Breaking News

ರಾಷ್ಟ್ರೀಯ

ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್‍ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.

ಬೆಂಗಳೂರು: ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್‍ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ. ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್‌ಫ್ಯೂಸ್ ಆಗಬೇಡಿ. ಬೊಮ್ಮನಹಳ್ಳಿಯ ಬಿಬಿಎಂಪಿಯವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆಧೀರನನ್ನು ಬಳಸಿದ್ದಾರೆ. ಕೆಜಿಎಫ್ ಚಿತ್ರದ ಅಧೀರ ರುಮಾಲಿನ ಬಟ್ಟೆಯಿಂದ ಬಾಯಿ ಮುಚ್ಚಿಕೊಂಡಿರುವ ಫೋಟೋ ಹಾಕಿ, ಮಾಸ್ಕ್ ಹಾಕಿಕೊಳ್ಳಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೋಡಿ …

Read More »

ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು – 10 ಲಕ್ಷ ಮಂದಿ ಕೊರೊನಾದಿಂದ ಗುಣಮುಖ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದ 52,123 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ. ಇದೇ ಮೊದಲು ಬಾರಿಗೆ ಒಂದೇ ದಿನಕ್ಕೆ ಐವತ್ತು ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ 775 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 34,968ಕ್ಕೆ ಏರಿದೆ. ಸದ್ಯ 5,28,242 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ .ದಾಖಲೆಯ ಸೋಂಕಿತರ ಏರಿಕೆಯ ನಡುವೆ ಕೊರೊನಾದಿಂದ …

Read More »

ಚೀನಾಕ್ಕೆ ಮತ್ತೊಂದು ಪೆಟ್ಟು ನೀಡಲು ಮುಂದಾದ ಭಾರತ

ಬೆಂಗಳೂರು: ಗಡಿ ಸಂಘರ್ಷದ ಬೆನ್ನಲ್ಲೇ ಚೀನಾದ ಅನೇಕ ಆಯಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರವು, ಈಗ ಆ ರಾಷ್ಟ್ರಕ್ಕೆ ಆರ್ಥಿಕವಾಗಿ ಮತ್ತೊಂದು ಪೆಟ್ಟು ನೀಡಲು ಮುಂದಾಗಿದೆ. ಸರ್ಕಾರವು ತನ್ನ ನೆರೆಯ ರಾಷ್ಟ್ರಗಳ ಮೇಲೆ ಹೊಸ ವ್ಯಾಪಾರ ನಿರ್ಬಂಧ ಹೇರಿದೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳ ಕಂಪನಿಗಳು ಕೈಗಾರಿಕಾ ಇಲಾಖೆಯಲ್ಲಿ ಹೆಸರು ನೋಂದಾಯಿ ಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿ ಮಾಡಿಸಿಕೊಳ್ಳದ ಕಂಪನಿಗಳು ಸರ್ಕಾರಿ ಬಿಡ್‌ ಸಲ್ಲಿಸುವ ಅವಕಾಶ ಕಳೆದುಕೊಳ್ಳಲಿವೆ. ಸರಕು ಮತ್ತು ಸೇವಾ ವಲಯದಲ್ಲಿ …

Read More »

ಮಹಾರಾಷ್ಟ್ರದಲ್ಲಿ ಆಗಸ್ಟ್ 31ರವರೆಗೂ ಲಾಕ್‌ಡೌನ್ ವಿಸ್ತರಣೆ

ಮುಂಬೈ: ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಆಗಸ್ಟ್ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಬುಧವಾರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ನಾಲ್ಕು ಲಕ್ಷ ದಾಟಿದೆ. ಆಗಸ್ಟ್ 5 ರಿಂದ ಮಾಲ್‌ಗಳು, ವಾಣಿಜ್ಯ ಕಟ್ಟಡಗಳು ತೆರೆದಿರಲಿವೆ. ಚಿತ್ರಮಂದಿರಗಳು ಬಂದ್ ಇರಲಿವೆ. ಫುಡ್ ಕೋರ್ಟ್, ರೆಸ್ಟೋರೆಂಟ್‌ಗಳು ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖರೇ ಹೆಚ್ಚು ಮಹಾರಾಷ್ಟ್ರ ಸರ್ಕಾರವು ಕಳೆದ …

Read More »

ಅನ್‌ಲಾಕ್‌ 3′ ಮಾರ್ಗಸೂಚಿ ಬಿಡುಗಡೆ: ಆಗಸ್ಟ್‌ ಅಂತ್ಯದವರೆಗೂ ಶಾಲಾ, ಕಾಲೇಜು ಇಲ್ಲ

ನವದೆಹಲಿ : ಕೊರೊನಾ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್‌ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗೃಹ ಸಚಿವಾಲಯವು ಬುಧವಾರ ಮೂರನೇ ಹಂತದ (ಅನ್‌ಲಾಕ್‌-3) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್‌ 1ರಿಂದ ಇವು ಜಾರಿಗೆ ಬರಲಿವೆ. ಸೋಂಕು ಪಸರಿಸದಂತೆ ತಡೆಯುವ ಸಲುವಾಗಿ ಈ ಹಿಂದೆ ಜಾರಿಗೊಳಿಸಿದ್ದ ‘ರಾತ್ರಿ ಕರ್ಫ್ಯೂ’ ರದ್ದುಪಡಿಸಲಾಗಿದೆ. ಕಂಟೈನ್‌ಮೆಂಟ್‌ ವಲಯವನ್ನು ಬಿಟ್ಟು ಉಳಿದೆಡೆ ಆಗಸ್ಟ್‌ 5ರಿಂದ ಜಿಮ್‌ ಹಾಗೂ ಯೋಗ ಕೇಂದ್ರಗಳನ್ನು …

Read More »

ರಾಜ್ಯದಲ್ಲಿ ಒಂದೇ ದಿನ 5,503 ಜನರಿಗೆ ಸೋಂಕು.. ಜಿಲ್ಲಾವಾರು ಕಂಪ್ಲೀಟ್ ರಿಪೋರ್ಟ್

ರಾಜ್ಯದಲ್ಲಿ ಇವತ್ತು 5,503 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,12,504 ಆಗಿದೆ. ಇವತ್ತು 92 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 2,147 ಆಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 2,270 ಜನರಿಗೆ ಸೋಂಕು ತಗುಲಿದ್ದು 30 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದ್ದು 51,091 …

Read More »

ಝಿರೋ ಟ್ರಾಫಿಕ್‌ನಲ್ಲಿ ಮಣಿಪಾಲ್ ಆಸ್ಪತ್ರೆಗೆ ಬಂದ 4 ದಿನದ ಮಗು!

ಶಿವಮೊಗ್ಗ,  ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 4 ದಿನದ ಮಗುವನ್ನು ತುರ್ತು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಮಣಿಪಾಲ್‌ ತನಕ ಅಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮಗುವನ್ನು ಬುಧವಾರ ಝಿರೋ ಟ್ರಾಫಿಕ್ ಮೂಲಕ ಕರೆದುಕೊಂಡು ಹೋಗಲಾಯಿತು. ಶಿವಮೊಗ್ಗದಿಂದ ಹೊರಟ ಅಂಬ್ಯುಲೆನ್ಸ್ ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಮಣಿಪಾಲ್ ತಲುಪಿತು. ಶಿವಮೊಗ್ಗ-ಬೆಂಗಳೂರು: 7 ದಿನದ ಮಗು ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್ ಭದ್ರಾವತಿಯ ದೇವೇಂದ್ರ …

Read More »

ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿವೆ, ರಾಫೆಲ್ ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ: ರಾಜನಾಥ್ ಸಿಂಗ್

ನವದೆಹಲಿ: ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳು ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆಯೇ ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಾಫೆಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ‘ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿವೆ. ರಾಫೆಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ …

Read More »

ಶಾಕಿಂಗ್ ನ್ಯೂಸ್.! ದೃಷ್ಟಿಹೀನ ಮಗನನ್ನು ಬಲಿಪಡೆದು ತಾನೂ ಸಮಾಧಿ ಸೇರಿದ ಮಹಾತಾಯಿ..

ಹೈದರಾಬಾದ್: ಮನುಕುಲದಲ್ಲಿ ಮೊದಲು ಪೂಜೆಗೊಳ್ಳುವ ದೇವರೆಂದರೆ ಅದು ತಾಯಿಯೇ ಎಂಬ ನಂಬಿಕೆ ಇದೆ. ಆದರೆ ಹೆತ್ತ ತಾಯಿಯೇ ಮಕ್ಕಳನ್ನು ಕೊಲ್ಲುವ ಮಹಾಪಾಪಿಯಾಗುತ್ತಾಳೆ ಎಂದರೆ ನೀವು ನಂಬಲೇಬೇಕು… ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.   ದೃಷ್ಟಿವೈಕಲ್ಯ ಮತ್ತು ಬುದ್ಧಿಮಾಂದ್ಯ ಮಗನ ಸ್ಥಿತಿಯಿಂದ ತೀವ್ರ ಆಘಾತಗೊಂಡ ಮಹಿಳೆಯೊಬ್ಬಳು ಮಗುವಿನ ಮಣಿಕಟ್ಟು ಕೊಯ್ದು, ಮೂರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಇಲ್ಲಿಯ ಎಲ್​ಬಿ ನಗರದ ಶಾತವಾಹನ ಕಾಲೋನಿಯಲ್ಲಿ ನಡೆದಿದೆ. ಮಗನೇ.. ನನ್ನನ್ನು …

Read More »

ಮಗನೇ.. ನನ್ನನ್ನು ಕೊಂದುಬಿಡು ಎಂದು ಅಂಗಲಾಚಿದ್ದ ತಾಯಿಯನ್ನು ದೇವರು ಕಾಪಾಡಲಿಲ್ಲ

ಚೆನ್ನೈ: ವಯಸ್ಸಾದ ತಾಯಿಯನ್ನು ವಯೋಸಹಜ ಕಾಯಿಲೆ ಹಾಗೂ ಅಸಹನೀಯ ನೋವಿನಿಂದ ಶಾಶ್ವತವಾಗಿ ಮುಕ್ತಗೊಳಿಸಲು ಆಕೆಯ ಮಗನೇ ಚಾಕುವಿನಿಂತ ಕತ್ತು ಸೀಳಿ ಅಮಾನವೀಯವಾಗಿ ಹತ್ಯೆ ಗೈದಿದ್ದಾನೆ. 36 ವರ್ಷದ ಆನಂದನ್ ಕೊಲೆಗೈದ ಆರೋಪಿ. ಗೋವಿಂದಮ್ಮಾಳ್ (66) ಕೊಲೆಗೀಡಾದ ದುರ್ದೈವಿ ತಾಯಿ. ಈ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಶ್ರೀಪೆರುಪುದೂರ್ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಗೋವಿಂದಮ್ಮಾಳ್ ತನ್ನ ಪತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದು, ಕುಟುಂಬದವರು ಮರಿಯಮ್ಮನ್ ಕೋಲಿ ಗಲ್ಲಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.   …

Read More »