Breaking News

ಅಂತರಾಷ್ಟ್ರೀಯ

ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ …

Read More »

ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ. ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ: ಸಲಹೆ …

Read More »

ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತ

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸ್ತಬ್ಧಗೊಂಡಿದ್ದ ರೈಲು ಸೇವೆ ಸದ್ಯಕ್ಕೆ ಆರಂಭಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಐಆರ್‌ಸಿಟಿಸಿ, ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಮಧ್ಯೆ ಐಆರ್‌ಸಿಟಿಸಿ ಸದ್ಯ ಮೂರು ರೈಲುಗಳನ್ನು ಓಡಿಸಲಿದೆ. 2 ತೇಜಸ್ ರೈಲುಗಳು ಮತ್ತು 1 ಕಾಶಿ ಮಹಕಲ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ. ತೇಜಸ್ ಎಕ್ಸ್‌ಪ್ರೆಸ್‌ ರೈಲು ಅಹಮದಾಬಾದ್ – ಮುಂಬೈ ಮಧ್ಯ ಸಂಚರಿಸಿದರೆ, …

Read More »

ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ : ಟ್ರಂಪ್ ವಾರ್ನಿಂಗ್

ವಾಷಿಂಗ್ಟನ್, ಏ.7- ಡೆಡ್ಲಿ ಕೊರೊನಾ ವೈರಾಣು ದಾಳಿಯಿಂದ ಅಪಾರ ಸಾವು ಮತ್ತು ಸೋಂಕಿನಿಂದ ಕಂಗೆಟ್ಟಿರುವ ಅಮೆರಿಕಾ ಕೋವಿಡ್-19 ವೈರಾಣು ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ಮಾಡದಿದ್ದರೆ ಭಾರತದ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ವಾಷಿಂಗ್ಟನ್‍ನಲ್ಲಿ ನಡೆದ ಕೊರೊನಾ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಮಾತನಾಡಿ, ಟ್ರಂಪ್ ಭಾರತ ಅಮೆರಿಕಕ್ಕೆ ಔಷಧಿ ರಫ್ತು ಮಾಡುತ್ತದೆ ಎಂಬ …

Read More »

ಲಾಕ್‍ಡೌನ್ ವಿಸ್ತರಣೆಗೆ ವಿವಿಧ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

ನವದೆಹಲಿ: ದೇಶಾದ್ಯಂತ ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್ ಅನ್ನು ವಿಸ್ತರಿಸುವಂತೆ ಅನೇಕ ರಾಜ್ಯ ಸರ್ಕಾರಗಳು ಮತ್ತು ತಜ್ಞರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇತ್ತ ಕೇಂದ್ರ ಸರ್ಕಾರವೂ ಲಾಕ್‍ಡೌನ್ ವಿಸ್ತರಿಸುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ದೇಶಾದ್ಯಂತ …

Read More »

ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಗೆ ಸೂಚಿಸಿದೆ. ಭಾರತ ಸರ್ಕಾರ ದೇಶದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ರೋಗದ ವಿರುದ್ಧವಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಸೇರಿದಂತೆ 16 ಮಾತ್ರೆಗಳ ರಫ್ತಿಗೆ ನಿಷೇಧ ಹೇರಿತ್ತು. ಈ ಮಧ್ಯೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಂದ ಕೊರೊನಾ ಪೀಡಿತ ರೋಗಿಗಳು ಗುಣವಾಗುತ್ತಾರೆ ಎನ್ನುವ ವಿಚಾರ ಅಧ್ಯಯನದಿಂದ ತಿಳಿದು ಬಂದಿತ್ತು. ಅಮೆರಿಕದಲ್ಲಿ ಕೊರೊನಾ ಸಾವು …

Read More »

ನಂ.1 ಆಗಲು ಚೀನಾದಿಂದ ಜೈವಿಕ ಅಸ್ತ್ರ- ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಆಲ್ ಇಂಡಿಯಾ ಬಾರ್ ಅಸೊಶಿಯೇಶನ್, ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ವತಿಯಿಂದ ಈ ದೂರು ದಾಖಲಿಸಿದ್ದು, ಅನಿರ್ದಿಷ್ಟ ಮೊತ್ತ ಪರಿಹಾರಕ್ಕೆ ಅರ್ಜಿಯಲ್ಲಿ ವಕೀಲ ಅದೀಶ್ ಸಿ.ಅಗ್ರವಾಲ್ ಆಗ್ರಹಿಸಲಾಗಿದೆ. ಕೊರೊನಾ ವಿಚಾರದಲ್ಲಿ ಚೀನಾ ಹೊಣೆಗಾರಿಕೆ ಮರೆತು ನಿಯಮಗಳ ಉಲ್ಲಂಘಿಸಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದೆ, ಇದನ್ನು ತಡೆಯವ ವಿಚಾರದಲ್ಲಿ ನಿಷ್ಕ್ರಿಯತೆ …

Read More »

ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

ಜೋಹಾನ್ಸ್‍ಬರ್ಗ್, ಏ.5-ಭಾರತದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ-ಎ-ಜಮಾತ್ ಮರ್ಕೆಜ್ ಬೃಹತ್ ಧಾರ್ಮಿಕ ಸಭೆಯ ದುಷ್ಪರಿಣಾಮ ಈಗ ಜಗತ್ತಿನ ಕೆಲ ಭಾಗಗಳಲ್ಲೂ ಗೋಚರಿಸುತ್ತಿದ್ದು, ಸಾವು ಮತ್ತು ಸೋಂಕುಗಳ ವರದಿಯಾಗುತ್ತಿವೆ. ಈ ಸಭೆಯಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ್ದ ಧರ್ಮ ಗುರು ಒಬ್ಬರು ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದ ಮೂಲಗಳೇ ದೃಢಪಡಿಸಿವೆ. ದೆಹಲಿಯಲ್ಲಿ ಮಾರ್ಚ್ 15ರಂದು ನಡೆದ ತಬ್ಲೀಘಿ …

Read More »

ಏ. 30ರವರೆಗೆ ಏರ್‌ಇಂಡಿಯಾ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್

ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟವನ್ನು ನಿಷೇಧ ಮಾಡಲಾಗಿತ್ತು. ಇದೀಗ ಏರ್‌ಇಂಡಿಯಾ ತನ್ನ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಯಾದ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ವಿಸ್ತರಿಸಿದೆ. ಏಪ್ರಿಲ್ 14ರವರೆಗೂ ಲಾಕ್‍ಡೌನ್ ಇರುವುದರಿಂದ ಏಪ್ರಿಲ್ 30ರವರೆಗೂ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಅನ್ನು ನಿಲ್ಲಿಸಲು ಏರ್ ಇಂಡಿಯಾ ತೀರ್ಮಾನಿಸಿದೆ. ಏಪ್ರಿಲ್ 14ರ ನಂತರ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗುವುದು …

Read More »

ಕೊರೋನಾ ಹಾವಳಿ : ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು ನೀಡಿದ ವಿಶ್ವಬ್ಯಾಂಕ್

ವಾಷಿಂಗ್ಟನ್ : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು, ಬಲಿಷ್ಠ ರಾಷ್ಟ್ರಗಳ ಜಂಗಾಭಲವನ್ನೇ ಕುಸಿಯುವಂತೆ ಮಾಡಿದೆ. ಕೊರೋನಾ ಪೀಡಿತ ರಾಷ್ಟ್ರಗಳ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದ್ದು ಸಂಕಷ್ಟಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಅನೇಕ ದೇಶಗಳಿಗೆ ನೆರವಾಗಲು ಮಂದಾಗಿದ್ದ ವಿಶ್ವಬ್ಯಾಂಕ್, 12 ಶತಕೋಟಿ ಡಾಲರ್ ವರೆಗೆ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು. ಇದರಂತೆ ಇದೀಗ ಭಾರತಕ್ಕೆ 1 ಬಿಲಿಯನ್ ಡಾಲರ್ ಗಳಷ್ಟು ತುರ್ತು ನೆರವು ನೀಡಲು ಇದೀಗ ಒಪ್ಪಿಗೆ …

Read More »