Breaking News

ರಾಷ್ಟ್ರೀಯ

ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!

ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ. ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು.   ‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು …

Read More »

ಜಗದೀಶ್ ಶೆಟ್ಟರ್‌ ಮುಂದೆ ಸವಾಲುಗಳ ಸಾಲು…

ಬೆಳಗಾವಿ: ಸಂಸದ ಜಗದೀಶ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಜನ ‘ಮನೆಯ ಸದಸ್ಯ’ ಎಂದು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕವೇ ಅವರು ಈ ಮಾತಿಗೆ ‘ಠಸ್ಸೆ’ ಹೊಡೆಯಬೇಕಿದೆ. ‘ಬೆಳಗಾವಿಯಲ್ಲಿ ಶೆಟ್ಟರ್‌ಗೆ ಅಡ್ರೆಸ್ಸೇ ಇಲ್ಲ’ ಎಂಬ ಆರೋಪಕ್ಕೆ, ‘ಬೀಗರ ಮನೆಗೆ ಬಂದಿದ್ದೀರಿ ಶೆಟ್ಟರೇ, ಉಂಡು ವಾಪಸ್‌ ಹೋಗಿ’ ಎಂಬ ಮೂದಲಿಕೆಗೆ, ‘ಬೆಳಗಾವಿಗೆ ಮೋಸ ಮಾಡಿದವರಿಗೆ ಮತ ಕೊಡಬೇಕೆ?’ ಎಂಬ ಪ್ರಶ್ನೆಗಳಿಗೆ ಮತದಾರ ಈಗ ಉತ್ತರ ಕೊಟ್ಟಿದ್ದಾನೆ. ಶೆಟ್ಟರ್‌ ರಾಜಕೀಯ ಹೆಜ್ಜೆಯೊಂದನ್ನು …

Read More »

3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಇಂದು 3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ, 2014 ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಯದಲ್ಲಿ ಹೇಗೆ ಕಾಣ್ತಾ ಇದ್ರು? ಇಂದು ಯಾವ ರೀತಿ ಕಂಡರು? ಬನ್ನಿ ನೋಡೋಣ. 2014ರ …

Read More »

ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಪರಾರಿಯಾದ ಯುವಕ,

ಮೈಸೂರು, ಜೂನ್.09: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ವಂಚನೆ (Cheat) ಮಾಡಿರುವ ಆರೋಪ ಮೈಸೂರಿನ (Mysuru) ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಕೇಳಿ ಬಂದಿದೆ. 25 ವರ್ಷದ ಯುವಕ 34 ವರ್ಷದ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ. ಮಹಿಳೆ ಗರ್ಭಿಣಿಯಾಗಿದ್ದು ಯುವಕ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ 2018ರಲ್ಲಿ ಪತಿಯಿಂದ ವಿಚ್ಛೇದನ ಪಡೆದು …

Read More »

ಇಂದೇ ನರೇಂದ್ರ ಮೋದಿ ಪ್ರಮಾಣ ವಚನ ಯಾಕೆ

ಬೆಂಗಳೂರು, ಜೂನ್‌ 09: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಭಾರತದ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಇಂದು ಜೂನ್‌ 09 ಭಾನುವಾರ ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಿರುವ ಇಂದಿನ ದಿನ ಹೇಗಿದೆ. ಜೋತಿಷ್ಯದ ಪ್ರಕಾರ ಇಂದಿನ ದಿನ ವಿಶೇಷ ಹೇಗಿದೆ ಎನ್ನುವುದರ ಬಗ್ಗೆ ವಿವರಣೆ ಇಲ್ಲಿದೆ ಓದಿ. ದೇಶದ ಪ್ರಧಾನಿ …

Read More »

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ದರ ದುಬಾರಿ

ನ್ಯೂಯಾರ್ಕ್‌: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಮುಖಾಮುಖೀಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಪಂದ್ಯದ ಟಿಕೆಟ್‌ ಬೆಲೆ ದುಬಾರಿಯಾಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯಕ್ಕೆ ಐಸಿಸಿ ಜಾಹೀರಾತು ಪ್ರಕಟಿಸಿದ ಬೆನ್ನಲ್ಲೇ 20 ಲಕ್ಷಕ್ಕೂ ಅಧಿಕ ಜನರಿಂದ ಟಿಕೆಟ್‌ಗೆ ಬೇಡಿಕೆ ಬಂದಿತ್ತು. ಹೀಗಾಗಿ ಎಲ್ಲರಿಗೂ ಟಿಕೆಟ್‌ ಒದಗಿಸುವುದು ಕಷ್ಟವಾಯಿತು ಎಂದು ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಈ ಪಂದ್ಯಕ್ಕೆ 300 ಡಾಲರ್‌ (25,000 ರೂ.) ಟಿಕೆಟ್‌ ಕೂಡ ಇದೆ. …

Read More »

NDA ಸಂಚಾಲಕ ಹುದ್ದೆಗೆ TDP ಬೇಡಿಕೆ?: ಬಿಜೆಪಿಯಲ್ಲಿ ಟೆನ್ಶನ್, ಇಕ್ಕಟ್ಟಿನ ಪರಿಸ್ಥಿತಿ!

ನವದೆಹಲಿ: ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗುತ್ತಿದ್ದಂತೆ ಬಿಜೆಪಿ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಟಿಡಿಪಿ ಎನ್ ಡಿಎ ಸಂಚಾಲಕ ಹುದ್ದೆಗೆ ಬೇಡಿಕೆ ಮುಂದಿಡುತ್ತಿದೆ ಎಂಬ ಮಾತುಗಳು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇದು ಬಿಜೆಪಿಗೆ ತಲೆನೋವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎನ್‌ಡಿಎ ಸಂಚಾಲಕ ಸ್ಥಾನಕ್ಕಾಗಿ ಟಿಡಿಪಿ ಬಿಜೆಪಿ ಮುಂದೆ ಬೇಡಿಕೆಯಿಟ್ಟಿದೆ ಎಂಬುದು ಮೂಲಗಳನ್ನು ಆಧರಿಸಿದ ಮಾಧ್ಯಮ ವರದಿ. ಟಿಡಿಪಿ ಲೋಕಸಭೆ ಸ್ಪೀಕರ್ ಅಥವಾ ಎನ್‌ಡಿಎ …

Read More »

ಬೆಂಗಳೂರಲ್ಲಿ ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕ ಸಾವು

ಬೆಂಗಳೂರು: ಸಂಪಂಗಿ ರಾಮನಗರದಲ್ಲಿ ವೈದ್ಯರೊಬ್ಬರು ಮಾಡಿದಂತ ಎಡವಟ್ಟಿಗೆ 7 ವರ್ಷದ ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ್ದಂತ ಘಟನೆ ನಡೆದಿದೆ. ಬೆಂಗಳೂರಿನ ಸಂಪಂಗಿ ರಾಮನಗರದ 7 ವರ್ಷದ ಬಾಲಕ ಆಡನ್ ಮೈಕಲ್ ಎಂಬಾತನಿಗೆ ಊಟ ಮಾಡುವಂತ ಸಂದರ್ಭದಲ್ಲಿ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸಿಂಧ್ಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಡನ್ ಮೈಕಲ್ ಪರೀಕ್ಷೆ ಮಾಡಿದಂತ ವೈದ್ಯರು, ಆಪರೇಷನ್ ಮಾಡಬೇಕು ಅಂತ ಹೇಳಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಸಿಂಧ್ಯಾ ಆಸ್ಪತ್ರೆಯ ಡಾ.ಶ್ವೇತಾ …

Read More »

ಹೊಸದಾಗಿ ಆಯ್ಕೆಯಾದ 251 ಸಂಸದರಿಗೆ ಕ್ರಿಮಿನಲ್ ನಂಟು: ಎಡಿಆರ್ ವರದಿ

ನವದೆಹಲಿ: ಹೊಸದಾಗಿ ಆಯ್ಕೆಯಾದ 543 ಲೋಕಸಭಾ ಸದಸ್ಯರಲ್ಲಿ 251 (ಶೇ 46) ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದವರು ಸೇರಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ (ಎಡಿಆರ್) ವರದಿ ಮಾಡಿದೆ. 2019ರಲ್ಲಿ 233 (ಶೇ 43), 2014ರಲ್ಲಿ 185 (ಶೇ 34 ), 2009ರಲ್ಲಿ 162 (ಶೇ 30) ಮತ್ತು 2004ರಲ್ಲಿ 125 (ಶೇ 23 ) ಸಂಸದರ ವಿರುದ್ಧ …

Read More »

BREAKING: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಜೂನ್.12ಕ್ಕೆ

ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರ ಪ್ರಮಾಣವಚನವನ್ನು ಜೂನ್ 12 ಕ್ಕೆ ಮುಂದೂಡಲಾಗಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಜೂನ್ 8 ರಂದು ನಿಗದಿಯಾಗಿರುವ ಪ್ರಧಾನಿ ಮೋದಿ ಮತ್ತು ಎನ್ಡಿಎ ಕ್ಯಾಬಿನೆಟ್ ಪ್ರಮಾಣವಚನ ಸಮಾರಂಭದಿಂದಾಗಿ ನಾಯ್ಡು ಅವರ ಸಮಾರಂಭವನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ಮತ್ತು ಇತರ ಹಿರಿಯ ಎನ್ಡಿಎ ನಾಯಕರು ಮೆಗಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಜೂನ್ 6 ರ ಗುರುವಾರ, …

Read More »