ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕು ಹೊಡೆದೊಡಿಸಲು ಪ್ರತಿಯೊಬ್ಬರು ಬೆಂಬಲಿ ಮನೆಯಲ್ಲಿಯೇ ಕಾಲ ಕಳೆಯುವಂತೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿಗಳಲ್ಲಿ ಬ್ಲಿಂಚಿಗ್ ಪೌಡರ್ ಸಿಂಪಡಿಸಿ ಬಳಿಕ ಕ್ಷೇತ್ರದ ಜನರಿಗೆ ಜಾಗೃತಿ ಮೂಡಿಸಿದ ಅವರು, ಬಹಳಷ್ಟು ಜನರು ತರಕಾರಿಗಾಗಿ ದಿನಸಿ ಅಂಗಡಿಗಳಲ್ಲಿ ಮುಗಿ ಬೀಳುತ್ತಿದ್ದಾರೆ. ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ. 25 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕೇವಲ …
Read More »ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ವಾಹನಗಳು ಸಿದ್ಧವಾಗಿವೆ
ಬೆಳಗಾವಿ: ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಮಾಡಲಾಗಿದ್ದು, ತಮ್ಮ ಕೆಲಸ ನಿರ್ವಹಿಸಲು ವಾಹನಗಳು ಸಿದ್ಧವಾಗಿವೆ. ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಿಸುವ ಮೂಲಕ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಸಾರ್ವಜನಿಕರು ಸಹ ಅಗತ್ಯ ಸಾಮಗ್ರಿಗಳ ಖರೀದಿ ನೆಪದಲ್ಲಿ ಸಂಚರಿಸುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇದ್ದರಿಂದ ಜಿಲ್ಲಾಡಳಿತ …
Read More »ತುಮಕೂರಿನಲ್ಲಿ ಕೊರೊನಾಗೆ ಮೊದಲ ಸಾವು
ರಾಜ್ಯದಲ್ಲಿ ಕೊರೊನಾಗೆ 3ನೇ ಬಲಿ ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದೆ. ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ಎಂದು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು …
Read More »199 ದೇಶಗಳ 5.31 ಲಕ್ಷ ಜನರಿಗೆ ಕೊರೊನಾ- ಅಮೆರಿಕದಲ್ಲೇ ಹೆಚ್ಚು
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿಶ್ವದಲ್ಲಿ 199 ದೇಶಗಳಿಗೆ ಹಬ್ಬಿದ್ದು, 5.31 ಲಕ್ಷ ಜನರಿಗೆ ಸೋಂಕು ತಗುಲಿದೆ. ಹೆಮ್ಮಾರಿ ಕೊರೊನಾ ವೈರಸ್‍ಗೆ ಈವರೆಗೂ 24 ಸಾವಿರ ಜನ ಬಲಿಯಾಗಿದ್ದಾರೆ. ಕೊರಾನಾ ವೈರಸ್‍ಗೆ ಸ್ಪೇನ್‍ನಲ್ಲಿ ಒಂದೇ ದಿನಕ್ಕೆ 718 ಮಂದಿ ಮೃತಪಟ್ಟಿದ್ದು, ಇಟಲಿಯಲ್ಲಿ 712 ಮಂದಿ ಆಹುತಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ 365 ಜನ, ಇಂಗ್ಲೆಂಡ್‍ನಲ್ಲಿ 110 ಮಂದಿ ಕೊರೊನಾ ಸಾವು ಸಂಭವಿಸಿದೆ. ಅಮೆರಿಕದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮೂಲಕ …
Read More »ಏನು ಮಾಡ್ತೀರೋ ಗೊತ್ತಿಲ್ಲ…. ಒಂದೇ ಒಂದು ಕಾಲು ಹೊರಗೆ ಕಾಣಬಾರದು….” :ಡಿಸಿಪಿ ಸೀಮಾ ಲಾಟ್ಕರ್
ಲಾಕ್ ಡೌನ್ ಘೋಷಣೆಯಾದರೂ ಬೆಳಗಾವಿಯಲ್ಲಿ ಜನರು ರಸ್ತೆ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತಲೆ ಕೆಡಿಸಿಕೊಂಡಿದ್ದಾರೆ. “ನಾವು ಕೆಲಸ ಮಾಡಿದರೂ ಹೇಳಿಸಿಕೊಳ್ಳಬೇಕಾಗಿದೆ… ಏನು ಮಾಡ್ತೀರೋ ಗೊತ್ತಿಲ್ಲ…. ನಾಳೆಯಿಂದ ಒಂದೇ ಒಂದು ಕಾಲು ಹೊರಗೆ ಕಾಣಬಾರದು….” ಎಂದು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಸರಿಯಾಗಿ ಲಾಕ್ ಡೌನ್ ಆಗುತ್ತಿಲ್ಲ ಎಂದು ಯಡಿಯೂರಪ್ಪ ಗುರುವಾರ ಸಂಜೆ ವೀಡಿಯೋ ಕಾನ್ಫರೆನ್ಸ್ …
Read More »ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.: ಸಿದ್ಧರಾಮಯ್
ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ. ಈ ಪ್ಯಾಕೇಜ್ ‘Too little, Too Late’ ಎನ್ನುವ ಹಾಗಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾದ್ಯಮ ಪ್ರಕಟಣೆ ಬಿಡುಗಡೆಗೊಳಿಸಿ ಹೇಳಿದ್ದಾರೆ.: ದೇಶದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದುದ್ದು ಜನವರಿ ಕೊನೆ ವಾರದಲ್ಲಿ. ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ, ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ …
Read More »ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್
ಗೋಕಾಕ:ಕೊರೋನಾ ವೈರಸ್ ಹರಡುವ ಭಿತಿಗೆ ಕ್ಯಾರೆ ಎನ್ನದೆ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ ಗೋಕಾಕ್ ನಗರದ ಮಸೀದಿಯೊಂದರಲ್ಲಿ ನಡೆದಿದೆ.. https://youtu.be/Y7NWh8zD7EA ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ. ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು …
Read More »ಕೊರೋನಾ ಎದುರಿಸಲು 1.7 ಲಕ್ಷ ಕೋಟಿ ಪ್ಯಾಕೇಜ್: ಕೇಂದ್ರ ನಿರ್ಧಾರ
ಹೊಸದಿಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ. ದೇಶದಲ್ಲಿ ಕೊರೊನಾ ಮಹಾಮಾರಿ ಲಗ್ಗೆಯಿಟ್ಟಾಗಿನಿಂದಲೂ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕಾಂಗ್ರೆಸ್ ಒತ್ತಡ ಹೇರುತ್ತಿತ್ತು. ಇದೀಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಗೆ …
Read More »ಧಾರವಾಡ ಜಿಲ್ಲೆಯಲ್ಲಿ 437 ಜನರ ಮೇಲೆ ಕರೋನಾ ನಿಗಾ
ಹುಬ್ಬಳ್ಳಿ.:,ಮಾ,26- ಕರೋನಾ ವೈರಸ್ ಪತ್ತೆಗಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 437 ಜನರ ಮೇಲೆ ನಿಗಾ ವಹಿಸಲಾಗಿದೆ. 266 ಜನರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಪ್ರತ್ಯೇಕತಾ ಅವಧಿಯನ್ನು 155 ಜನ ಪೂರ್ಣಗೊಳಿಸಿದ್ದಾರೆ. 28 ದಿನಗಳ ಪ್ರತ್ಯೇಕತೆ ಅವಧಿಯನ್ನು 14 ಜನ ಪೂರ್ಣಗೊಳಿಸಿದ್ದಾರೆ.ಇದುವರೆಗೆ 38 ಶಂಕಿತರ ಗಂಟಲು ದ್ರವದ ಪ್ರಯೋಗಾಲಯ …
Read More »ಬಳ್ಳಾರಿ:ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ……..
ಬಳ್ಳಾರಿ: ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮುಂದುವರೆಸಿದ್ದು, ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಈ ಕುರಿತು ಬಳ್ಳಾರಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರಿನಲ್ಲಿ ನಿನ್ನೆ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈಗ ಅವರ ಕುರಿತ ಲ್ಯಾಬ್ ವರದಿ ಬಂದಿದ್ದು, ಕೊರೂನಾ ಸೋಂಕಿನಿಂದಲೇ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿದೆ ಎಂದಿದ್ದಾರೆ. ಈ ಹಿಂದೆ ಕಲಬುರಗಿಯಲ್ಲಿ …
Read More »
Laxmi News 24×7