Breaking News

ರಾಷ್ಟ್ರೀಯ

ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ. ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ

ಯಾದಗಿರಿ: ಸೋಮವಾರ(ಸೆ. 23) ಸಿಡಿಲು ಬಡಿದು ನಾಲ್ವರು ಮೃತಪಟ್ಟದ್ದರು ಇಂದು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ತಾಂಡಾಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.   ಇಂತಹ ಘಟನೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ಕುಟುಂಬದ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದಿಂದ ಏನೆಲ್ಲ ಪರಿಹಾರ ಇದೆಯೋ ಅದನ್ನು ಆ ಕುಟುಂಬಗಳಿಗೆ ಒದಗಿಸಲು ಅಧಿಕಾರಿಗಳಿಗೆ …

Read More »

ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ‌ ಖಂಡನೆ; ಮನವಿ ಸಲ್ಲಿಕೆ

ಮುಧೋಳ: ನಗರದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಡೆದ ಪ್ರತಿಭಟನೆಯನ್ನು ಖಂಡಿಸಿ ಹಿಂದೂ ಪರ‌ ಸಂಘಟನೆ ಕಾರ್ಯಕರ್ತರು ಸೆ.24ರ ಮಂಗಳವಾರ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು.   ಜಡಗಣ್ಣ ಬಾಲಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಶಿವಾಜಿ ವೃತ್ತಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ಹನಮಂತ ಮಳಲಿ, …

Read More »

ಅಕ್ರಮವಾಗಿ ಕರುಗಳ ಸಾಗಾಟ; ಕಂಟೈನರ್‌ ವಶ, ಇಬ್ಬರ ಬಂಧನ

ಹುಣಸೂರು: ಅಕ್ರಮವಾಗಿ ಒಂದೇ ಕಂಟೈನರ್‌ನಲ್ಲಿ 42 ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬಿಳಿಕೆರೆ ಠಾಣಾ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಸೆ.24ರ ಮಂಗಳವಾರ ನಡೆದಿದೆ. ಹುಣಸೂರು ತಾಲೂಕಿನ ರತ್ನಪುರಿ ಹಾಗೂ ಚಾಮರಾಜನಗರದ ಇಬ್ಬರನ್ನು ಬಂಧಿಸಿ, ವಾಹನ ವಶಕ್ಕೆ ಪಡೆಯಲಾಗಿದೆ.   ಹುಣಸೂರು ತಾಲೂಕಿನ ರತ್ನಪುರಿಯಿಂದ ಕೆ.ಆರ್.ನಗರ, ಗೊಮ್ಮಟಗಿರಿ ಮಾರ್ಗವಾಗಿ ಮೈಸೂರು ಕಡೆಗೆ ಕಂಟೈನರ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗ್ಗೆ ಬೆನ್ನಟ್ಟಿ ಮನುಗನಹಳ್ಳಿ ಬಳಿಯಲ್ಲಿ …

Read More »

ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

ರಬಕವಿ-ಬನಹಟ್ಟಿ: ಶ್ರೀ ಕಾಡಸಿದ್ಧೇಶ್ವರ ರಥೋತ್ಸವಕ್ಕೆ ಅದ್ಧೂರಿ ಮಂಗಳವಾರ ರಾತ್ರಿ 8.00ಕ್ಕೆ ಚಾಲನೆ ದೊರೆಯಿತು. ಅದಕ್ಕೂ ಮುಂಚೆ ವಿದ್ಯುತ್‌ದೀಪ ಹಾಗೂ ಅಪಾರ ಪ್ರಮಾಣದ ಹೂವುಗಳಿಂದ ಅಲಂಕೃತವಾದ ರಥಕ್ಕೆ (ತೇರಿಗೆ) ನಗರದ ಸಮಸ್ತ ಹಿರಿಯರು ಸಂಜೆ 6 ಗಂಟೆಗೆ ಪೂಜೆ ಸಲ್ಲಿಸಿ ಕಾಯಿ ಒಡೆಯುವುದರ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಶ್ರೀ ಕಾಡಸಿದ್ಧೇಶ್ವರ ಮಹಾರಾಜ ಕಿ ಜೈ’ ಎಂಬ ಜಯಘೋಷಗಳ ಮಧ್ಯೆ ಜಾತ್ರೆಯ ಪ್ರಥಮ ದಿನ ಬಾನಂಗಳದಲ್ಲಿ ಹಾರಾಡಿದ ಪಟಾಕಿಗಳ ಸಂಭ್ರಮ, ಸಡಗರದ ನಡುವೆ …

Read More »

ಮೌಲ್ಯಮಾಪನ ಬಹಿಷ್ಕರಿಸಿ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಸದಸ್ಯರಿಂದ ಪ್ರತಿಭಟನೆ

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಸದಸ್ಯರಿಂದ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ. ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ ಹೇಳಲಾಗಿದೆ.   ಅರ್ಥಶಾಸ್ತ್ರ ವಿಷಯವು ವಾಣಿಜ್ಯ ವಿಭಾಗದ ತಾಯಿಬೇರು ಇದ್ದಂತೆ ಆದರೆ ವಾಣಿಜ್ಯಶಾಸ್ತ್ರ ವಿಭಾಗದ ಕೆಲವರ ಕುತಂತ್ರದಿಂದ ಅಕ್ರಮವಾಗಿ ಅರ್ಥಶಾಸ್ತ್ರ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. ಅರ್ಥಶಾಸ್ತ್ರ ಅನುದಾನಿತ ಹಾಗೂ ಅತಿಥಿ ಉಪನ್ಯಾಸಕರಿಗೆ …

Read More »

ಬೆಂಗಳೂರು : ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ರೇಡ್ : ದಾಳಿಯ ವೇಳೆ ಗಾಂಜಾ, ಲಿಕ್ಕರ್​​​ ಬಾಟಲ್​ ಪತ್ತೆ!

ಬೆಂಗಳೂರು : ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ರೇಡ್ : ದಾಳಿಯ ವೇಳೆ ಗಾಂಜಾ, ಲಿಕ್ಕರ್​​​ ಬಾಟಲ್​ ಪತ್ತೆ!   ಬೆಂಗಳೂರು :ಬೆಂಗಳೂರಿನ ಅಬಕಾರಿ ಕಚೇರಿಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆಗೆ ಲೋಕಾಯುಕ್ತ ನ್ಯಾಯಮೂರ್ತಿ.ಬಿ‌.ಎಸ್ ಪಾಟೀಲ್ ವಾರಂಟ್ ಜಾರಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಅಬಕಾರಿ ಇಲಾಖೆ ಕಚೇರಿಗಳ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಸರ್ಕಾರಿ ಕಚೇರಿಯಲ್ಲಿ ಗಾಂಜಾ, ಲಿಕ್ಕರ್​​​ ಬಾಟಲ್​ ಪತ್ತೆಯಾಗಿವೆ.   …

Read More »

ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಮುನಿರತ್ನಗೆ 12 ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಕೋರ್ಟ್

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 12 ದಿನ ಎಸ್‌ಐಟಿ ಕಸ್ಟಡಿಗೆ SIT Custody ನೀಡಿ 42ನೇ ಎಸಿಎಂಎಂ ಕೋರ್ಟ್​ನ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಆದೇಶ ನೀಡಿದ್ದಾರೆ. ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ದ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮುನಿರತ್ನ ಅವರನ್ನು ಕಳೆದ ಶುಕ್ರವಾರ ಬೆಳಿಗ್ಗೆ ಬಂಧಿಸಲಾಗಿದ್ದು, ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದರ ಬೆನ್ನಲ್ಲೆ ಹೆಚ್ಚಿನ ತನಿಖೆಗಾಗಿ ಇಂದು …

Read More »

ಸರ್ಕಾರಿ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ನಾಳೆಯಿಂದ ವಾರದ ‘6 ದಿನ ಮೊಟ್ಟೆ’ ವಿತರಣೆ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಾರಕ್ಕೆ 6 ದಿನ ಮೊಟ್ಟೆ ವಿತರಣೆ ಮಾಡಲಾಗುತ್ತದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ 1 ರಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆಅವರಲ್ಲಿರುವ ಅಪೌಷ್ಟಿಕತೆ ನಿವಾರಿಸಲು, ರಕ್ತ ಹೀನತೆ ತಡೆಗಟ್ಟಲು, ಬಹು …

Read More »

ಮಳೆ: ರಸ್ತೆ ಮೇಲೆ ಹರಿದ ಚರಂಡಿ ನೀರು

ರಾಮದುರ್ಗ: ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ರಭಸದಿಂದ ಸುರಿದ ಮಳೆಯಿಂದಾಗಿ ಪಟ್ಟಣದ ಇಕ್ಕೆಲಗಳಲ್ಲಿ ನೀರು ಹರಿದು ಸ್ವಚ್ಛಗೊಂಡಿತು. ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿದು ಕೆಲಕಾಲ ರಸ್ತೆ ಸಂಚಾರ ನಿಂತಿತ್ತು.   ಪಟ್ಟಣದಲ್ಲಿ ಹಾಯ್ದು ಹೋಗಿರುವ ಕೆಶಿಫ್‌ ರಸ್ತೆ ಮಗ್ಗುಲಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ರಸ್ತೆಯನ್ನೆಲ್ಲ ಆವರಿಸಿತ್ತು. ಪಕ್ಕದ ಅಂಬೇಡ್ಕರ್‌ ಕಾಲೊನಿಯಲ್ಲಿಯೂ ನೀರು …

Read More »

ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಆಗ್ರಹ: ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಬೆಳಗಾವಿ: ಸರ್ಕಾರಿ ಮಾರ್ಗಸೂಚಿ ಪ್ರಕಾರ, 100 ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ, ಸಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಪೌರ ಕಾರ್ಮಿಕರು ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪೌರ ಕಾರ್ಮಿಕರ ದಿನಾಚರಣೆ ಬಹಿಷ್ಕರಿಸಿದ ಅವರು, ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಸರ್ಕಾರ ಪೌರ ಕಾರ್ಮಿಕರ ದಿನವನ್ನು ಅದ್ದೂರಿಯಾಗಿ …

Read More »