ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ರಾಜನಕಟ್ಟಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಲಗಮಣ್ಣ ಬಾದರವಾಡಿ, ಮಲ್ಲಪ್ಪಾ ನಿ …
Read More »ಬೆಳಗಾವಿ | ಬೋಟ್ ಪಲ್ಟಿ: ತಪ್ಪಿದ ಅನಾಹುತ
ಬೆಳಗಾವಿ: ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದ ಬಳಿ ಗುರುವಾರ, ಎನ್‌ಡಿಆರ್‌ಎಫ್ ತಂಡ ಬೋಟ್ ಕೃಷ್ಣಾ ನದಿ ಸೆಳವಿಗೆ ಸಿಕ್ಕು ಪಲ್ಟಿಯಾಯಿತು. ಎಲ್ಲ ಸಿಬ್ಬಂದಿ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ಇಲ್ಲಿರುವ ಜಾಕ್ವೆಲ್ ಕೃಷ್ಣಾ ನದಿ ನೀರಿನಲ್ಲಿ ಮುಳುಗಿದೆ. ಇದರಿಂದ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಜ್ವಾಕ್ವೆಲ್ ದುರಸ್ತಿಗೆ ವಾಟರ್ ಮ್ಯಾನ್, ಲೈನ್ ಮ್ಯಾನ್ ಹಾಗೂ ಎನ್‌ಡಿಆರ್‌ಎಫ್ ತಂಡದವರು ಬೋಟ್ ಮೂಲಕ ತೆರಳಿದ್ದರು. ನೀರಿನ ರಭಸಕ್ಕೆ ಬೋಟ್ ನಿಯಂತ್ರಣ …
Read More »ಹೊಟ್ಟೆ ತುಂಬಿಸದ ಕಾಳಜಿ ಕೇಂದ್ರ. ಸಂತ್ರಸ್ಥರೇ ತಯಾರಿಸುತ್ತಿದ್ದಾರೆ ಅಡುಗೆ
ಮುಧೋಳ: ಘಟಪ್ರಭಾ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ನೆರವಾಗಬೇಕಿದ್ದ ಕಾಳಜಿ ಕೇಂದ್ರಗಳು ಸಂತ್ರಸ್ಥರ ಹೊಟ್ಟೆ ತುಂಬಿಸುತ್ತಿಲ್ಲ. ಅರೆಹೊಟ್ಟೆ ಊಟ ತಡೆಯದೆ ಸಂತ್ರಸ್ಥರು ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಬಳಕೆ ಮಾಡಿ ಹಚ್ಚಿನ ಆಹಾರ ತಯಾರಿಸುತ್ತಿದ್ದಾರೆ. ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಆರಂಭಿಸಿರುವ ಬಿ.ಬಿ. ಮುಧೋಳ ಶಾಲೆಯಲ್ಲಿನ ಸಂತ್ರಸ್ಥರು ತಮ್ಮ ಅಗತ್ಯ ಅಡುಗೆಗಾಗಿ ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಒಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಚಪಾತಿ ಸಾಲಲ್ಲ : ಹಳ್ಳಿಗಾಡಿನ ರೈತಾಪಿ ವರ್ಗಕ್ಕೆ ಹೊಟ್ಟೆ ತುಂಬಾ ರೊಟ್ಟಿ ತಿಂದಾಗ …
Read More »ಪ್ರವಾಹದಿಂದ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ’
ಬೆಳಗಾವಿ: ‘ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಊಟೋಪಹಾರ, ಔಷಧ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಹದಿಂದ ಜನರು ಮತ್ತು ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು. ಅತಿವೃಷ್ಟಿಯಿಂದ ಉಂಟಾದ ಹಾನಿ, ಪ್ರವಾಹ ನಿರ್ವಹಣೆ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಆಗಸ್ಟ್‌ನಲ್ಲಿ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆ …
Read More »ಬೆಳಗಾವಿ ಹುಡುಗನ ಫ್ಯೂಸ್ ಕಿತ್ತ ಗೌಡ್ತಿ
ಬೆಳಗಾವಿ : ಬೆಂಗಳೂರಿನ ಕಸ್ತೂರಬಾ ನಗರದ ಯುವತಿ ಪ್ರಿಯಾಂಕಾ(24) ಬೆಳಗಾವಿಯ ಅಲಾರವಾಡ ಗ್ರಾಮದ ರಾಹುಲ್ ಎಂಬ ಯುವಕ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದ ಸುದ್ದಿ ನಿನ್ನೆ ವೈರಲ್ ಆಗಿತ್ತು. ಆದರೆ ಸಧ್ಯ ಈ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಪ್ರೀತಿ ಮದುವೆಗೆ ಬಂದು ನಿಂತಿತ್ತು. ನಿನ್ನೆಯಷ್ಟೇ ಯುವತಿ ಹಾಗೂ ಬೆಳಗಾವಿ ಯುವಕನ ಜೊತೆ ಮದುವೆಯಾಗಿತ್ತು.
Read More »ಕಣಕುಂಬಿ ಅರಣ್ಯ: 11.5 ಸೆಂ.ಮೀ ಮಳೆ
ಖಾನಾಪುರ: ತಾಲ್ಲೂಕಿನ ಕಣಕುಂಬಿ, ಲೋಂಡಾ, ನಾಗರಗಾಳಿ, ಗುಂಜಿ ಮತ್ತು ಭೀಮಗಡ ಅರಣ್ಯಪ್ರದೇಶದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಉಳಿದೆಡೆ ಸಾಧಾರಣ ಮಳೆಯಾಗಿದೆ. ಕಂದಾಯ ಇಲಾಖೆಯಂತೆ ಕಣಕುಂಬಿ ಅರಣ್ಯದಲ್ಲಿ 11.5 ಸೆಂ.ಮೀ, ಲೋಂಡಾ-9 ಸೆಂ.ಮೀ, ಜಾಂಬೋಟಿ ಸುತ್ತಮುತ್ತ 6.2 ಸೆಂ.ಮೀ ಮತ್ತು ಉಳಿದೆಡೆ ಸರಾಸರಿ 5 ಸೆಂ.ಮೀ ಮಳೆ ಸುರಿದಿದೆ. ಪಟ್ಟಣದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ತಾಲ್ಲೂಕಿನ ನಂದಗಡ, ಹಲಸಿ ಭಾಗದಲ್ಲಿ ಸಂಜೆ ತುಂತುರು ಮಳೆಯಾಗಿದೆ. …
Read More »ಕೋರೆ ಜನ್ಮದಿನ: ಉಚಿತ ಹೃದ್ರೋಗ ಚಿಕಿತ್ಸೆ
ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ, ಇಲ್ಲಿನ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 100 ಜನರಿಗೆ ಆಂಜಿಯೊಗ್ರಫಿ ಹಾಗೂ 25 ಹೃದ್ರೋಗಿಗಳಿಗೆ ಆಂಜಿಯೊಪ್ಲಾಸ್ಟಿಯನ್ನು ಉಚಿತವಾಗಿ ಮಾಡಲಾಗುವುದು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ. ದಯಾನಂದ ತಿಳಿಸಿದರು. ‘ಆರ್ಥಿಕವಾಗಿ ಹಿಂದುಳಿದವರು ಮಾತ್ರ ಇದನ್ನು ಬಳಸಿಕೊಳ್ಳಲು ಸಾಧ್ಯ. ಈಗಾಗಲೇ ಸರ್ಕಾರದ ವೈದ್ಯಕೀಯ ಸವಲತ್ತು, ವಿಮೆ ಅನುಕೂಲ ಇದ್ದವರಿಗೆ ಬರುವುದಿಲ್ಲ. …
Read More »ಬೆಳಗಾವಿ: 41 ಸೇತುವೆಗಳು ಮುಳುಗಡೆ
ಬೆಳಗಾವಿ/ರಾಯಚೂರು: ರಾಜ್ಯದ ವಿವಿಧೆಡೆ ಭಾನುವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ 41 ಸೇತುವೆಗಳು ಮುಳುಗಡೆಯಾಗಿವೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಕೃಷ್ಣಾ ಪ್ರವಾಹದಲ್ಲಿ ಎರಡು ಸೇತುವೆಗಳು, ಒಂದು ಬ್ಯಾರೇಜ್ ಮುಳುಗಡೆಯಾಗಿದೆ. ಎಲೆಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ವೃಂದಾವನ ಹಾಗೂ ಜಪದ ಕಟ್ಟೆ ತುಂಗಭದ್ರಾ ನದಿ ನೀರಿನಿಂದ ಜಲಾವೃತವಾಗಿವೆ. …
Read More »ನಡುಗಡ್ಡೆಯಾದ ಢವಳೇಶ್ವರ, ಹುಣಶ್ಯಾಳ, ಮಸಗುಪ್ಪಿ
ಮೂಡಲಗಿ: ತಾಲ್ಲೂಕಿನ ಕೊನೆಯ ಗ್ರಾಮಗಳಾಗಿರುವ ಹುಣಶ್ಯಾಳ ಮತ್ತು ಢವಳೇಶ್ವರ ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಭಾನುವಾರ ಬೆಳಿಗ್ಗೆಯಿಂದ ಅಕ್ಷರಶಃ ನಡುಗಡ್ಡೆಗಳಾಗಿವೆ. ಹುಣಶ್ಯಾಳ ಪಿವೈ ಗ್ರಾಮದ ಹಣಮಂತ ದೇವರ ದೇವಾಲಯವು ಜಲಾವೃತಗೊಂಡಿದೆ. ಶನಿವಾರ ಸಂಜೆಯಿಂದ ನದಿಯ ನೀರಿನ ಪ್ರಮಾಣ ಏರುತ್ತಿರುವುದರಿಂದ ಇಡೀ ಊರಿನ ಜನ, ಜಾನುವಾರು, ಸಾಮಾನು ಸರಂಜುಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರ ತೆರೆದಿದ್ದು 200ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಶಾಸಕ …
Read More »ಮನೆಗಳಿಗೆ ನುಗ್ಗಿದ ಮಳೆ ನೀರು
ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ಹೊರವಲಯದಲ್ಲಿ ಬರುವ ಹೊಸ ರಸ್ತೆಯ ಬಳಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಕಳೆದ ವರ್ಷ ಲೋಕೋಪಯೋಗಿ ಇಲಾಖೆಯಿಂದ ₹ 20 ಲಕ್ಷ ವೆಚ್ಚದಲ್ಲಿ ಆಗಿರುವ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹರಿಯುವ ಮಳೆ ನೀರು ಗಟಾರಕ್ಕೆ ಹೋಗದೆ ಮನೆಗೆ ನುಗ್ಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ‘ಈ ಬಗ್ಗೆ ಇಲ್ಲಿಯ ಮುಸ್ಲಿಂ ಸಮುದಾಯದವರು …
Read More »