ಕೊರೋನಾ ಸಾಂಕ್ರಾಮಿಕ ಸೋಂಕಿನ ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರುತ್ತಿರುವುದಕ್ಕೆ ಸಮಗ್ರ ಪುರಾವೆ ದೊರೆತಿದೆ. ಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ. ಸೋಂಕಿನಿಂದ ಅವರು ಕ್ಷಯರೋಗದಂತಹ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಇದರರ್ಥ ಧೂಮಪಾನ ಮಾಡದ ವ್ಯಕ್ತಿಗಳಿಗೆ ಹೋಲಿಸಿದರೆ ಧೂಮಪಾನಿಗಳು ಕೋವಿಡ್-19ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಧೂಮಪಾನಿಗಳಿಗೆ ಮೊದಲೇ ಶ್ವಾಸಕೋಶಗಳು ಹಾನಿಗೊಳಗಾಗಿರುವುದರಿಂದ ಅವರಿಗೆ ಕೊರೋನಾ …
Read More »ಕೊರೊನಾ ವಿರುದ್ಧ ಹೋರಾಡಲು ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿವಿ
ಹೈದರಾಬಾದ್: ವಿಶ್ವವ್ಯಾಪಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಹೈದರಾಬಾದ್‍ನ ವಿಶ್ವವಿದ್ಯಾಲಯ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ. ಸ್ಕೂಲ್ ಆಫ್ ಲೈಫ್ ಸೈನ್ಸ್ ಜೀವ ರಾಸಾಯನಿಕ ವಿಭಾಗದ ಅಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ‘ಟಿ ಸೆಲ್ ಎಪಿಟೋಪ್ಸ್’ ಎಂಬ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದಿದೆ. ಪ್ರಾಧ್ಯಾಪಕಿ ಡಾ. ಸೀಮಾ …
Read More »ಪ್ರಧಾನಿ ಪರಿಹಾರ ನಿಧಿಗೆ ಬರೋಬ್ಬರಿ 25 ಕೋಟಿ ರೂ. ನೀಡಿದ ನಟ ಅಕ್ಷಯ್ ಕುಮಾರ್..!
ನವದೆಹಲಿ : ಕೊರೋನಾ ಮಹಾಮಾರಿ ಪ್ರಪಂಚದಾದ್ಯಂತ ಮರಣಮೃದಂಗ ಬಾರಿಸುತ್ತಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೋನಾ ವಿರುದ್ಧ ಭಾರತ ಲಾಕ್ ಡೌನ್ ಹೋರಾಟ ಮಾಡುತ್ತಿದೆ. ಇದೆ ಹೊತ್ತಲ್ಲಿ ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಹಣಕಾಸಿನ ನೆರವನ್ನು ಕೋರಿದ್ದಾರೆ. ಈ ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ದೇಶದ ಜನರು ಕೈಜೋಡಿಸಿ, ಹಣಕಾಸಿನ ನೆರವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕ್ಷಣಮಾತ್ರದಲ್ಲೇ ಸ್ಪಂದಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಉಳಿತಾಯದಿಂದ ಬರೋಬ್ಬರಿ 25 ಕೋಟಿ ರೂ. …
Read More »ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್
ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳನ್ನು ತೆಗೆಯಬೇಕೆಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಕೊರೊನಾ ತಡೆಗೆ ಪ್ರಧಾನಿಗಳು ದೇಶವನ್ನು ಲಾಕ್‍ಡೌನ್ ಮಾಡಿದಾಗಿನಿಂದಲೂ ರಿಷಿ ಕಪೂರ್ ಈ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಟ್ವೀಟ್ ಮಾಡಿರುವ ರಿಷಿ ಕಪೂರ್, ಒಂದು ಕಾರಣಕ್ಕಾಗಿ ಪರವಾನಿಗೆ ಪಡೆದ ಮದ್ಯದಂಗಡಿಗಳನ್ನು ತೆರೆದರೆ ಸೂಕ್ತ ಎಂದಿದ್ದಾರೆ. ರಿಷಿ ಕಪೂರ್ ಟ್ವೀಟ್: ಸರ್ಕಾರ ಪ್ರತಿಸಂಜೆ ಲೈಸನ್ಸ್ ಹೊಂದಿರುವ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ …
Read More »ಗಣ್ಯಾತಿಗಣ್ಯರಿಗೂ ಕೊರೊನಾ ಕಾಟ, ಅಮೆರಿಕದ ಐವರು ಸಂಸದರಿಗೂ ಸೋಂಕು..!
ವಾಷಿಂಗ್ಟನ್, ಮಾ.28-ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕಿಲ್ಲರ್ ಕೊರೊನಾ ಸೋಂಕು ವಿವಿಧ ದೇಶಗಳ ಗಣ್ಯಾತಿಗಣ್ಯರು ಮತ್ತು ಖ್ಯಾತನಾಮರನ್ನೂ ಕಾಡುತ್ತಲೇ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿರುವ (1 ಲಕ್ಷಕ್ಕೂ ಹೆಚ್ಚು) ಅಮೆರಿಕದಲ್ಲಿ ಐವರು ಸಂಸದರಿಗೂ ಕೋವಿಡ್-19 ಸೋಂಕು ತಗುಲಿದೆ. ಅಮೆರಿಕದ ಕಾಂಗ್ರೆಸ್ಸಿಗ ಮೈಕ್ ಕೆಲ್ಲಿ ಅವರಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ ಐವರು ಸಂಸದರಿಗೆ ಈ ಸಾಂಕ್ರಾಮಿಕ ರೋಗ ಹಬ್ಬಿದೆ. ನಿನ್ನೆಯಷ್ಟೇ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ …
Read More »ಬ್ರಿಟನ್ ಪ್ರಧಾನಿಗೂ ಕೊರೋನಾ ಸೋಂಕು ದೃಢ…………..
ಲಂಡನ್ -: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಅವರೇ ದೃಢಪಡಿಸಿದ್ದಾರೆ. ನನಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ನಾನು ಸೆಲ್ಪ್ ಐಸೋಲೇಷನ್ ಮಾಡಿಕೊಳ್ಳಲಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ಸರ್ಕಾರವನ್ನು ನಿಭಾಯಿಸಲಿದ್ದೇನೆ” ಎಂದು ಅವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿದ್ದಾರೆ. ಬ್ರಿಟನ್‌ನಲ್ಲಿ ಸುಮಾರು 10 ಸಾವಿರ ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. 528 ಜನರು ಬಲಿಯಾಗಿದ್ದಾರೆ. …
Read More »ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ರೆ ಸಿಂಗಾಪುರದಲ್ಲಿ 6 ತಿಂಗಳು ಜೈಲು
ಸಿಂಗಾಪುರ: ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಿಂಗಾಪುರ ಸರ್ಕಾರ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಜನತೆ ಕಡ್ಡಾಯವಾಗಿ 1 ಮೀಟರ್(3.2 ಅಡಿ) ಅಂತರ ಕಾಯ್ದುಕೊಳ್ಳಬೇಕು. ಶಾಲೆ ಅಥವಾ ಕಂಪನಿಯಲ್ಲಿ 10ಕ್ಕಿಂತ ಹೆಚ್ಚು ಜನ ಸೇರಿದರೆ 10 ಸಾವಿರ ಸಿಂಗಾಪುರ ಡಾಲರ್(ಅಂದಾಜು 5.24 ಲಕ್ಷ ರೂ.) ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ …
Read More »ಕರೋನಾ ರುದ್ರನರ್ತನ : ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ, ಮೋದಿ ಮಹತ್ವದ ಸಲಹೆ.!
ನವದೆಹಲಿ, ಮಾ.27-ಕಿಲ್ಲರ್ ಕೊರೊನಾ (ಕೋವಿಡ್-19) ವಿರುದ್ಧ ಹೋರಾಟದಲ್ಲಿ ಸಂಯುಕ್ತ ರಂಗವಾಗಿ ಮುಂಚೂಣಿಯಲ್ಲಿರಲು ಪಣ ತೊಟ್ಟಿರುವ ಜಿ-20 ರಾಷ್ಟ್ರಗಳು, ಈ ಪಿಡುಗಿನಿಂದಾಗಿ ತೀವ್ರವಾಗಿ ಕುಸಿದಿರುವ ಜಾಗತಿಕ ಪುನ:ಶ್ಚೇತನಕ್ಕೆ 5 ಲಕ್ಷ ಕೋಟಿ ಡಾಲರ್ ನೆರವಿಗೆ ಮನವಿ ಮಾಡಿದೆ. ಮಾರಕ ಕೊರೊನಾ ವೈರಸ್ ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ವಿರುದ್ಧ ಪರಸ್ಪರ ಸಹಕಾರದೊಂದಿಗೆ ಸಂಘಟಿತ ಹೋರಾಟ ನಡೆಸಲು ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ ನಡೆಯಿತು. ಈ ತುರ್ತು ಸಭೆಯಲ್ಲಿ 20 ದೇಶಗಳ …
Read More »ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಎರಡು ಪ್ರಕರಣ
ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಎರಡು ಪ್ರಕರಣ ಮಂಗಳೂರು: 21 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನ ರಾಜ್ಯದಲ್ಲಿ 9 ಜನರಿಗೆ ಸೋಂಕು ತಗುಲಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಕೊರೊನಾ ಸೋಂಕಿತ ಪ್ರಕರಣ 64: 21 ವರ್ಷದ ಯುವಕ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ದಿನಾಂಕ 22.03.2020 ರಂದು ಭಾರತಕ್ಕೆ ವಾಪಸ್ಸಾಗಿರುತ್ತಾರೆ. ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ …
Read More »ಕರ್ನಾಟಕದಲ್ಲಿ ಲಾಕ್‍ಡೌನ್ ಸಡಿಲ ಆಗುತ್ತಿದೆ ಪ್ರಧಾನಿ ಮೋದಿ ಅಸಮಾಧಾನ
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಇಡೀ ದೇಶವನ್ನೇ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಮಾಡಿದ್ದರು. ಆದರೆ ಕರ್ನಾಟಕದಲ್ಲಿ ಲಾಕ್‍ಡೌನ್ ಸಡಿಲ ಆಗುತ್ತಿದೆ ಎಂದು ಪ್ರಧಾನಿ ಮೋದಿ ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಲಾಕ್‍ಡೌನ್ ಇದ್ದರೂ ಜನರ ಓಡಾಟ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಸೋಂಕು ಕಡಿಮೆ ಆಗುತ್ತಿಲ್ಲ. ಆದ್ದರಿಂದ ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಬೇಕು. ಹೀಗಾಗಿ ಇನ್ನಷ್ಟು ಕಠಿಣ ಕ್ರಮ …
Read More »
Laxmi News 24×7