ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ: ಸಚಿವ ಎಂ.ಬಿ ಪಾಟೀಲ್ ಬೆಂಗಳೂರು: ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭಾರೀ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು. ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ …
Read More »ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ: ಅಭಯ ಪಾಟೀಲ ಆರೋಪ
ಬೆಳಗಾವಿ: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ಮೇವು ವಿತರಣೆಗೆ ನಿರ್ಧರಿಸಿತ್ತು. ಆದರೆ ದಾಖಲೆಯಲ್ಲಷ್ಟೇ ಮೇವು ವಿತರಿಸಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಲಾಗಿದೆ. ಮೇವಿನಲ್ಲಿ ಹಣ ತಿನ್ನುವ ಅಧಿ ಕಾರಿಗಳು ಮತ್ತು ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಇನ್ನು ಮುಂದೆ ಎಲ್ಲ ಹಗರಣಗಳು ಹೊರಗೆ ಬರಲಿವೆ. ಸಿಎಂ …
Read More »ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಯೋಗಭ್ಯಾಸ
ಆನಂದಪುರ: ಯೋಗವನ್ನು ಚಿಕ್ಕವಯಸ್ಸಿನಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದರಿಂದ ಬಹಳಷ್ಟು ಅನುಕೂಲಗಳಿವೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಈಶ್ವರಪ್ಪ ಹೇಳಿದರು. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯೋಗ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಯೋಗದಿಂದ ಸಕಲವೂ ಸಾಧಿಸಬಹದು. ಇದನ್ನು ವಿದ್ಯಾರ್ಥಿಗಳು ದಿನನಿತ್ಯ ಮನೆಯಲ್ಲಿ ಮಾಡಬೇಕು ಎಂದು ಹೇಳಿದರು.
Read More »ಈ ಬಾರಿ ‘ಪಂಚಘಾತಕ’ಗಳು ಸಂಭವಿಸಲಿವೆ: ‘ಕೋಡಿಮಠ ಶ್ರೀ’ ಶಾಕಿಂಗ್ ಭವಿಷ್ಯ |
ಚಿಕ್ಕಬಳ್ಳಾಪುರ: ರಾಜ್ಯ, ದೇಶದಲ್ಲಿ ಈ ಬಾರಿ ಪಂಚಘಾತಕಗಳು ಸಂಭವಿಸಲಿದ್ದಾವೆ. ಇವುಗಳನ್ನು ಗೆಲ್ಲೋದು ತುಂಬಾನೇ ಕಷ್ಟ ಎಂಬುದಾಗಿ ಶಾಕಿಂಗ್ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿಮಠದ ಶಿವಾನಂದ ಸ್ವಾಮೀಜಿಯವರು, ಕ್ರೋಧಿನಾಮ ಸಂವಸ್ತರದಲ್ಲಿ ಕ್ರೋಧ, ದ್ವೇಷ, ಮಧ, ಅಸೂಯೆಗಳು ಹೆಚ್ಚಾಗಲಿವೆ ಅಂತ ತಿಳಿಸಿದ್ದಾರೆ. ಪಂಚಾಘಾತಕಗಳು ಅಂದ್ರೆ ಭೂಕಂಪ, ಅಗ್ನಿ, ಜಲಕಂಟಕ, ವಾಯುವಿನಿಂದಲೂ ಆಪತ್ತು ದೇಶ, ರಾಜ್ಯಕ್ಕೆ ಎದುರಾಗಲಿದೆ. ಈ ಕ್ರೋಧಿನಾಮ ಸಂವತ್ಸರದಲ್ಲಿ ಗುರು ಶಿಷ್ಯನಾಗುತ್ತಾನೆ. ಶಿಷ್ಯ ಗುರುವಾಗುತ್ತಾನೆ. …
Read More »ಪರಪ್ಪನ ಅಗ್ರಹಾರ ಜೈಲಲ್ಲಿ ಪವಿತ್ರಾಗೌಡ
ಬೆಂಗಳೂರು, ಜೂ.21- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಗೌಡ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆಯಿಲ್ಲದೆ ಚಡಪಡಿಸಿದ್ದಾರೆ. ನಿನ್ನೆ ಪವಿತ್ರಗೌಡ ಸೇರಿದಂತೆ 9 ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಆರೋಪಿ ಪವಿತ್ರ ಗೌಡಗೆ ನಿನ್ನೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. 11 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೇ ಎದ್ದು ಕುಳಿತಿದ್ದಾರೆ. …
Read More »ಪೆಟ್ರೋಲ್ ಹಾಕಿಸಿಕೊಳ್ಳಲು ಗೋವಾಗೆ ತೆರಳುತ್ತಿರುವ ಗಡಿ ಜಿಲ್ಲೆಯ ಜನ
ಉತ್ತರ ಕನ್ನಡ, ಜೂ.20: ರಾಜ್ಯ ಸರ್ಕಾರ(State government) ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳದಿಂದ ಪೆಟ್ರೋಲ್ ನೂರರ ಗಡಿ ದಾಟಿದೆ. ಇನ್ನು ಡಿಸೇಲ್ ಕೂಡ ಗೋವಾ ರಾಜ್ಯಕ್ಕಿಂತ ಹೆಚ್ಚಾಗಿದ್ದು, ವಾಹನ ಸವಾರರ ಜೇಬು ಬಿಸಿ ಮಾಡುತ್ತಿದೆ. ಆದ್ರೆ, ಗೋವಾ ಗಡಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ(Karwar)ದಲ್ಲಿ ಸಸ್ತಾ ಗೋವಾ ಮದ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪೆಟ್ರೋಲ್ಗೆ ಮುಗಿ ಬೀಳುತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾಕ್ಕೆ ಸಮೀಪವೇ ಇದ್ದು, ಕಾರವಾರದಿಂದ …
Read More »ಯೋಗ ದಿನಾಚರಣೆ 6 ಸಾವಿರ ಜನರೊಂದಿಗೆ ಯೋಗ ಮಾಡಲಿದ್ದಾರೆ ಪ್ರಧಾನಿ ಮೋದಿ
ಶ್ರೀನಗರ : ಮನಸ್ಸು ಮತ್ತು ದೇಹದ ನಡುವೆ ಏಕತೆಯನ್ನು ಸ್ಥಾಪಿಸುವ ಪ್ರಾಚೀನ ಭಾರತೀಯ ಶಿಸ್ತಾಗಿರುವ ಯೋಗವು ಅಧಿಕೃತವಾಗಿ ವಿಶ್ವ ರಂಗವನ್ನು ಪ್ರವೇಶಿಸಿ ಹತ್ತನೇ ವರ್ಷವಾಗಿದೆ. ಇಂದು ವಿಶ್ವದಾದ್ಯಂತ 10ನೇ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇಂದು ವಿಶ್ವದಾದ್ಯಂತ 170 ಕ್ಕೂ ಹೆಚ್ಚು ದೇಶಗಳು ಮತ್ತು ದೊಡ್ಡ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ಶತಕೋಟಿ ಜನರು ಯೋಗ ಮಾಡಲಿದ್ದಾರೆ. ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್ಕೆಐಸಿಸಿ) ನಲ್ಲಿ …
Read More »ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
ಬೆಳಗಾವಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಬಿಜೆಪಿ ಉತ್ತರ ಮಂಡಳದವರು ಗುರುವಾರ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನೇತೃತ್ವ ವಹಿಸಿದ್ದ ಸಂಸದ ಜಗದೀಶ ಶೆಟ್ಟರ್, ‘ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ದರ ಹೆಚ್ಚಿಸುತ್ತಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. …
Read More »ಸೋರಿಕೆಯಿಲ್ಲದೆ ಪರೀಕ್ಷೆ ನಡೆಸುವುದು ಮೋದಿ ಸರ್ಕಾರಕ್ಕೆ ಅಸಾಧ್ಯ: ಖರ್ಗೆ
ನವದೆಹಲಿ: ಯುಜಿಸಿ-ನೆಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರತಿ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು, ಇದು ಯಾವ ರೀತಿಯ ಪರೀಕ್ಷಾ ಪೇ ಚರ್ಚಾ?’ ಎಂದು ಕೇಳಿದ್ದಾರೆ. ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಪ್ರತಿ ವರ್ಷ ‘ಪರೀಕ್ಷಾ ಪೇ ಚರ್ಚಾ’ ಎಂಬ ಹಾಸ್ಯಾಸ್ಪದ ಕಾರ್ಯಕ್ರಮವನ್ನು ನಡೆಸುತ್ತಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯಿಲ್ಲದೆ ಯಾವುದೇ ಪರೀಕ್ಷೆಯನ್ನು ನಡೆಸಲು …
Read More »ಭಾರತದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಅಪರೂಪದ ಗ್ರಾಮ…!
ಅವಳಿ ಮಕ್ಕಳನ್ನು ಹೊಂದುವುದು ಅಪರೂಪ. ಆದರೆ ಭಾರತದ ಹಳ್ಳಿಯೊಂದರಲ್ಲಿ ಅವಳಿ ಮಕ್ಕಳ ಜನನ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಕೊಡಿನ್ಹಿ ಗ್ರಾಮವನ್ನು ಅವಳಿಗಳ ಗ್ರಾಮ ಎಂದೂ ಕರೆಯುತ್ತಾರೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ ಕೇವಲ 9 ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಕೇರಳದ ಈ ಹಳ್ಳಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಅವಳಿ ಮಕ್ಕಳಿದ್ದಾರೆ. 2008ರ ಮಾಹಿತಿ ಪ್ರಕಾರ ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ …
Read More »
Laxmi News 24×7