ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಕೋವಿಡ್-19ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಗುಂಡಿ ತೋಡಲು ಜೆಸಿಬಿಯೊಂದಿಗೆ ಬಂದಿದ್ದ ಕುಟುಂಬದವರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಅವರು ಬಂದಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಮಾಜಸೇವಕಿ ಸರಳಾ ಹೆರೇಕರ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಬಂದ ಬಳಿಕ ನಿವಾಸಿಗಳು, …
Read More »ಕೊರೋನಾ : ರಾಜ್ಯದಲ್ಲಿ ಈಗೇಲ್ಲಿಗೆ ತಲುಪಿದೆ ಮಹಾಮಾರಿ ಹಂತ?
ಬೆಂಗಳೂರು : ರಾಜ್ಯದಲ್ಲಿ ಭಾನುವಾರ ಹೊಸದಾಗಿ 8,445 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, 8,611 ಮಂದಿ ಗುಣಮುಖರಾಗಿದ್ದಾರೆ. ಇದೇ ದಿನ 101 ಮಂದಿ ಮೃತಪಟ್ಟಿದ್ದು ಈವರೆಗೆ ಸಾವಿಗೀಡಾದವರ ಸಂಖ್ಯೆ ಸಂಖ್ಯೆ 8 ಸಾವಿರದ ಸಂಖ್ಯೆ ದಾಟಿ 8023ಕ್ಕೆ ಏರಿದೆ. ಸೆಪ್ಟೆಂಬರ್ 11ರಂದು ಸಾವಿನ ಸಂಖ್ಯೆ 7 ಸಾವಿರ ದಾಟಿತ್ತು. ಆ ನಂತರದ 10 ದಿನದಲ್ಲಿ 1000 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ನಡುವೆ, 8,611 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದರೊಂದಿಗೆ ಈವರೆಗೆ 4.13 ಲಕ್ಷ ಜನರು …
Read More »ಶಾಸಕರು ಸಚಿವರೇ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದು:H.D.D.
ನವದೆಹಲಿ: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದೆ. ಶಾಸಕರು ಸಚಿವರೇ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದು ಬಿ.ವೈ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿಎಂ ಬಿಎಸ್‍ವೈ ದೆಹಲಿ ಪ್ರವಾಸ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ವಿರೋಧದ ನಡುವೆಯೇ ಬಿಎಸ್‍ವೈ ಮತ್ತಷ್ಟು ದಿನಗಳ ಕಾಲ ಮುಂದುವರಿಯಲು ಹೈಕಮಾಂಡ್ ಸೂಚನೆ ನೀಡಿದೆ . ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು …
Read More »ಕೊಚ್ಚಿ ಹೋಗುತ್ತಿದ್ದಾಗ ಹಗ್ಗ ನೀಡಿದ್ರೂ ಬಾರದ ಯುವಕ – ಹೃದಯಾಘಾತದಿಂದ ಸಾವು
ಕಲಬುರಗಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವನೋರ್ವ ಭಯಗೊಂಡು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಕೂಕಿನ ಚಂದನಲ್ಲಿ ಗ್ರಾಮದ ಬಳಿ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಪೀರಶೆಟ್ಟಿ (29) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆ ನೀರಿನಿಂದ ಹಳ್ಳ ಕೊಳ್ಳಗಳು ತುಂಬಿ ರಭಸದಿಂದ ಹರಿಯುತ್ತಿವೆ. ಈ ಸಮಯದಲ್ಲಿ ಹಳ್ಳ ದಾಟಲು ಹೋದ ಪೀರಶೆಟ್ಟಿ ನೀರನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಆದರೆ ಹಳ್ಳಕ್ಕೆ ಆಡಲಾಗಿ ಹಾಕಿದ್ದ ಕಂಬವನ್ನು …
Read More »ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ
ಸವದತ್ತಿ) – ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ ಅವರನ್ನು ದೇವಸ್ಥಾನ ವತಿಯಿಂದ ರವಿ ಕೊಟಾರಗಸ್ತಿ ಹಾಗೂ ದೇವಸ್ಥಾನ ಸಿಬ್ಬಂದಿ ಶಾಲೂಹೊದಿಸಿ ಸತ್ಕರಿಸಿದರು. ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ರ ಮಾಳಗಿ, ಆರ್ ಎಚ್ ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಪಂಡಿತ ಯಡೂರಯ್ಯ, …
Read More »ಹೆಚ್‍ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪ್ರವಾಸದಲ್ಲಿದ್ದು, ಕೆಲಕಾಲ ಹಾಸನದ ಖಾಸಗಿ ರೆಸಾರ್ಟ್‍ನಲ್ಲಿ ವಿಶ್ರಾಂತಿ
ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪ್ರವಾಸದಲ್ಲಿದ್ದು, ಕೆಲಕಾಲ ಹಾಸನದ ಖಾಸಗಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ಕುಟುಂಬ ಸಮೇತ ಮಡಿಕೇರಿಗೆ ಪ್ರವಾಸ ತೆರಳಿದ್ದ ಕುಮಾರಸ್ವಾಮಿಯವರು, ಅಲ್ಲಿ ಒಂದು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಈಗ ಹಾಸನದ ಬೇಲೂರು, ಹಳೆಬೀಡು, ಗೊರೂರಿಗೆ ಭೇಟಿ ನೀಡುವ ಸಲುವಾಗ ಪತ್ನಿ, ಮಗ, ಸೊಸೆ ಜೊತೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ ಮಾಜಿ ಸಚಿವ ಹೆಚ್‍ಡಿ ರೇವಣ್ಣ ವಿರುದ್ಧ ಅರಕಲಗೂಡು …
Read More »ಸ್ನೇಹಿತರು ಕರೆದರೆಂದು ಹೋದವ ಹೆಣವಾದ- ಮಂಡ್ಯದಲ್ಲಿ ಒಂದೇ ತಿಂಗಳಲ್ಲಿ 7 ಕೊಲೆ
ಮಂಡ್ಯ: ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಇತ್ತೀಚಿಗೆ ಮರ್ಡರ್ ಸಿಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 7 ಮಂದಿಯ ಹತ್ಯೆ ನಡೆದಿದೆ. ಕಳೆದ ರಾತ್ರಿಯೂ ಯವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ 25 ವರ್ಷದ ಅಭಿಷೇಕ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ನೇಹಿತರು ಕರೆದರೆಂದು ಮನೆಯಿಂದ ಹೊರ ಹೋದವನು ಊರಿನ ಮಧ್ಯಭಾಗದಲ್ಲೇ ಹೆಣವಾಗಿದ್ದಾನೆ. ಘಟನೆಯಿಂದಾಗಿ ಜನರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ರಾತ್ರಿ 10 …
Read More »10 ತಿಂಗಳ ಮಗುವಿನ ಜೊತೆ ಸೊಸೆ ಮಾವನ ಜೊತೆ ಓಡಿ ಹೋಗಿದ್ದಾಳೆ.
ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಮಗನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಕೊನೆಗೆ ಸೊಸೆಯ ಜೊತೆಯೇ ಎಸ್ಕೇಪ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಮಹಿಳೆ ಸಲೀಂ ಮಗ ಅಬ್ದುಲ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗಳು ಮತ್ತು 10 ತಿಂಗಳ ಮಗ ಇದ್ದನು. ಆದರೆ ಮಾವ ಸಲೀಂ ತನ್ನ ಸೊಸೆ ಜೊತೆಯೇ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇವರ ಸಂಬಂಧದ ಬಗ್ಗೆ …
Read More »ಕೇಂದ್ರ ಸರ್ಕಾರ ವೈಫಲ್ಯಗಳ ಕುರಿತು ಸಂಸದ ಡಿ.ಕೆ. ಸುರೇಶ್ ಲೋಕಸಭೆಯಲ್ಲಿ ಧ್ವನಿ ಎತ್ತಿದರು.
ಹೊಸದಿಲ್ಲಿ: ಕೋವಿಡ್ ನಿರ್ವಹಣೆ ವೈಫಲ್ಯ, ಜನ ಹಾಗೂ ರೈತ ವಿರೋಧಿ ಕಾಯ್ದೆ, ಸಾಲದ ಹೊರೆ, ನಾನಾ ಇಲಾಖೆ ಖಾಸಹೀಕರಣ, ಜಿಡಿಪಿ ಕುಸಿತ, ರಸಗೊಬ್ಬರ ಕೊರತೆ ಸೇರಿ ಕೇಂದ್ರ ಸರ್ಕಾರ ವೈಫಲ್ಯಗಳ ಕುರಿತು ಸಂಸದ ಡಿ.ಕೆ. ಸುರೇಶ್ ಲೋಕಸಭೆಯಲ್ಲಿ ಧ್ವನಿ ಎತ್ತಿದರು. 2020-21ನೇ ಸಾಲಿನ ಬಜೆಟ್ ಅನುದಾನದ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಂಸದ ಸುರೇಶ್ ಅವರು, ಕೇಂದ್ರ ಸರ್ಕಾರ ದೇಶದ ಆರ್ಥಿಕತೆ ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. …
Read More »ಕೆಟ್ಟು ಹೋದ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಪಂಚಾಯಿತಿಗೆ ಬೀಗ ಮುತ್ತಿಗೆ ಹಿರಿಯರ ಮಧ್ಯಸ್ಥಿಕೆ ನಡುವೆ ಬೀಗ ತೆರವು
ಅಥಣಿ : ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಮಾಯನಟ್ಟಿಯಿಂದ ಶಿವನೂರು ಗ್ರಾಮದವರೆಗೆ 6 ಕಿಲೋ ಮೀಟರ್ ರಸ್ತೆ ಕೆಟ್ಟು ಗಿಡಗಂಟಿ ಮುಳ್ಳುಗಳು ಬೆಳೆದು ರಸ್ತೆ ಸಂಚಾರಕ್ಕೆ ಅವಕಾಶವಿಲ್ಲದಂತೆ ತುಂಬಾ ಕೆಟ್ಟು ಹೋಗಿದೆ ಎಂದು ಆರೋಪಿಸಿ ರಿಪೆರಿಗೆ ಒತ್ತಾಯಿಸಿ ಪಾರ್ಥನಹಳ್ಳಿ ಗ್ರಾಮ ಪಂಚಾಯಿತಿಗೆ ಶ್ರೀಶೈಲ್ ಕೆಂಪವಾಡ ನೇತೃತ್ವದಲ್ಲಿ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ವ್ಯಕ್ತಪಡಿಸಿದರು . ಗ್ರಾಮಸ್ಥ ಶ್ರೀಶೈಲ್ ಕೆಂಪವಾಡ ಮಾತನಾಡುತ್ತಾ ಕಳೆದ ಎರಡು ಮೂರು ವರ್ಷಗಳಿಂದ ಮಾಯನಟ್ಟಿಯಿಂದ ಶಿವನೂರು ವರೆಗೆ ರಸ್ತೆ ತುಂಬಾ …
Read More »