ಬೆಂಗಳೂರು,ಏ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ರೋಗ ಕೊರೊನಾ ವೈರಸ್ ಹರಡುವಿಕೆ ಶೀಘ್ರದ ಲ್ಲೇ ನಿಯಂತ್ರಣಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಕೊರೊನಾ ಹೋರಾಟದಲ್ಲಿ ಈಗ ಮತ್ತೊಂದು ಹೆಜ್ಜೆ ಇಡಲಾಗಿದೆ ಎಂದರು. ಸಹಾಯವಾಣಿಯ ಉದ್ದೇಶ ರಾಜ್ಯದ ಎಲ್ಲಾ ನಿವಾಸಿಗಳಿಗೆ …
Read More »ಪೆನ್ಷನ್ ಹಣ ಸಿಗದೆ ಸಂಕಷ್ಟದಲ್ಲಿ ವಿಕಲಚೇತನೆ – ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ …
Read More »ಗದಗ:ಲಾಕ್‍ಡೌನ್ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ನೆಪದಲ್ಲಿ ಜನರು ಮನೆಬಿಟ್ಟು ಮಾರ್ಕೆಟ್‍ಗೆ
ಗದಗ: ಕೊರೊನಾ ವೈರಸ್ ತಡೆಗೆ ಲಾಕ್‍ಡೌನ್ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ನೆಪದಲ್ಲಿ ಜನರು ಮನೆಬಿಟ್ಟು ಮಾರ್ಕೆಟ್‍ಗೆ ಲಗ್ಗೆ ಇಟ್ಟಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಜನರನ್ನು ಗುಂಪು ಸೇರುವುದನ್ನು ತಡೆಯುವುದೇ ಪೊಲೀಸರಿಗೆ ತಲೆನೋವಾಗಿದೆ. ನಗರದ ಗ್ರೇನ್ ಮಾರ್ಕೆಟ್ ಹಾಗೂ ಲಕ್ಷ್ಮೇಶ್ವರ ಪಟ್ಟಣದ ಮಾರ್ಕೆಟ್‍ನಲ್ಲಿ ಜನಸ್ತೋಮ ನಿರ್ಮಾಣವಾಗಿದೆ. ಜಿಲ್ಲೆನಲ್ಲಿ ಲಾಕ್‍ಡೌನ್ ನಿಯಮ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕೊರೊನಾ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ಮಾಡಲು ಜನರು ಹೂವು, ಹಣ್ಣು, ದಿನಸಿ, ಬಟ್ಟೆ …
Read More »ಬಳ್ಳಾರಿ: ಮಾಹಾ ಮಾರಿ ಕೊರೊನಾ ವಿರುದ್ಧ ಹೋರಾಡಲು ಗಣಿ ನಾಡು ಬಳ್ಳಾರಿಯ ಗಣಿ ಕಂಪನಿಗಳು ಸಹ ಸಾತ್
ಬಳ್ಳಾರಿ: ಮಾಹಾ ಮಾರಿ ಕೊರೊನಾ ವಿರುದ್ಧ ಹೋರಾಡಲು ಗಣಿ ನಾಡು ಬಳ್ಳಾರಿಯ ಗಣಿ ಕಂಪನಿಗಳು ಸಹ ಸಾತ್ ನೀಡಿವೆ. ಬಳ್ಳಾರಿ ನಗರದ ಸುತ್ತ ಸ್ಯಾನಿಟೈಜರ್ ಸಿಂಪಡಣೆ ಮಾಡುವ ಮೂಲಕ ತಮ್ಮದೇ ಆದ ಸಹಾಯ ಮಾಡಿವೆ. ಲಾಕ್‍ಡೌನ್ ಸಮಯದಲ್ಲಿ ಜಿಲ್ಲೆಯ ಕೈಗಾರಿಕೆಗಳು ಸಹಾಯ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕಲು ಕೇಳಿದ್ದರು. ಹೀಗಾಗಿ ಬಳ್ಳಾರಿಯ ಎನ್‍ಎಮ್‍ಡಿಸಿ ಕಂಪನಿ ಜಿಲ್ಲಾಡಳಿತಕ್ಕೆ ಸಾತ್ ನೀಡಿದ್ದು, ಕಂಪನಿ ವತಿಯಿಂದ ನಗರದ ನೈರ್ಮಲ್ಯೀಕರಣ ಕೈಗೊಳ್ಳಲು ಮುಂದಾಗಿದೆ. ನಗರದ ಜನ ನಿಬಿಡ …
Read More »ಉಚಿತ ಹಾಲಿನಿಂದ ರಾಜ್ಯದಲ್ಲಿ ಕೊರೋನಾ ಹರಡುವುದು ಖಚಿತ..!
ಬೆಂಗಳೂರು, ಏ.22- ಸರ್ಕಾರವೇನೋ ಬಡವರಿಗಾಗಿ ಉಚಿತ ಹಾಲು ನೀಡುತ್ತಿದೆ. ಆದರೆ ಇದನ್ನು ಪಡೆಯಲು ಜನ ಮುಗಿ ಬೀಳುತ್ತಿರುವುದನ್ನು ನೋಡಿದರೆ ಮಹಾ ಮಾರಿ ಕೊರೊನಾ ಉಚಿತವಾಗಿ ಹರಡುತ್ತಿದೆಯೇನೋ ಎಂದೆನಿಸುತ್ತಿದೆ.ಬಿಟ್ಟಿ ಹಾಲು ಪಡೆಯಲು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಾ ಮುಂದು ತಾ ಮುಂದು ಎಂದು ನುಗ್ಗುತ್ತಿರುವುದು ಒಬ್ಬರ ಮೇಲೊಬ್ಬರು ಬಿದ್ದು ಪೈಪೋಟಿಗೆ ಬೀಳುತ್ತಿರುವುದರಿಂದ ಹಾಲು ಉಚಿತ ಕೊರೊನಾ ಖಚಿತ ಎಂಬಂತಾಗಿದೆ. ನಗರದ ಯಲಹಂಕ, ಬಾಪೂಜಿ ನಗರ, ನೆಲಮಂಗಲ ಮುಂತಾದೆಡೆ ಉಚಿತ ಹಾಲು …
Read More »ಬೆಂಗಳೂರಲ್ಲಿ ಲಾಕ್‍ಡೌನ್ ಮತ್ತಷ್ಟು ಟೈಟ್ : ರಸ್ತೆಗಿಳಿದರೆ ವಾಹನ ಸೀಜ್ ಆಗುತ್ತೆ ಹುಷಾರ್..!
ಬೆಂಗಳೂರು, ಏ.22- ಬೇಕಾಬಿಟ್ಟಿ ವಾಹನ ಸಂಚಾರದಿಂದ ನಿನ್ನೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಂಚಾರಿ ಪೊಲೀಸರು ಇಂದು ನಗರದಲ್ಲಿ ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ 1000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದುವರೆಗೂ 759 ವಾಹನಗಳನ್ನು ವಶಪಡಿಸಿಕೊಂಡಿದ್ದು, ತಪಾಸಣೆ ಮುಂದುವರಿಸಿರುವ ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ವಾಹನಗಳ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದು, ವಾಹನ …
Read More »BIG BREAKING : ಭಾರತದಲ್ಲೂ ಮೇ.3ಕ್ಕೆ ಮುಗಿಯಲ್ಲ ಲಾಕ್‍ಡೌನ್..!
ನವದೆಹಲಿ, ಏ.22- ವಿಶ್ವಾದ್ಯಂತ ಕಾಡಿರುವ ಕೊರೊನಾ ಸೋಂಕನ್ನು ಹಿಮ್ಮೆಟ್ಟಿರುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಲಾಕ್‍ಡೌನ್‍ಅನ್ನು ಜೂನ್‍ವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ಭಾರತದಲ್ಲೂ ಮೇ 3ರ ನಂತರ ಮತ್ತೆ ಇದೇ ಪರಿಸ್ಥಿತಿ ಮುಂದುವರಿಯಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್, ರಷ್ಯಾ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಕೊರೊನಾ ಹತೋಟಿಗೆ ತರಲು ಲಾಕ್‍ಡೌನ್‍ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಮುಂಬರುವ ಮೇ ಅಂತ್ಯದವರೆಗೆ ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ …
Read More »ಬೆಳಗಾವಿಯ ಕೊರೋನಾ ವೈರಾಣು ಟೆಸ್ಟಿಂಗ್ ಲ್ಯಾಬ್ ಟೆಸ್ಟಿಂಗ್ ಪ್ರಾರಂಭ..
ಬೆಳಗಾವಿ- ಬೆಳಗಾವಿಯ ಕೆ ಎಲ್ ಈ ಆಸ್ಪತ್ರೆ ಎದುರಿನ ಪಾರಂಪರಿಕ ಔಷಧಿ ಸಂಶೋಧನಾ ಕೇಂದ್ರದಲ್ಲಿ ಕೊರೋನಾ ವೈರಾಣು ಟೆಸ್ಟ್ ಮಾಡುವ ಲ್ಯಾಬ್ ಸೆಟಲ್ ಮಾಡುವ ಕೆಲಸ ಅಹೋರಾತ್ರಿ ನಡೆಯುತ್ತಿದೆ. ಬೆಳಗಾವಿಯ ಲ್ಯಾಬ್ ನಲ್ಲಿ ಈಗ ಶಂಕಿತರ ಗಂಟಲು ದ್ರವಗಳನ್ನು ಟೆಸ್ಟ್ ಮಾಡುವ ಟ್ರೈಲ್ ನಡೆಯುತ್ತಿದ್ದು.ಬಹುಶ ನಾಳೆಯಿಂದ ಬೆಳಗಾವಿಯ ಲ್ಯಾಬ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ . ಬೆಳಗಾವಿಯ ಪ್ರಯೋಗಾಲಯ ಪೂರ್ಣ ಪ್ರಮಾಣದಲ್ಲಿ ನಾಳೆಯಿಂದ …
Read More »ಲಾಕ್‍ಡೌನ್ ನಡ್ವೆ ಪೊಲೀಸರ ಮೊಬೈಲ್ ಕದ್ದ ಕಳ್ಳರು………..
ಬೆಂಗಳೂರು: ಲಾಕ್‍ಡೌನ್ ನಡುವೆಯೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಪೊಲೀಸ್ ಪೇದೆಗಳಿಬ್ಬರ ಮೊಬೈಲ್ ಕದ್ದಿದ್ದಾರೆ. ಪಾದರಾಯನಪುರದಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಸ್ಥಳೀಯರನ್ನು ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದರು. ಈ ವೇಳೆ ಕೆಲವರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ರು. ಈ ಸಮಯದಲ್ಲಿಯೇ ಕಳ್ಳ ಪೇದೆಗಳಿಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಸದ್ಯ ಕಳ್ಳತನ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾಕ್‍ಡೌನ್ ಇದ್ರೂ ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚು ಬೈಕ್ ಗಳು ರಸ್ತೆಗಿಳಿದಿವೆ. ಬೆಂಗಳೂರು-ತುಮಕೂರು …
Read More »ಮೊಬೈಲ್ ಅವಾಂತರದ ಚಿತ್ರಣ ನೀಡಿದ ಕೆಜಿಎಫ್ ಸಂಗೀತ ನಿರ್ದೇಶಕ…….
ಬೆಂಗಳೂರು: ಲಾಕ್‍ಡೌನ್ ದಿನಗಳನ್ನು ಎಲ್ಲ ನಟ, ನಟಿಯರು ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ತಿರುಗಿದರೆ, ಇನ್ನೂ ಕೆಲವರು ಮನರಂಜನೆ, ಸಾಮಾಜಿಕ ಕಾರ್ಯ, ಸಹಾಯದ ರೀತಿಯ ಕೆಲಸಗಳಲ್ಲಿ ತೊಡಗಿದ್ದಾರೆ. ಬಿಡುವಿದ್ದಾಗಲೆಲ್ಲ ಕಮ್ಮಾರಿಕೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇಂದು ಮೊಬೈಲ್ ದುರ್ಬಳಕೆಯ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ. ಹೌದು ಯುವಕರಿಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಮೊಬೈಲ್ ಕುರಿತು ಜಾಗೃತಿ ಮೂಡಿಸಿರುವ ರವಿ ಬಸ್ರೂರ್, ಸಂಗೀತದ …
Read More »
Laxmi News 24×7