Breaking News

ರಾಜ್ಯ

ಮಾಸ್ಕ್ ಧರಿಸದೆ ವಿವಾಹದಲ್ಲಿ ಭಾಗವಹಿಸಿದ್ದ ಕಾಗೇರಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕೊರೊನಾ ಸೋಂಕು ದೃಢ

ಕಾರವಾರ: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಶಿರಸಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾಗಿದ್ದರೂ ಯಾವುದೇ ರೀತಿಯ ಲಕ್ಷಣಗಳು ಇಲ್ಲ ಹಾಗೂ ಆರೋಗ್ಯವಾಗಿದ್ದಾರೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ  ತಿಳಿಸಿದ್ದಾರೆ. ಸಧ್ಯ ಕಾಗೇರಿಯವರು ಹೋಮ್ ಐಸೋಲೇಶನ್‍ನಲ್ಲಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಾಗಿಲ್ಲ. ಇತ್ತೀಚಿಗೆ ಸಭಾಧ್ಯಕ್ಷರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ …

Read More »

ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿ ಅಂತ್ಯಕ್ರಿಯೆ

ಬ್ಯಾಡಗಿ: ಕೊರೊನಾ ರೋಗದಿಂದ ಮೃತಪಟ್ಟ ಹಿಂದೂ ಯುವಕನೊಬ್ಬನ ಅಂತ್ಯಕ್ರಿಯೆಯನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಾಲ್ವರು ನೆರವೇರಿಸಿ ಮಾನವೀಯತೆ ಹಾಗೂ ಸೌಹಾರ್ದತೆ ತೋರಿದ ಘಟನೆ ತಾಲೂಕಿನ ಖುರ್ದವೀರಾಪುರದಲ್ಲಿ ಸೋಮವಾರ ನಡೆದಿದೆ. ಖುರ್ದವೀರಾಪುರದ ಶಿವಪ್ಪ ಮಾರ್ತಾಂಡಪ್ಪ ಕುಮ್ಮೂರು (ಜೋಗಿಹಳ್ಳಿ)(45) ಕಳೆದ ಹಲವು ವರ್ಷದಿಂದ ಪಾವಗಡದಲ್ಲಿ ವಾಸವಾಗಿದ್ದ. ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಈತ ಪತ್ನಿ ಸೇರಿದಂತೆ ಕುಟುಂಬದ ಇನ್ನಿತರ ಸದಸ್ಯರನ್ನು ಬಿಟ್ಟು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ. ಬಳಿಕ ಕೊರೊನಾ ಪರೀಕ್ಷೆ …

Read More »

ಸಿರಗುಪ್ಪ ಬಳಿ ಕಾರು- ಲಾರಿ ನಡುವೆ ಭೀಕರ ಅಪಘಾತ: ಚಿಂಚೋಳಿಯ ನಾಲ್ವರ ಸಾವು

ಚಿಂಚೋಳಿ(ಕಲಬುರ್ಗಿ ಜಿಲ್ಲೆ): ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್ ಕಾರಣ ಸ್ವಗ್ರಾಮಕ್ಕೆ ಬರುವಾಗ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಸುಕಿನ 1.45ರ ಸುಮಾರಿಗೆ ನಡೆದಿದೆ. ಮೃತರು ಚಿಂಚೋಳಿ ತಾಲ್ಲೂಕಿನ ಚಿಮ್ಮಾಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರಾಗಿದ್ದಾರೆ. ಲಾಕ್‌ಡೌನ್ ಜಾರಿಯಿಂದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಬರುವಾಗ ಲಾರಿ ಗುದ್ದಿದೆ ಆಗ ಬಳ್ಳಾರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ (ತಂದೆ) ಬಸವರಾಜ ಭೀಮರಾವ ಬೆಳ್ಳೂರು(52), …

Read More »

ಅಘೋಷಿತ ಲಾಕ್​ಡೌನ್ ವೇಳೆಯೂ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ; ಇವರಷ್ಟೇ ಮಾತ್ರ ಪ್ರಯಾಣಿಸಬಹುದು?

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಘೋಷಣೆ ಮಾಡಿದೆ. ಈ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ವೇಳೆ ಎಲ್ಲ ಸಾರಿಗೆ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ, ಕೆಲವು ನಿರ್ದಿಷ್ಟ ಉದ್ಯೋಗಿಗಳ ಓಡಾಟದ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಿಎಂಟಿಸಿ ಬಸ್ …

Read More »

ಅಘೋಷಿತ ಲಾಕ್​ಡೌನ್ ವೇಳೆ ಏನಿರುತ್ತೆ, ಏನಿರಲ್ಲ, ನಿಯಮಗಳನ್ನು ವಿವರಿಸಿದ ಪೊಲೀಸ್ ಕಮಿಷನರ್ ಕಮಲ ಪಂಥ್

ಬೆಂಗಳೂರು: ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ ಇವತ್ತು ರಾತ್ರಿ 9 ಗಂಟೆಯಿಂದ ಹೊಸ ಗೈಡ್ ಲೈನ್ಸ್ ಜಾರಿಯಲ್ಲಿ ಇರುತ್ತೆ. ಈ ಮಾರ್ಗಸೂಚಿ ಪ್ರಕಾರ, ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆವರೆಗೂ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ನೀಡಲಾಗಿದೆ. ಹೋಮ್ ಡಿಲಿವರಿಗೆ ಅವಕಾಶ, ಇ ಕಾಮರ್ಸ್ ಗೆ ಅವಕಾಶ ಕಲ್ಪಿಸಲಾಗಿದೆ. ಬಾರ್, ಪಬ್​ಗಳಲ್ಲಿ ಮದ್ಯ ಪಾರ್ಸಲ್ ಗೆ ಅವಕಾಶ ಇದೆ. ಹತ್ತು ಗಂಟೆಯ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ. …

Read More »

ಮೇ ೦೨ ರಂದು ಮುಂಜಾನೆ ೮ ಗಂಟೆಯಿಂದ ಬೆಳಗಾವಿR.P.D. ಮಹಾವಿದ್ಯಾಲಯದಲ್ಲಿ , ಮತ ಎಣಿಕೆ ಕೋವಿಡ್- 19 ನೆಗೆಟಿವ್ ವರದಿ ಕಡ್ಡಾಯ

ಬೆಳಗಾವಿ :  ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆ ಕುರಿತು ಮತ ಎಣಿಕೆ ಕಾರ್ಯ ಮೇ ೦೨ ರಂದು ಮುಂಜಾನೆ ೮ ಗಂಟೆಯಿಂದ ಬೆಳಗಾವಿಯ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್-೧೯ ನೆಗೆಟಿವ್ ವರದಿ ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಎಸ್.  ತಿಳಿಸಿದ್ದಾರೆ. ಮತ ಎಣಿಕೆ ದಿನದಂದು ಅಭ್ಯರ್ಥಿಗಳು/ ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಮತ ಎಣಿಕೆ ಸಿಬ್ಬಂದಿ/ಮತ ಎಣಿಕೆ ಎಜೆಂಟರುಗಳಿಗೆ ಕೋವಿಡ್-೧೯ …

Read More »

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ. ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.   ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …

Read More »

ಜೆಎಸ್‌ಎಸ್ ಆಸ್ಪತ್ರೆಯಲ್ಲಿ 500 ಹಾಸಿಗೆ ನೀಡಲು ಸುತ್ತೂರು ಶ್ರೀಗಳಲ್ಲಿ ಮನವಿ

ಮೈಸೂರು, ಏಪ್ರಿಲ್ 27: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 500 ಹಾಸಿಗೆಯನ್ನು ಮೈಸೂರು ಜಿಲ್ಲಾಡಳಿತಕ್ಕೆ ನೀಡುವಂತೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಂಗಳವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗೆ ಮನವಿ ಮಾಡಿದರು. ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಆಗಮಿಸಿ, ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಚಿಕಿತ್ಸೆಗೆ ನಿಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿರುವ …

Read More »

ಮನೆಯಲ್ಲಿ ದಿನಸಿ ಸಂಗ್ರಹಿಸಿದ ಜನರು

ರಾಯಚೂರು: ಲಾಕ್‌ಡೌನ್‌ ದಿನಗಳಲ್ಲಿ ಅಗತ್ಯ ದಿನಸಿ ಸಿಗುತ್ತವೆಯೋ ಇಲ್ಲವೋ ಅಥವಾ ದುಬಾರಿ ಆಗಬಹುದು ಎನ್ನುವ ಆತಂಕದೊಂದಿಗೆ ಜನರು ಮುಗಿಬಿದ್ದು ಸೋಮವಾರ ದಿನಸಿ ಖರೀದಿಸುತ್ತಿರುವುದು ಕಂಡುಬಂತು. ಎಪಿಎಂಸಿ ಆವರಣ, ಚಂದ್ರಮೌಳೇಶ್ವರ ವೃತ್ತ ಹಾಗೂ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ವೃತ್ತ ಮಾರ್ಗದಲ್ಲಿರುವ ಮಳಿಗೆಗಳಲ್ಲಿ ಖರೀದಿ ಭಾರಾಟೆ ಜೋರಾಗಿತ್ತು. ಚೀಲಗಳನ್ನು ಹಿಡಿದು ಸರದಿ ನಿಂತಿದ್ದರು. ಸಾಮಾನ್ಯ ದಿಗಳಲ್ಲಿ ಒಂದು ಚೀಲದಲ್ಲಿ ಸರಕು ಖರೀದಿಸುತ್ತಿದ್ದವರು ಈಗ ಬೈಕ್‌, ಆಟೋ ಹಾಗೂ ಕಾರುಗಳಲ್ಲಿ ದಿನಸಿಗಳನ್ನು ತುಂಬಿಸಿಕೊಂಡು ಒಯ್ಯುತ್ತಿದ್ದಾರೆ. …

Read More »

ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಸರಕು ಸಾಗಣೆಗೆ ಮಾತ್ರ ವಾಹನ ಸಂಚಾರ ಇರುತ್ತದೆ. ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.   ಬೆಂಗಳೂರು ನಗರದಿಂದ ಇತರ ಪ್ರದೇಶಗಳಿಗೆ ತೆರಳುವ …

Read More »