ಬೆಂಗಳೂರು, ಫೆ.23- ಪ್ಲಾಸ್ಟಿಕ್ ಗೋದಾಮಿನಲ್ಲಿ ಇಂದು ಮುಂಜಾನೆ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲೇ ಇದ್ದ ಪಾರ್ಕಿಂಗ್ ಸ್ಥಳಕ್ಕೆ ವ್ಯಾಪಿಸಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಸುಮಾರು 30ರಿಂದ 35 ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಗೊಂಡನಹಳ್ಳಿಯ ಗೋದಾಮುವೊಂದರಲ್ಲಿ ಹಳೇ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಇದರ ಪಕ್ಕದಲ್ಲಿಯೇ ವಾಹನಗಳನ್ನು ರಾತ್ರಿ ವೇಳೆ ಪೇ- ಪಾರ್ಕಿಂಗ್ ಮಾಡಲಾಗುತ್ತಿತ್ತು. ಚಾಲಕರು ತಮ್ಮ ಮನೆಯ ಬಳಿ ವಾಹನಗಳನ್ನು ನಿಲ್ಲಿಸಲು …
Read More »ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ
ಬೆಂಗಳೂರು: ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು ಮಾಡಲಾಗಿದೆ. ₹1,726 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು. ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಕೇಂದ್ರ ಸರ್ಕಾರ ಕಾಮಗಾರಿಗಳ ಅನುಷ್ಠಾನಕ್ಕೆ ಜೂನ್-2024ರವರೆಗೆ ಅವಕಾಶ ನೀಡಿದೆ. ಎಲ್ಲ ಕಾಮಗಾರಿಗಳನ್ನೂ ನಾಲ್ಕು ತಿಂಗಳ ಒಳಗೆ ಅನುಷ್ಠಾನಗೊಳಿಸಲಾಗುವುದು ಎಂದರು. ಬರಗಾಲದಿಂದ ರಾಜ್ಯದಲ್ಲಿ 5.11 ಲಕ್ಷ ಎಕರೆ …
Read More »ಪರಿಶಿಷ್ಟರ ಅನುದಾನ ಅನ್ಯಕಾರ್ಯಕ್ಕೆ ಬಳಸಬೇಡಿ: ದಸಂಸ
ಚಿಕ್ಕೋಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಬಾರದು. ಪರಿಶಿಷ್ಟರಿಗೆ ನೀಡಿದ ಜಮೀನನ್ನು ಪರಭಾರೆ ಮಾಡಬಾರದು. ದೌರ್ಜನ್ಯ ತಡೆಗೆ ಪ್ರತಿಯಾಗಿ ಪ್ರಕರಣ ದಾಖಲಿಸಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಉಪ ವಿಭಾಗಾಧಿಕಾರಿ ಮಹೆಬೂಬಿ ಅವರಿಗೆ ಸಲ್ಲಿಸಿದರು. ಬಸವ ವೃತ್ತದ ಬಳಿಯಲ್ಲಿ ಕೆಲ ಕಾಲ ನಿಪ್ಪಾಣಿ- ಮುಧೋಳ ಹಾಗೂ ಸಂಕೇಶ್ವರ- …
Read More »ಚನ್ನಮ್ಮನ ಕಿತ್ತೂರು: ‘ನಾನೂ ರಾಣಿ ಚನ್ನಮ್ಮ’ ಸಮಾವೇಶ ಅಭಿಯಾನ
(ಬೆಳಗಾವಿ ಜಿಲ್ಲೆ): ಇಲ್ಲಿನ ಕೋಟೆ ಆವರಣದಲ್ಲಿ ದೇಶದ 75ಕ್ಕೂ ಹೆಚ್ಚು ಸಂಘಟನೆಗಳು ಬುಧವಾರ ಹಮ್ಮಿಕೊಂಡಿದ್ದ ‘ನಾನೂ ರಾಣಿ ಚನ್ನಮ್ಮ’ ರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ 15 ರಾಜ್ಯಗಳ ಮಹಿಳಾ ಮುಖಂಡರು ಭಾಗವಹಿಸಿ ಸ್ತ್ರೀಶಕ್ತಿ ಪ್ರದರ್ಶಿಸಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು. ‘ನಮ್ಮ ಭೂಮಿ ನಮ್ಮ ಹಕ್ಕು. ಅದನ್ನು ಪಡೆದೇ ತೀರುತ್ತೇವೆ. ಸಂವಿಧಾನ ರಕ್ಷಿಸಲು ನಾವು ಬದ್ಧರಾಗಿದ್ದೇವೆ. …
Read More »13,000 ಕೋಟಿ ವೆಚ್ಚದ 36 ರಾಷ್ಟ್ರೀಯ ಹೆದ್ದಾರಿ ಯೋಜನೆ ಉದ್ಘಾಟಿಸಿದ ಗಡ್ಕರಿ
ಬೆಳಗಾವಿ: ‘ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಗ್ರೀನ್ ಕಾರಿಡಾರ್ ನಿರ್ಮಿಸುವುದು ನಮ್ಮ ಆದ್ಯತೆ. ಇಂಥ ಹೆದ್ದಾರಿಗಳು ಪ್ರಯಾಣದ ಸಮಯ, ವೆಚ್ಚ ಕಡಿಮೆ ಆಗುವುದಲ್ಲದೇ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ನಗರದಲ್ಲಿ ಗುರುವಾರ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಅತ್ಯಂತ ಸಂಪದ್ಭರಿತವಾಗಿದೆ. ಹೀಗಾಗಿ, ಕೇಂದ್ರವು …
Read More »ನಿತಿನ್ ಗಡ್ಕರಿ ಹೆದ್ದಾರಿಗಳ ಬಾದ್‌ಶಹಾ:ಸತೀಶ ಜಾರಕಿಹೊಳಿ
ಬೆಳಗಾವಿ: ನಗರದಲ್ಲಿ ಗುರುವಾರ ನಡೆದ 36 ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದರು. ‘ನಿತಿನ್ ಗಡ್ಕರಿ ಅವರು ಹೆದ್ದಾರಿ ಸಚಿವರಾದ ಮೇಲೆ ಹೆದ್ದಾರಿಗಳ ಅಭಿವೃದ್ಧಿ ಪರ್ವ ಶುರುವಾಗಿದೆ. ಪಕ್ಷಾತೀತವಾಗಿ ಅವರು ಕೆಲಸ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆಬೇರೆ ಸರ್ಕಾರಗಳು …
Read More »ಮರಕ್ಕೆ ಕಾರು ಡಿಕ್ಕಿ: ಆರು ಮಂದಿ ಸ್ಥಳದಲ್ಲೇ ಸಾವು,
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೇನಕೊಪ್ಪದ ಹದ್ದಿನಲ್ಲಿ ಗುರುವಾರ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೂ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಧಾರವಾಡ ಹಾಗೂ ಹಾವೇರಿಯ ಎರಡು ಕುಟುಂಬದವರು ಈ ಕಾರಿನಲ್ಲಿದ್ದರು. ಧಾರವಾಡದವರಾದ ಕಾರ್ ಚಾಲಕ ಶಾರೂಖ್ ಪೆಂಡಾರಿ (30), ಇಕ್ಬಾಲ್ ಜಮಾದಾರ (50), ಹಾವೇರಿಯವರಾದ ಸಾನಿಯಾ ಲಂಗೋಟಿ (37), ಉಮ್ರಾ ಬೇಗಮ್ ಲಂಗೋಟಿ (17), ಶಬನಮ್ ಲಂಗೋಟಿ …
Read More »ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಲ್ಲ: ಸತೀಶ ಜಾರಕಿಹೊಳಿ
ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾಗೆ ಟಿಕೆಟ್ ನೀಡುವ ವಿಷಯ ಚರ್ಚೆಯಾಗಿದೆ. ಆದರೆ, ಟಿಕೆಟ್ ಕೊಡಲು ನಾವು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ‘ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಲಕ್ಷ್ಮಣರಾವ್ ಚಿಂಗಳೆ, ಗಜಾನನ ಬುಟಾಳಿ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ ಹೊರತು ನಮ್ಮ …
Read More »ಹೊಸ ರೇಶನ್ ಕಾರ್ಡಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ..!
ರಾಜ್ಯದ್ಯಂತ ತಾತ್ಕಾಲಿಕವಾಗಿ ಸದ್ಯಕ್ಕೆ ಸ್ಥಗಿತವಾಗಿರುವ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ(Ration card) ವಿವರಣೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ಗುರುವಾರ ವಿಧಾನಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಈ ಕುರಿತು ಸದನಕ್ಕೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದರೆ. ಬಹುತೇಕ ಕಳೆದ 8-10 ತಿಂಗಳಿನಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಯಾವುದೇ ಬಗ್ಗೆಯ ಹೊಸ ರೇಷನ್ ಕಾರ್ಡಅನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರಲ್ಲಿಲ್ಲ …
Read More »ರಾಮ ದೇವರೇ ಅಲ್ಲ, ಕೇವಲ ಒಬ್ಬ ಮನುಷ್ಯ ಎಂದ ಉಗ್ರಪ್ಪ!
ವಿಜಯನಗರ: ರಾಮ ದೇವರೇ ಅಲ್ಲ (Rama is not god), ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಮ ಭಕ್ತನೇ ಅಲ್ಲ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ (VS Ugrappa) ಅವರು ವಾಗ್ದಾಳಿ ನಡೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದುಗಳು ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಪೂಜಿಸುವ ಶ್ರೀರಾಮ ದೇವರಲ್ಲ, ದೇವರಲ್ಲ, ದೇವರಲ್ಲ ಎಂದ …
Read More »