ನವದೆಹಲಿ : ನವದೆಹಲಿ : ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸುತ್ತಿದ್ದು, ಲೋಕಸಭೆ ಚುನಾವಣಾಗೆ ದಿನಾಂಕವನ್ನ ಪ್ರಕಟಿಸಲಿದ್ದಾರೆ. ಇದರೊಂದಿಗೆ, ದೇಶಾದ್ಯಂತ ಮಾದರಿ ನೀತಿ ಸಂಹಿತೆ (MCC) ಸಹ ಜಾರಿಗೆ ಬರಲಿದೆ.ದೇಶದಲ್ಲಿ ನೀತಿ ಸಂಹಿತೆಯ ಇತಿಹಾಸ ಬಹಳ ಹಳೆಯದು. ಇದರ ಮೂಲವನ್ನ 1960ರ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಗುರುತಿಸಬಹುದು, ಆಗ ಆಡಳಿತವು ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆಯನ್ನ ರೂಪಿಸಲು ಪ್ರಯತ್ನಿಸಿತು. ಚುನಾವಣಾ ಆಯೋಗದ ಪ್ರಕಾರ, …
Read More »ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಸೇರಿಸೋದು ಹೇಗೆ? ಇಲ್ಲಿದೆ ವಿವರ
ನವದೆಹಲಿ(ಮಾ.16): 2024 ರ ಲೋಕಸಭಾ ಚುನಾವಣೆಗೆ ದೇಶದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಲೋಕಸಭೆ ಎಲೆಕ್ಷನ್ ದಿನಾಂಕ ಘೋಷಣೆಗೂ ಮುನ್ನವೇ ಎಲ್ಲಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಸಕ್ರಿಯಗೊಂಡಿವೆ. ಮತದಾನ ಎಂಬುದು ದೇಶದ ಪ್ರಜೆಯ ಮೂಲಭೂತ ಹಕ್ಕು. ಪ್ರತಿಯೊಬ್ಬ ಭಾರತೀಯ ತನ್ನ ಹಕ್ಕು ಚಲಾಯಿಸಬೇಕು.ನಿಮ್ಮ ಹಕ್ಕು ನೀವು ಚಲಾಯಿಸಬೇಕೆಂದರೆ ನಿಮ್ಮ ಹೆಸರು ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ದಾಖಲಾಗಿರಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಕೂಡಲೇ ನೀವು ಚುನಾವಣಾ ಆಯೋಗದ ಮತದಾರರ …
Read More »ಕೆಕೆಆರ್‌ಟಿಸಿ ಅಧ್ಯಕ್ಷರಾಗಿ ಎಂ.ವೈ. ಪಾಟೀಲ ನೇಮಕ
ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಾಗೂ ನೆರೆಯ ವಿಜಯಪುರ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರನ್ನಾಗಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರನ್ನು ನೇಮಕ ಮಾಡಿ ಶುಕ್ರವಾರ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಆ ಮೂಲಕ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಕಲಬುರಗಿ ಜಿಲ್ಲೆಗೆ ಸಿಂಹ ಪಾಲು ದೊರೆತಂತಾಗಿದೆ. ಹಿರಿಯ ಶಾಸಕರಾಗಿರುವ ಎಂ.ವೈ. ಪಾಟೀಲ ಅವರು ಸಚಿವ ಸ್ಥಾನದ …
Read More »ಬೇರೆ ಪಕ್ಷಕ್ಕೆ ಹೋಗುವುದಿಲ್ಲ: ಸಂಗಣ್ಣ ಕರಡಿ ಸ್ಪಷ್ಟನೆ
ಕೊಪ್ಪಳ: ನಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನ ಕೆಲವರು ನನ್ನ ಜೊತೆ ಸೌಜನ್ಯಕ್ಕಾಗಿ ಮಾತನಾಡಿದ್ದಾರೆ. ಆದರೆ ಪಕ್ಷ ಸೇರುವ ಬಗ್ಗೆ ಮಾತನಾಡಿಲ್ಲ. ನಾನು ಪಕ್ಷದಲ್ಲಿಯೇ ಇರುತ್ತೇನೆ. ಕೆಆರ್ಪಿಪಿ ಪಕ್ಷಕ್ಕೆ ಹೋಗುವೆ ಎನ್ನುವ ವಿಚಾರ ಎಲ್ಲವೂ ಊಹಾಪೋಹ. ನಾನು ಈಗಲೇ ಎಲ್ಲವೂ ನಿರ್ಧಾರ ಮಾಡಿಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೆ ಅವರಿಗೆ ಟಿಕೆಟ್ ತಪ್ಪಿದ ಬಳಿಕ ಬೆಂಬಲಿಗರು ಪಕ್ಷದ …
Read More »ಜಮೀನು ಮಾರಾಟದ ಹಣಕ್ಕಾಗಿ ತಂದೆಯನ್ನೇ ಕೊಂದ ಮಕ್ಕಳು
ಗದಗ: ಜಮೀನು ಮಾರಾಟದಿಂದ ಸಿಕ್ಕ ಹಣವನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಎಂಬ ವಿಚಾರಕ್ಕೆ ಮಕ್ಕಳೇ ತಂದೆಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ವಿವೇಕಾನಂದ ಕರಿಯಲ್ಲಪ್ಪ (65) ಕೊಲೆಯಾದ ವ್ಯಕ್ತಿ. ವಿವೇಕಾನಂದ ಅವರ ಮೊದಲನೇ ಪತ್ನಿ ಕಸ್ತೂರಿ ಅವರ ಮಕ್ಕಳಾದ ಮಲ್ಲೇಶ ಮತ್ತು ಪ್ರಕಾಶ ಆರೋಪಿಗಳು. ವಿವೇಕಾನಂದ ಅವರು ಪಿತ್ರಾರ್ಜಿತವಾಗಿ ಬಂದಿದ್ದ ಆರು ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ …
Read More »ತಮ್ಮ ಹೆಸರಿನ ರಸ್ತೆ ತಾವೇ ಉದ್ಘಾಟಿಸಿದ ಕೋವಿಂದ್!
ಹೊಸದಿಲ್ಲಿ: ರಾಷ್ಟ್ರಪತಿ ಭವನ ಎಸ್ಟೇಟ್‌ನಲ್ಲಿ ತಮ್ಮ ಹೆಸರಿನಲ್ಲಿ ನಿರ್ಮಿಸಲಾದ ರಸ್ತೆಯನ್ನು ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ತಾವೇ ಖುದ್ದಾಗಿ ಲೋಕಾರ್ಪಣೆಗೊಳಿಸಿದ್ದಾರೆ. ತಮ್ಮ ನೇತೃತ್ವದ ಸಮಿ ತಿಯ “ಒಂದು ದೇಶ, ಒಂದು ಚುನಾವಣೆ’ ವರದಿ ಯನ್ನು ರಾಷ್ಟ್ರಪತಿಗೆ ಹಸ್ತಾಂತರಿಸಲು ಕೋವಿಂದ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. “ಅನಿರೀಕ್ಷಿತವಾದ ಈ ಘಟನೆ ನನ್ನ ಪಾಲಿನ ವಿಧಿ ಆಗಿದ್ದಿರಬಹುದು. ಅಚ್ಚರಿಯ ಅವಕಾಶವನ್ನು ನೀಡಿದ ರಾಷ್ಟ್ರಪತಿ ಭವನಕ್ಕೆ ಕೃತಜ್ಞ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Read More »PSI ಹಗರಣ ಎಸ್‌ಐಟಿ ತನಿಖೆಗೆ: ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನ
ಬೆಂಗಳೂರು: ಲೋಕಸಭಾ ಚುನಾ ವಣೆಯ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಮತ್ತೂಂದು ತನಿಖಾಸ್ತ್ರ ಬಳಕೆಗೆ ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಪಿಎಸ್‌ಐ ನೇಮಕ ಹಗರಣದ ಬಗ್ಗೆ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚಿಸಿ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಿಎಂ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವೂ ಸೇರಿ ಒಟ್ಟು 48 ವಿಷಯಗಳಿಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕಂದಾಯ …
Read More »ಮಾರ್ಚ್ 16ಕ್ಕೆ ಬಹು ನಿರೀಕ್ಷಿತ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ
ನವದೆಹಲಿ: ದೇಶದ ಜನರು ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಲೋಕ ಸಭಾ ಚುನಾವಣೆಗೆ ದಿನಾಂಕ ನಿಗದಿಗೊಳಿಸುವ ಸಮಯ ಹತ್ತಿರ ಬಂದಿದೆ. ಹೌದು ಬಹುನಿರೀಕ್ಷಿತ ಲೋಕಸಭಾ ಚುನಾವಣೆಗೆ ನಾಳೆ( ಮಾರ್ಚ್ 16) ಮಧ್ಯಾಹ್ನ ದಿನಾಂಕ ಘೋಷಣೆ ಮಾಡಲಾಗುವುದೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಹೊಸದಾಗಿ ಚುನಾಯಿತ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ನಾಳೆ ಮಧ್ಯಾಹ್ನ 3 ಗಂಟೆಗೆ ದೆಹಲಿಯ ವಿಜ್ಞಾನ …
Read More »ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ’ ಬಿಗ್ ರಿಲೀಫ್
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ಅಪೆಕ್ಸ್ ಬ್ಯಾಂಕ್ ಸಾಲ ಮರುಪಾವತಿ ಮಾಡದೇ ವಂಚನೆ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಿದೆ. ಅದೇ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದಂತೆ ಹೈಕೋರ್ಟ್ ಸಿಐಡಿಗೆ ಸೂಚಿಸಿದೆ. ಇಂದು ಅಪೆಕ್ಸ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಎಸ್ಪಿಪಿ ಬ್ಯಾತ ಎನ್ ಜಗದೀಶ್ ಅವರು ರಮೇಶ್ ಜಾರಕಿಹೊಳಿಯವರು ಸಿಐಡಿ ನೋಟಿಸ್ …
Read More »ಪ್ರಧಾನಿ ಮೋದಿ ರೋಡ್ ಶೋ’ಗೆ ಅನುಮತಿ ನಿರಾಕರಣೆ
ಕೊಯಮತ್ತೂರು : ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ರೋಡ್ ಶೋಗೆ ತಮಿಳುನಾಡಿನ ಕೊಯಮತ್ತೂರು ಆಡಳಿತ ಅನುಮತಿ ನಿರಾಕರಿಸಿದೆ. ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು, ಮಾರ್ಚ್ 18 ರಂದು ಪ್ರಧಾನಿ ಮೋದಿಯವರ 3.6 ಕಿ.ಮೀ ಉದ್ದದ ರೋಡ್ ಶೋ ನಡೆಸಲು ಅನುಮತಿ ಕೋರಿ ಭಾರತೀಯ ಜನತಾ ಪಕ್ಷ ಗುರುವಾರ ಕೊಯಮತ್ತೂರು ನಗರ ಪೊಲೀಸರಿಗೆ ಜ್ಞಾಪಕ ಪತ್ರವನ್ನ ಸಲ್ಲಿಸಿತ್ತು. ಕೊಯಮತ್ತೂರು ಆಡಳಿತವು ವಿವಿಧ ಕಾರಣಗಳನ್ನ ನೀಡಿ ಅನುಮತಿ ನಿರಾಕರಿಸಿದೆ. ಮೂಲಗಳ ಪ್ರಕಾರ, ಅನುಮತಿ …
Read More »
Laxmi News 24×7