Breaking News

ಗಡಿ ಕಾಯೋ ಯೋಧರಿಗಾಗಿ ಕುಂದಾನಗರಿಯಲ್ಲಿ ಸಜ್ಜಾಯ್ತು Eco-friendly ರಾಖಿ!

Spread the love

ಬೆಳಗಾವಿ: ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ನಮ್ಮ ವೀರ ಯೋಧರಿಗೆ ಸೋದರತ್ವ ಸಾರುವ ರಕ್ಷಾಬಂಧನದ ಪ್ರಯುಕ್ತವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ರಾಖಿ ರವಾನಿಸಿದ್ದಾರೆ. ಅದೂ ಕೂಡ ಪರಿಸರ ಸ್ನೇಹಿ ರಾಖಿ. ಹೌದು, ಆಗಸ್ಟ್ 3 ರಂದು ರಕ್ಷಾಬಂಧನ ಹಬ್ಬವಿದ್ದು, ಇದೀಗ ದೇಶದ ಗಡಿಗೆ ಸ್ಪೀಡ್ ಫೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ.

 

ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್​ನಲ್ಲಿರುವ ನಗರದ ಹಲವು ಕಾಲೇಜು ವಿದ್ಯಾರ್ಥಿನಿಯರು ರಾಖಿ ಹಬ್ಬ ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ವಿಶೇಷ ಶುಭಾಶಯಗಳನ್ನ ಕೋರಿದ್ದಾರೆ. ಹೆಸರುಕಾಳು, ಕಡಲೆ, ಅವರೆಕಾಳು, ಗೋಧಿ, ಸೌತೆಕಾಯಿ, ಕ್ಯಾಪ್ಸಿಕಂ ಬೀಜ, ಗೋವಿನ ಜೋಳ, ಸೋಯಾಬಿನ್, ಮಡಕೆಕಾಳು, ಅಲಸಂದೆ ಕಾಳು, ಅಕ್ಕಿ, ಗೂ ತುಳಸಿ ಬೀಜಗಳನ್ನ ಬಳಸಿ ಆಕರ್ಷಕವಾದ ರಾಖಿಗಳನ್ನ ತಯಾರಿಸಿದ್ದಾರೆ.

ಬೆಳಗಾವಿ ಸೇರಿ ರಾಜ್ಯದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಅಧಿಕ ರಾಖಿ ಹಾಗೂ ಗ್ರೀಟಿಂಗ್ ತಯಾರಿಸಿ ಗಡಿಗೆ ರವಾನಿಸಲಾಗಿದೆ. ಇಷ್ಟು ದಿನ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿದ್ದ ಸೈನಿಕರಿಗೆ ರಾಖಿ ನೀಡುತ್ತಿದ್ದ ವಿದ್ಯಾರ್ಥಿನಿಯರು ಈ ಬಾರಿ ಗಡಿಯಲ್ಲಿರುವ ಸೈನಿಕರಿಗೂ ಕಳಿಸಿ ಶುಭ ಕೋರಿದ್ದಾರೆ.

ಪರಿಸರ ಸ್ನೇಹಿ ರಾಖಿ.
ಸಹಜವಾಗಿ ರಕ್ಷಾ ಬಂಧನ ಮುಗಿದ ಕೂಡಲೇ ರಾಖಿಯನ್ನ ಬಿಚ್ಚಿಡಲಾಗುತ್ತೆ. ಹೀಗೆ ಬಿಚ್ಚಿಟ್ಟ ಪರಿಸರ ಸ್ನೇಹಿ ರಾಖಿ ಮೊಳೆಕೆ ಕೂಡ ಒಡೆಯುತ್ತೆ. ಹೌದು ರಾಖಿ ಹಬ್ಬದ ನಂತ್ರ ಸೈನಿಕರು ಈ ರಾಖಿಯನ್ನ ಬಿಚ್ಚಿಟ್ಟರೂ ಅದು ಬಿದ್ದ ಜಾಗದಲ್ಲಿ ಕನಿಷ್ಠ ಒಂದು ಸಸಿಯಾದ್ರೂ ಚಿಗುರೊಡೆಯುತ್ತೆ. ಇದರಿಂದ ಪರಿಸರಕ್ಕೂ ಅನುಕೂಲ ಆಗುತ್ತೆ. ಈ ಕಾರಣಕ್ಕೆ ಲೀಡ್ ಸೆಲ್ ವಿದ್ಯಾರ್ಥಿಗಳು ಧಾನ್ಯಗಳಿಂದ ರಾಖಿ ತಯಾರಿಸಿರುವುದಾಗಿ ತಿಳಿಸಿದ್ದಾರೆ.

ಕೊವಿಡ್ ಸಂದರ್ಭದಲ್ಲೂ ವಿದ್ಯಾರ್ಥಿನಿಯರು ಒಂದೆಡೆ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡು ರಾಖಿ ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಅಂತಾ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ, ಪ್ಲಾಸ್ಟಿಕ್ ಸೇರಿದಂತೆ ದಾರಗಳಿಂದ ರಾಖಿಯನ್ನ ತಯಾರಿಸಲಾಗುತ್ತೆ. ಆದ್ರೇ ಈ ವಿದ್ಯಾರ್ಥಿಗಳು ಧಾನ್ಯಗಳಿಂದಲೇ ರಾಖಿಯನ್ನ ವಿಭಿನ್ನವಾಗಿ ತಯಾರಿಸಿದ್ದು ನೋಡಲು ಕೂಡ ಆಕರ್ಷಕವಾಗಿವೆ. ರಾಖಿಯ ಮಧ್ಯಭಾಗದ ಹೂವಿನ ವಿನ್ಯಾಸಕ್ಕೆ ಮಣ್ಣಿನಲ್ಲಿ ಸುಲಭವಾಗಿ ಕರಗುವ ದಪ್ಪನೆಯ ಪೇಪರ್‌ ಬಳಸಲಾಗಿದೆ. ಪೇಪರನ್ನು ಹೂವಿನ ಎಸಳಿನ ಆಕಾರದಲ್ಲಿ ಕತ್ತರಿಸಿ ಬಾಕ್ಸ್ ಒಳಗಡೆ‌ ತುಳಸಿ, ಸೂರ್ಯಕಾಂತಿ, ಟೊಮೆಟೊ ಸೇರಿದಂತೆ ಬೇರೆ ಬೇರೆ ರೀತಿಯ ಹೂವು, ತರಕಾರಿ ಬೀಜಗಳನ್ನು ಇಟ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.

ಇದೇ ರಾಖಿಗಳನ್ನ ಗ್ರಾಮೀಣ ಭಾಗದ ಜನರು ಉದ್ಯೋಗವಾಗಿ ಕೂಡ ಮಾಡಿಕೊಳ್ಳಬಹುದಾಗಿದ್ದು ಇದರಿಂದ ಒಂದು ಕಡೆ ಪರಿಸರ ಸ್ನೇಹಿ ರಾಖಿ ಕೂಡ ಆಗುತ್ತೆ. ಇತ್ತ ಉದ್ಯೋಗ ಕೂಡ ಮಾಡಿದಂತಾಗುತ್ತೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ