ನವದೆಹಲಿ: ‘ವಾಟ್ಸ್‌ಆಯಪ್, ಮೆಸೆಂಜರ್, ವೈಬರ್‌ನಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಕರೆ ಮತ್ತು ಚಾಟಿಂಗ್ ಸೇವೆಗಳಿಗೆ ನಿಯಮಾವಳಿಗಳ ನಿಯಂತ್ರಣದ ಅವಶ್ಯಕತೆ ಇಲ್ಲ’ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ದೂರಸಂಪರ್ಕ ಕಂಪನಿಗಳು ಒದಗಿಸುವ ಸೇವೆಗಳಿಗೂ, ಇಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಸೇವೆಗಳಿಗೂ ತೀರಾ ವ್ಯತ್ಯಾಸವಿಲ್ಲ. ಹೀಗಾಗಿ ಒಟಿಟಿ ದೂರಸಂಪರ್ಕ ಸೇವಾ ಕಂಪನಿಗಳಿಗೂ ನಿಯಂತ್ರಣ ಹೇರಬೇಕು ಎಂದು ಭಾರತದ ಹಲವು ದೂರಸಂಪರ್ಕ ಕಂಪನಿಗಳು ಟ್ರಾಯ್‌ಗೆ ಮನವಿ ಸಲ್ಲಿಸಿದ್ದವು. ‘ದೂರಸಂಪರ್ಕ …
Read More »ಮೂವಿ ಮಾಫಿಯಾಗೆ ಆದಿತ್ಯ ನಂಟು!: ಉದ್ಧವ್ ಪುತ್ರನ ವಿರುದ್ಧ ಬಾಲಿವುಡ್ ನಟಿ ಕಂಗನಾ ಆರೋಪ
ಮುಂಬಯಿ: ಮಹಾರಾಷ್ಟ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇರುವ ಬಾಲಿವುಡ್ ನಟಿ ಕಂಗನಾ ರಣೌತ್ ಸೋಮವಾರ ಸಿಎಂ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಗೆ ಟಾಂಗ್ ನೀಡಿದ್ದಾರೆ. ಆದಿತ್ಯ ಅವರ ಸ್ನೇಹಿತರ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಶಿವಸೇನೆ ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದಿತ್ಯ ಠಾಕ್ರೆ ಅವರು ಮೂವಿ ಮಾಫಿಯಾ, ಸುಶಾಂತ್‌ರ ಕೊಲೆಗಾರರು ಮತ್ತು ಡ್ರಗ್ ದಂಧೆಕೋರರೊಂದಿಗೆ ಸ್ನೇಹ ಹೊಂದಿದ್ದಾರೆ. ಮೂವಿ ಮಾಫಿಯಾವನ್ನು ನಾನು ಬಯಲಿಗೆಳೆಯಲು ಮುಂದಾಗಿದ್ದೇ ಸಿಎಂ ಉದ್ಧವ್‌ಗೆ …
Read More »ವಿರಾಟ್ ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ :ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ
ನವದೆಹಲಿ: ಐಪಿಎಲ್-2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಈ ಚುಟುಕು ಪಂದ್ಯಗಳಲ್ಲಿ ಆ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಗಬಳಿಸಿದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಹೆಚ್ಚು ಆರೆಂಜ್ ಕ್ಯಾಪ್ ಅನ್ನು ಆಸೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಗೆದ್ದಿದ್ದಾರೆ. ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಆಸೀಸ್ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. …
Read More »ಹಿಂಬದಿಯಿಂದ ಲಾರಿ ಡಿಕ್ಕಿ, ಕಾರ್ ಅಪ್ಪಚ್ಚಿ- ಮೂವರು ದಾರುಣ ಸಾವು
ಚಿಕ್ಕಬಳ್ಳಾಪುರ: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ ತಾಲೂಕು ದೊಡ್ಡಪ್ಯಾಯಲಗುರ್ಕಿ ಬಳಿ ರಾತ್ರಿ 1 ಗಂಟೆಗೆ ಘಟನೆ ಸಂಭವಿಸಿದ್ದು, ಹಿಂಬದಿಯಿಂದ ಲಾರಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂದೆ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಡಿಕ್ಕಿ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗುರುತಿಸಲು …
Read More »ನಮಗೆ ರಕ್ಷಣೆ ಕಲ್ಪಿಸಿ- ಹೈಕೋರ್ಟಿಗೆ ಶಮಿ ಪತ್ನಿ ಅರ್ಜಿ………..
ಕೋಲ್ಕತ್ತಾ: ಟೀಂ ಇಂಡಿಯಾ ವೇಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ರಕ್ಷಣೆ ಕಲ್ಪಿಸುವಂತೆ ಹೈಕೋರ್ಟಿಗೆ ಅಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ರಾಮ ಮಂದಿರ ಭೂಮಿ ಪೂಜೆ ಪೋಸ್ಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಸಿನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಹಸೀನ್ ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿ, ತನಗೆ ಹಾಗೂ ತನ್ನ …
Read More »ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್
ಚಿಕ್ಕಮಗಳೂರು: ಚಾರ್ಮಾಡಿ ಘಾಟ್‍ನಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು ಹಾರಿ ಹೋಗಿದ್ದು, ಇವುಗಳನ್ನು ಸ್ಥಳೀಯ ಸ್ನೇಕ್ ಆರೀಫ್ ಎಂಬವರು ಮಾಲೀಕರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ …
Read More »ಪ್ರಸಕ್ತ ಹಂಗಾಮು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 5 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ ಗುರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 5 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಹಾಗೂ ಕಾರ್ಖಾನೆಯ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಭಾನುವಾರದಿಂದ ಪ್ರಭಾ ಶುಗರ್ಸ್ ಪ್ರಸ್ತಕ ವರ್ಷದಿಂದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಸಕಾಲಯಕ್ಕೆ ಮಳೆಯಾಗಿ ಉತ್ತಮ …
Read More »ಐಪಿಎಲ್ 2020: ಸಿಎಸ್‌ಕೆ ಯಲ್ಲಿ ಎಂಎಸ್ ಧೋನಿಯೊಂದಿಗೆ ಮತ್ತೆ ಒಂದಾಗಲು ಪಿಯೂಷ್ ಚಾವ್ಲಾ ಉತ್ಸುಕರಾಗಿದ್ದಾರೆ
2008 ರಿಂದ 2013 ರವರೆಗೆ ಕೆಎಕ್ಸ್‌ಐಪಿ ಪಂಜಾಬ್‌ನ ಭಾಗವಾಗಿದ್ದ ನಂತರ ಪಿಯೂಷ್ ಚಾವ್ಲಾ 2014 ರಿಂದ 2019 ರವರೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಮಾರ್ಟ್ ಖರೀದಿದಾರರು ಆದರೆ ಅವರು ಐಪಿಎಲ್ 2020 ಹರಾಜಿನಲ್ಲಿ ತಮ್ಮ ಅತಿದೊಡ್ಡ ಬಿಡ್ ಅನ್ನು ಮುಂದುವರೆಸಿದರು. ಭಾರತೀಯ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಮೇಲೆ 6.75 ಕೋಟಿ ರೂ. ಅಂತಿಮವಾಗಿ, ಸಿಎಸ್‌ಕೆ ಭಾರತೀಯ …
Read More »ಗೌತಮ್ ಗಂಭೀರ್ ಅವರು ಕೊಹ್ಲಿ, ಧೋನಿ ನಡುವಿನ ‘ದೊಡ್ಡ ವ್ಯತ್ಯಾಸವನ್ನು’ ವಿವರಿಸಿದ್ದಾರೆ; ಆರ್ಸಿಬಿ ನಾಯಕನಿಗೆ ಒಂದು ಸಲಹೆಯನ್ನು ನೀಡುತ್ತಾರೆ.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಎರಡು ಬಾರಿ ಐಪಿಎಲ್ ವಿಜೇತ ನಾಯಕ ಗೌತಮ್ ಗಮ್ಹೀರ್ ಸೋಮವಾರ ರ್ಪಾಲ್ ಚಾಲೆಂಜರ್ ಬೆಂಗಳೂರಿನ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ನಡುವಿನ ನಾಯಕತ್ವದ ವ್ಯತ್ಯಾಸವನ್ನು ವಿವರಿಸಿದ್ದಾರೆ ಮತ್ತು ಹಾಗೆ ಮಾಡುವಾಗ ಮಾಜಿ ಆಟಗಾರರಿಗೆ ಸ್ವಲ್ಪ ಸಲಹೆಯನ್ನು ನೀಡಿದರು. ಐಪಿಎಲ್‌ನಲ್ಲಿ ಪ್ರತಿವರ್ಷ ಆರ್‌ಸಿಬಿಯ ಹೋರಾಟದ ಹಿಂದಿನ ಪ್ರಮುಖ ಕಾರಣವೆಂದರೆ ಕೊಹ್ಲಿ ಅವರ ಇಲೆವೆನ್ ಆಡುವಿಕೆಯ ಮೇಲಿನ ನಂಬಿಕೆಯ …
Read More »14 ‘ಕನ್ನಡ ಭಾಷಾ ದಿನ’ವೆಂದು ಆಚರಿಸಲು ಒತ್ತಾಯ
ಬೆಳಗಾವಿ: ’14ರಂದು ಹಿಂದಿ ದಿವಸ್‌ಗೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನವೆಂದು ಆಚರಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಇಲ್ಲಿನ ಕೇಂದ್ರ ಅಂಚೆ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಕನ್ನಡ ದಿನ ಆಚರಿಸುವಂತೆ ಕಚೇರಿ ಗೋಡೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸಿದರು. ಅಂಚೆ ಇಲಾಖೆ ಅಧಿಕಾರಿಗಳಿಗೆ ಸಿಹಿ ವಿತರಿಸಿದರು. ‘ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ ಹಾಗೂ ರೈಲು ನಿಲ್ದಾಣಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಆಡಳಿತದಲ್ಲಿ ಕನ್ನಡವನ್ನು ಬಳಸಬೇಕು. …
Read More »