ಬೆಂಗಳೂರು : ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಅವರಿಗೆ ಮಿಸ್ ಫೈರಿಂಗ್ ನಿಂದ ಗುಂಡು ಹಾರಿದೆ. ಆರ್ ಪಿ ಶರ್ಮಾ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಮಿಸ್ ಫೈರಿಂಗ್ ನಿಂದ ಘಟನೆ ನಡೆದಿದೆ. ಮಿಸ್ ಫೈರಿಂಗ್ ನಿಂದ ಆರ್ ಪಿ ಶರ್ಮಾ …
Read More »ಮಳೆಯಿಂದ ತತ್ತರಿಸಿದ ಜನತೆಗೆ ಮುಖ್ಯ ಮಾಹಿತಿ: ಸೆ. 5 ರವರೆಗೆ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದ್ದು ಸೆಪ್ಟೆಂಬರ್ 3 ರಿಂದ 5 ರವರೆಗೆ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ಎರಡು ದಿನಗಳ ಕಾಲ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, …
Read More »ಸಾಲದ ಸುಳಿಯಲ್ಲಿ ಕರ್ನಾಟಕ
ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ‘ದೇವರ ಆಟ’ದ ಕಾರಣ ಮುಂದು ಮಾಡಿ ಕೊಡಲೇಬೇಕಾಗಿದ್ದ ಜಿಎಸ್‌ಟಿ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಕೊಡದೇ ಕೈ ಎತ್ತಿದ್ದರಿಂದ ಕರ್ನಾಟಕದ ಒಟ್ಟಾರೆ ಸಾಲ ₹4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಈ ಹಿಂದಿನ ನಾಲ್ಕು ತಿಂಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ ₹13,764 ಕೋಟಿ ನಷ್ಟ ಪರಿಹಾರ ಹಾಗೂ ಸೆಸ್ ರೂಪದಲ್ಲಿ ಸುಮಾರು ₹6,965 ಕೋಟಿ ಬರಬೇಕಿದೆ. ಜಿಎಸ್‌ಟಿ ಕಾಯ್ದೆ ಅನುಸಾರ ಈ ಪರಿಹಾರವನ್ನು ಕೊಡುವುದು ಕೇಂದ್ರದ ಸಂವಿಧಾನಾತ್ಮಕ …
Read More »ಪ್ರಧಾನಿ ನರೇಂದ್ರ ಮೋದಿ ಟ್ವಿಟರ್, ವೆಬ್ಸೈಟ್ ಹ್ಯಾಕ್….!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವೈಯಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. 2.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಇಂದು ಮುಂಜಾನೆ 3.15 ರ ಸುಮಾರಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಟ್ವೀಟರ್, ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದೆ. *ಹೆಚ್ಚಿನ ಸುದ್ದಿಗಾಗಿ …
Read More »ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‍ನಲ್ಲಿ ಮತ್ತೆ ನಾನು ಕಾಣಿಸಿಕೊಳ್ಳುತ್ತೇನೆ.:ರೈನಾ
ನವದೆಹಲಿ,ಸೆ.2-ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‍ನಲ್ಲಿ ಮತ್ತೆ ನಾನು ಕಾಣಿಸಿಕೊಳ್ಳುತ್ತೇನೆ. ನೀವು ನೋಡಲಿದ್ದೀರಿ ಎಂದು ಕ್ರಿಕೆಟಿಗ ಸುರೇಶ್ ರೈನಾ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಸಂಬಂಧಿಕರೊಬ್ಬರಿಗೆ ರಾಜಸ್ಥಾನದಲ್ಲಿ ಕುಟುಂಬ ಸದಸ್ಯರ ಮೇಲೆ ದರೋಡೆಕೋರರ ದಾಳಿ ನಡೆದ ನಂತರ ಹೇಳದೆ ಕೇಳದೆ ದುಬೈನಿಂದ ಭಾರತಕ್ಕೆ ಸುರೇಶ್ ರೈನಾ ವಾಪಸ್ಸಾಗಿದ್ದರು. ಇದಾದ ನಂತರ ದುಬೈನಲ್ಲಿ ಸಿಎಸ್‍ಕೆ ತಂಡದ ಆಟಗಾರರಿಗೆ ನೀಡಿದ್ದ ಹೋಟೆಲ್ ರೂಮ್ ಬಗ್ಗೆ ಸುರೇಶ್ ರೈನಾ ತಮ್ಮ ಆತಿಥ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಗಳವಾಡಿದ್ದರು …
Read More »ರಣವೀರ್, ರಣ್‌ಬೀರ್, ವಿಕ್ಕಿ ಡ್ರಗ್ಸ್ ಪರೀಕ್ಷೆಗೆ ಒಳಪಡಬೇಕು – ಕಂಗನಾ
ಮುಂಬೈ: ಬಾಲಿವುಡ್ 4 ಮಂದಿ ಖ್ಯಾತನಟರು ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಲಿ ಎಂದು ನಟಿ ಕಂಗನಾ ರಣಾವತ್ ವಿನಂತಿಸಿಕೊಂಡಿದ್ದಾರೆ. ರಣ್‌ವೀರ್ ಸಿಂಗ್, ರಣ್‌ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಬೇಕು. ಈ ನಟರು ಕೊಕೇನ್ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಸುಳ್ಳು ಮಾಡಲು ನಟರು ರಕ್ತದ ಮಾದರಿಯನ್ನು ನೀಡಬೇಕೆಂದು ವಿನಂತಿಸುತ್ತಿದ್ದೇನೆ. ಈ ವ್ಯಕ್ತಿಗಳು …
Read More »ರಾಹುಲ್ ಗಾಂಧಿ ಪ್ರಧಾನಿಯಾದ್ರೆ, ಸಿದ್ದರಾಮಯ್ಯ ಹೋಗಿ ಕೇಳಲಿ: ಸುಧಾಕರ್ ವ್ಯಂಗ್ಯ
ಚಿಕ್ಕಬಳ್ಳಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬದಲಾವಣೆ ಮಾಡಲಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರ ಸಲಹೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಸುಧಾಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಬದಲಾವಣೆಯ ಬಗ್ಗೆ ರಾಹುಲ್ ಗಾಂಧಿ ಪ್ರಧಾನಿ ಆದರೆ ಸಿದ್ದರಾಮಯ್ಯ ಹೋಗಿ ಕೇಳಲಿ. ಈಗ ಕೇಳೋದಲ್ಲ. ಡಿಜೆಹಳ್ಳಿಗೆ ಸಿದ್ದರಾಮಯ್ಯ ಭೇಟಿ ನೀಡಲಿ. ಅವರು ಸ್ವತಂತ್ರರು ಎಲ್ಲಿಗೆ ಬೇಕಾದರೂ …
Read More »ನಿಸ್ವಾರ್ಥ ಭಕ್ತಿಯಿಂದ ಫಲ
ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ —– ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲ ನಡೆದನಾ ಸುಂಕಕಂಜಿ ಕಳವೆಯೆಲ್ಲ ಹೋಗಿ ಬರಿ ಗೋಣಿ ಉಳಿಯಿತ್ತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ ಮಾನವನ ಜೀವನ ತುಂಬಾ ಸೂಕ್ಷ್ಮವಾದುದು. ಆತನ ಬದುಕಿನಲ್ಲಿ ನಿಷ್ಠೆಯ ಸೇವೆ, ಪ್ರಾಮಾಣಿಕತೆ, ತ್ಯಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿಯು ಹರಿದ ಗೋಣಿ ಚಿಲದಲ್ಲಿ ಭತ್ತವನ್ನು ತುಂಬಿಟ್ಟಿದ್ದ. ಭತ್ತವನ್ನು ಹೊಲದಿಂದ ಹಗಲಿನಲ್ಲಿ ಮನೆಗೆ ಸಾಗಿಸಿದರೆ ತೆರಿಗೆಯವರು ಸುಂಕ ವಿಧಿಸಬಹುದು …
Read More »ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ
ಚಿಕ್ಕಮಗಳೂರು. ರಾಷ್ಟ್ರೀಯ ಹೆದ್ದಾರಿ-73 (ಹಳೆಯ ಸಂಖ್ಯೆ-234)ರ ಮಂಗಳೂರು-ವಿಲ್ಲಂಪುರ ರಸ್ತೆಯ 86.200 ರಿಂದ 90.200ಕಿಮೀ ಕೊಟ್ಟಿಗೆಹಾರದವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರ ವರದಿಯನ್ವಯ ಪ್ರಸ್ತುತ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿರುವುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು-ತುಮಕೂರು ರಸ್ತೆಯ 86.200ಕಿಮೀ …
Read More »ರಸ್ತೆ ಬದಿ ನಿಂತ ಲಾರಿಗಳು, NH 4 ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ನೆಲಮಂಗಲ: ವಾರಾಂತ್ಯದಲ್ಲಿ ನಗರದಿಂದ ತಮ್ಮ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಿಸುವ ಪ್ರಯಾಣಿಕರು, ಈಗ ಮತ್ತೊಂದು ಕಾರಣಕ್ಕೆ ಟ್ರಾಫಿಕ್ನಲ್ಲಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಇಂದು ಎದುರಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯ ಬದಿಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಿಂದಾಗಿ ಮೊದಲೆ ಚಿಕ್ಕದಾಗಿರುವ ರಸ್ತೆಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿರುವುದರಿಂದ ವಾಹನ ಚಲಿಸಲಾಗದೆ ಒಂದು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ …
Read More »