ್ಟಿಲ್ಲ. ನಾನಿನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ಮುಖ್ಯಮಂತ್ರಿಸಿದ್ದರಾಮಯ್ಯ(Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಬೇಕಿದೆ. ಇಬ್ಬರು ನಾಯಕರನ್ನು ಭೇಟಿಯಾಗಿ ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಮೊನ್ನೆ ದೆಹಲಿಯಲ್ಲಿ ಭೇಟಿಯಾಗಿದ್ದ ವೇಳೆ …
Read More »