Breaking News

ಅಂತರಾಷ್ಟ್ರೀಯ

ಬೆಚ್ಚಿಬೀಳುವಂತಿದೆ ಕೊರೋನಾ ಕುರಿತ ವಿಶ್ವ ಸಂಸ್ಥೆ ನೀಡಿದ ಈ ವರದಿ..!

ವಿಶ್ವಸಂಸ್ಥೆ, ಮೇ 7-ಡೆಡ್ಲಿ ಕೊರೊನಾ ವೈರಸ್ ಹಾವಳಿ ಕುರಿತು ವಿಶ್ವ ಸಂಸ್ಥೆ ನೀಡಿರುವ ಹೊಸ ಅಂಕಿಅಂಶವೊಂದು ಬೆಚ್ಚಿಬೀಳಿಸುವಂತಿದೆ. ಏಪ್ರಿಲ್ ತಿಂಗಳಲ್ಲಿ ಪ್ರತಿದಿನ ವಿಶ್ವದಲ್ಲಿ ಸರಾಸರಿ 80,000 ಮಂದಿಗೆ ಕೋವಿಡ್-19 ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಚ್‍ಒ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸೂಸ್, ಭಾರತ, ಇಂಡೋನೆಷ್ಯಾ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ದೇಶಗಳಲ್ಲಿ ಸೋಂಕು ಪ್ರಮಾಣದಲ್ಲಿ ಹೆಚ್ಚಳ …

Read More »

72 ಸಾವಿರ ಜನ ಸತ್ತರೂ ಮಾಸ್ಕ್ ಧರಿಸಲೊಪ್ಪದ ಜಗಮೊಂಡ ಟ್ರಂಪ್..!

ಫಿನಿಕ್ಸ್ (ಆರಿಜೋನಾ), ಮೇ 6- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಮಾರಿ ಸ್ವಭಾವದವರು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅಮೆರಿಕವನ್ನು ಕೊರೊನಾ ವೈರಸ್ ಅಲ್ಲೋಲ-ಕಲ್ಲೋಲ ಮಾಡಿ 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ, ಅಧ್ಯಕ್ಷರಿಗೆ ಸೋಂಕಿನ ಲವಲೇಶ ಭಯವೂ ಇಲ್ಲ. ಇದೇ ಕಾರಣಕ್ಕಾಗಿ ಅವರು ಕಳೆದ ಐದು ತಿಂಗಳಿನಿಂದ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಅಮೆರಿಕ ಅಧ್ಯಕ್ಷರು ಖುದ್ದು ಎರಡು ಬಾರಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ. ಫಲಿತಾಂಶ ನೆಗಿಟಿವ್. ಆದರೂ ಇವರು …

Read More »

ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್

ಟೆಲ್ ಅವೀವ್: ಕೋವಿಡ್-19 ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ. ಹೌದು. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೇಗೆ ಕೆಲಸ ಮಾಡುತ್ತೆ? ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ …

Read More »

ಕಿಲ್ಲರ್ ಕೊರೊನಾಗೆ ವರ್ಷಾಂತ್ಯದಲ್ಲಿ ಲಸಿಕೆ ಸಿದ್ದವಾಗಲಿದೆ : ಟ್ರಂಪ್

ನ್ಯೂಯಾರ್ಕ್/ವಾಷಿಂಗ್ಟನ್, ಮೇ 4-ಡೆಡ್ಲಿ ಕೊರೊನಾ ವೈರಸ್ ಹೆಮ್ಮಾರಿ ನಿಗ್ರಹಕ್ಕಾಗಿ ಈ ವರ್ಷಾಂತ್ಯದಲ್ಲಿ ನಮ್ಮಲ್ಲೇ ಅತ್ಯಂತ ಪರಿಣಾಮಕಾರಿ ಲಸಿಕೆ ಸಿದ್ದವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೋವಿಡ್-19 ವಿರುದ್ಧ ಔಷಧಿ ತಯಾರಿಸಲು ನಮ್ಮ ವೈದ್ಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಈ ವರ್ಷಾಂತ್ಯದೊಳಗೆ ಆ ಲಸಿಕೆ ನಮ್ಮ ಕೈ ಸೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಫಾಕ್ಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಔಷಧಿ …

Read More »

ಕೊರೋನಾ ಜೊತೆ ಹೋರಾಡಿ ಸಾವು ಗೆದ್ದ ಬಂದ ಕ್ಷಣ ನೆನೆದು ಕಣ್ಣೀರಿಟ್ಟ ಬ್ರಿಟನ್ ಪ್ರಧಾನಿ..!

ಲಂಡನ್,ಮೇ4- ಕಾಯಿಲೆಯನ್ನು ಎದುರಿಸಿದ ಸನ್ನಿವೇಶ ಕಠಿಣ ಕ್ಷಣಗಳಾಗಿದ್ದವು.. ತಮಗೆ ಬರಬಹುದಾದ ಸಾವಿನ ಸಂಗತಿಯನ್ನು ಘೋಷಿಸಲು ವೈದ್ಯರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಎಂದು ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೊಂಡಿದ್ದಾರೆ. ಅಲ್ಲಿನ ಸ್ಥಳೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಅದು ಕಠಿಣ ಕ್ಷಣಗಳಾಗಿದ್ದವು. ಪರಿಸ್ಥಿತಿ ಕೈ ಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಾನು ಉತ್ತಮ ಸ್ಥಿತಿಯಲ್ಲಿರಲಿಲ್ಲ. …

Read More »

ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು……

ಬೀಜಿಂಗ್: ಮಹಾಮಾರಿ ಕೊರೊನಾ ಅಟ್ಟಹಾಸ ಇಲ್ಲಿಗೇ ಮುಗಿಯುವುದಿಲ್ಲ ಪ್ರತಿ ವರ್ಷವೂ ಕಾಡುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ. ಚೀನಾದ ಬೀಜಿಂಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಶೋಧಕರು ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊರೊನಾ ವೈರಸನ್ನು ಓಡಿಸಿದರೆ ಮುಗಿಯಿತು ಮತ್ತೆ ಬರಲ್ಲ ಎಂದುಕೊಳ್ಳುವಂತಿಲ್ಲ. ವಿಶ್ವವ್ಯಾಪಿ ಇದರ ಬೆಳವಣಿಗೆಯನ್ನು ಗಮನಿಸಿದಾಗ ಕೊರೊನಾ ಪ್ರತಿ ವರ್ಷ ಬರುವ ಸಾಧ್ಯತೆ ಇದ್ದು, ಜ್ವರದ ರೂಪದಲ್ಲಿ ಜನರನ್ನು ಕಾಡಲಿದೆ ಎಂದು ಹೇಳಿದ್ದಾರೆ. ಇದು …

Read More »

ಕೊರೋನಾದಿಂದ ಬಚಾವಾದ ಚೀನಾ, ವಿಶ್ವದಾದ್ಯಂತ ನಿಲ್ಲದ ಮರಣಮೃದಂಗ..!

ವಾಷ್ಟಿಂಗ್ಟನ್/ಬೀಜಿಂಗ್, ಏ.27- ಇಡೀ ವಿಶ್ವಕ್ಕೆ ಕಿಲ್ಲರ್ ಕೊರೊನಾವನ್ನು ಕೊಡುಗೆಯಾಗಿ ನೀಡಿ ಎರಡು ಲಕ್ಷಕ್ಕೂ ಅಧಿಕ ಸಾವಿಗೆ ಕಾರಣವಾದ ಚೀನಾ ಈಗ ಕೋವಿಡ್-19 ವೈರಾಸ್‍ನಿಂದ ಬಚಾವ್ ಆಗಿದೆ. ಆದರೆ ಡೆಡ್ಲಿ ಕೊರೊನಾ ಇಡೀ ಜಗತ್ತಿಗೆ ಕಾಡುತ್ತಿರುವ ಮಹಾಮಾರಿಯಾಗಿ ಪರಿಣಮಿಸಿದೆ. ಕೊರೊನಾ ವೈರಾಣುವಿನ ಉಗಮ ಬಿಂದು ವುಹಾನ್ ನಗರಿ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿದ್ದು, ಅಲ್ಲಿ ಕಟ್ಟಕಡೆಯ ಸೋಂಕಿನ ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಪ್ರಪಂಚದ 250ಕ್ಕೂ ಹೆಚ್ಚು ದೇಶಗಳು .ಈ ಹೆಮ್ಮಾರಿಯ …

Read More »

ಕಿಮ್ ಜಾಂಗ್-ಉನ್ ಆರೋಗ್ಯ ಗಂಭೀರ – ಉ.ಕೊರಿಯಾಗೆ ಬಂದಿಳಿದ ಚೀನಾ ವೈದ್ಯರು

ಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ನೀಡಲು ಚೀನಾದ ನುರಿತ ವೈದ್ಯರ ತಂಡ ಉತ್ತರ ಕೊರಿಯಾಗೆ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ವೈದ್ಯರ ನಿಯೋಗವು ಬೀಜಿಂಗ್‍ನಿಂದ ಪ್ಯೊಂಗ್ಯಾಂಗ್‍ಗೆ ಗುರುವಾರ ಹೋಗಿದೆ ಎನ್ನಲಾಗಿದೆ. ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. …

Read More »

ಚೀನಿಯರು ಇದೇನಪ್ಪಾ ಮಾಡಿದ್ರು..?’- ಲಾಕ್‍ಡೌನ್ ಬಗ್ಗೆ ರೋಹಿತ್ ಶರ್ಮಾ ಬೇಸರ

ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆದಾಗಲೇ 2020ರ ಐಪಿಎಲ್ ಆವೃತ್ತಿ ಆರಂಭವಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಟೂರ್ನಿ ಮುಂದೂಡಲಾಗಿದ್ದು, ಅಭಿಮಾನಿಗಳು ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಈ ಕುರಿತು ಬೇಸರಗೊಂಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿರುವ ಹಲವು ಆಟಗಾರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಇನ್‍ಸ್ಟಾ ಮೂಲಕ ಅಭಿಮಾನಿಗಳೊಂದಿಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ …

Read More »

ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಪಿಸಿಬಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಮತ್ತು ಐಪಿಎಲ್ ಬಗ್ಗೆ ಹೇಳಿಕೆ ನೀಡಿದೆ. ಏಷ್ಯಾಕಪ್‍ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೊರೊನೊ ವೈರಸ್ ಬಿಕ್ಕಟ್ಟು ಕಡಿಮೆಯಾದರೆ ಯುಎಇಯಲ್ಲಿ ಏಪ್ಯಾಕಪ್ ಟೂರ್ನಿಯು ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆದರೆ ಟೂರ್ನಿಯನ್ನು ಐಪಿಎಲ್‍ಗಾಗಿಯೇ ಮುಂದೂಡಲು …

Read More »