ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ 9,746 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.61 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 2ರಂದು ದಾಖಲಾಗಿದ್ದ 9,860 ಪ್ರಕರಣದ ಬಳಿಕ ಶನಿವಾರ ಎರಡನೇ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಅಲ್ಲದೆ, ದಾಖಲೆಯ 9,102 ಮಂದಿ ಗುಣಮುಖರಾಗಿದ್ದಾರೆ. ಇನ್ನು ಶನಿವಾರ 128 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೆ …
Read More »ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ
ಬೆಂಗಳೂರು : ಪದವಿ ಪೂರ್ವಶಿಕ್ಷಣ ಇಲಾಖೆಯು 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಸೆ. 7 ರಿಂದ 19 ರವರೆಗೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10.15 ರಿಂದ 1.30 ಹಾಗೂ 2.15 ರಿಂದ 5.30 ರ ಅವಧಿಯಲ್ಲಿ ನಡೆಯಲಿವೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾ ಪಟ್ಟಿ ಸಮಯ ಬೆಳಗ್ಗೆ 10.15 ರಿಂದ 1.30ರವರೆಗೆ, ಮಧ್ಯಾಹ್ನ 2.15 ರಿಂದ ಸಾಯಂಕಾಲ 5.30ರವರೆಗೆ ಸೆ.7ರ ಬೆಳಗ್ಗೆ ಉರ್ದು, ಸಂಸ್ಕೃತ, …
Read More »ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.
ನವದೆಹಲಿ,ಸೆ.5- ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಶಸ್ತಿಗಳನ್ನು ನೀಡಿ ಮಾತನಾಡಿದ ರಾಷ್ಟ್ರಪತಿಯವರು, ಉತ್ತಮ ಕಟ್ಟಡ, ದುಬಾರಿ ಸೌಲಭ್ಯಗಳು ಇರುವ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಾಗುವುದಿಲ್ಲ. ಬದಲಿಗೆ ಒಳ್ಳೆಯ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಗುತ್ತಾರೆ. ಆ ಮೂಲಕ ಉತ್ತಮ …
Read More »ಉಪ ಚುನಾವಣೆಗೆದಿನಾಂಕವನ್ನೇ ನಿಗದಿಪಡಿಸಿಲ್ಲ,ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ,
ಬೆಂಗಳೂರು, ಸೆ.5- ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನೇ ನಿಗದಿಪಡಿಸಿಲ್ಲ, ಆದರೂ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ, ಬಿಜೆಪಿಗೆ ಇಲ್ಲಿ ಯಾವುದೇ ನೆಲೆ ಇಲ್ಲ, ಆದರೆ ಶಿರಾ ಕ್ಷೇತ್ರ, ಬಿಜೆಪಿ ಸಂಸದ ಆನೇಕಲ್ ನಾರಾಯಣ ಸ್ವಾಮಿ ಪ್ರತಿನಿಧಿಸುವ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಿ ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಪ್ರಧಾನ …
Read More »ಮೇಘನಾ ರಾಜ್ ಬಳಿ ಕ್ಷಮೆ ಕೋರಿದ ಇಂದ್ರಜಿತ್ ………..
ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ನಟಿ ಮೇಘನಾ ರಾಜ್ ಅವರು ವಾಣಿಜ್ಯ ಮಂಡಳಿಗೆ ಬರೆದ ಪತ್ರದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕ್ಷಮೆ ಕೋರಿದ್ದಾರೆ.ಮಾತನಾಡಿದ ಇಂದ್ರಜಿತ್, ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಈಗಾಗಲೇ ನಾನು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಈ ಸಂಬಂಧ ನಾನು ಬಹಿರಂಗ …
Read More »ಮಾಜಿ ಸಚಿವ, ದಿ.ಜೀವರಾಜ್ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್ …
Read More »ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಶಾಸಕ ಸತೀಶ ಜಾರಕಿಹೊಳಿ
ಹಾವೇರಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಕುರಿತು ಪಾದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಿ.ಬಿ. ರೋಡ್ ಕಾಂಗ್ರೆಸ್ ಕಚೇರಿ ಬಳಿ ಇರುವ ಸಜ್ಜನ ಫಂಕ್ಷನ್ ಹಾಲ್ ನಲ್ಲಿ ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಮಾಜಿ ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು.ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು,ಮಹಿಳಾ ಘಟಕದ ಅಧ್ಯಕ್ಷರು,ಯುವ ಕಾಂಗ್ರೇಸ್ …
Read More »ಎನ್‍ಡಿಪಿಎಸ್ ಆಕ್ಟ್ ಸೆಕ್ಷನ್ 21, 21ಸಿ, 27ಬಿ, 27ಎ, 29, ಐಪಿಸಿ 120ಬಿ ಅಡಿ ಎಫ್‍ಐಆರ್ ದಾಖಲಾಗಿದೆ
ಬೆಂಗಳೂರು: ಎರಡು ಬಾರಿ ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಡ್ರಗ್ ತೆಗೆದುಕೊಂಡಿರೋದಾಗಿ ನಟಿ ರಾಗಿಣಿ ದ್ವಿವೇದಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಗೆಳೆಯ ರವಿಶಂಕರ್ ತಂದುಕೊಟ್ಟಿದ್ದ ಎಂಡಿಎಂಎ ಡ್ರಗ್ ಮನೆಯಲ್ಲಿಯೇ ಬಳಕೆ ಮಾಡಿದ್ದೇನೆ ಎಂದು ರಾಗಿಣಿ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡು ಬಾರಿಯೂ ರವಿಶಂಕರ್ ಡ್ರಗ್ಸ್ ತಂದಿದ್ದನು. ಇತ್ತ ರಾಗಿಣಿ, ರವಿಶಂಕರ್ ಮತ್ತು ರಾಹುಲ್ ಬಳಸುತ್ತಿದ್ದ ಮೊಬೈಲ್ ಮಾಹಿತಿಯನ್ನ ಪುನಃ ಕಲೆ ಹಾಕಲಾಗಿದೆ. …
Read More »ಮತ್ತೊಂದು ಡ್ರಗ್ಸ್ ಜಾಲದ ಮೇಲೆ ಸಿಸಿಬಿ ದಾಳಿ – 20 ಲಕ್ಷ ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಕಾರ್ಯಾಚರಣೆ ನಡೆಸಿದ್ದು, ಮೊತ್ತೊಂದು ಡ್ರಗ್ಸ್ ದಂಧೆ ಜಾಲವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಮಿಷನರ್ ಕಮಲ್ ಪಂತ್, ಸಿಸಿಬಿ ಪೊಲೀಸರು ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ 2 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 20 ಲಕ್ಷಕ್ಕೂ ಅಧಿಕ ಬೆಲೆ ಇರಬಹುದು ಎಂದರು. ನಮಗೆ ಇರುವ …
Read More »ಜಿಲ್ಲಾ ಉಸ್ತುವಾರಿ ಸಚಿವರು ರಮೇಶ ಜಾರಕಿಹೊಳಿ ಅವರು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಚಾಲನೆ ನೀಡಿದರು.
ಗೋಕಾಕ್: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯಿಂದ 3.30 ಕೋಟಿ ವೆಚ್ಚದಲ್ಲಿ ಉಪ್ಪಾರಟ್ಟಿ – ಮಮದಾಪೂರ ವರೆಗೆ ಐದು ಕಿಮೀ ರಸ್ತೆ ನಿರ್ಮಾಣ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ 73.44 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಟಗೇರಿ ಗ್ರಾಮದಿಂದ …
Read More »