ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮಸ್ಥರಿಂದ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮನಿಂದ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ ಅವರಿಗೆ ಮನವಿ ಸಲ್ಲಿಸಿದರು. ರಬಕವಿಯಲ್ಲಿ ಸುಮಾರು 224 ಫಲಾನುಭವಿಗಳಿಗೆ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮ ದಿಂದ ಬರಬೇಕಾದ ಹಣವು ಮೂರು ವರ್ಷಗಳ ಕಳೆದರೂ ಹಣ ಬಂದಿಲ್ಲ ಬಡ ಫಲಾನುಭವಿಗಳ ಪರಿಸ್ಥಿತಿ ಕಂಗಾಲಾಗಿದೆ.
ನಮಗೆ ಬರಬೇಕಾದ ಹಣ ಕೊಡಿ ಸ್ವಾಮಿ ನಮ್ಮ ಪರಿಸ್ಥಿತಿ ಹದಗೆಟ್ಟು ಹೋಗಿದೆಯೆಂದು ಎಷ್ಟುಬಾರಿ ಪತ್ರ ಬರೆದರೂ ಕ್ಯಾರೇ ಅನ್ನದ ಅಧಿಕಾರಿಗಳು. ಯೋಜನೆಯ ಫಲಾನುಭವಿಗಳ ಆಗಿರುವ ಜನರು ಸರ್ಕಾರದ ಧೋರಣೆ ಹಾಗೂ ನಿರ್ಲಕ್ಷತನದಿಂದ ಹತಾಶರಾಗಿದ್ದಾರೆ. ನಮ್ಮಗಳ ಜೀವನ ಹಾಗೂ ಬದುಕಿನ ಪ್ರಶ್ನೆಯಾಗಿದೆ ಸಾಲಮಾಡಿ ಕಟ್ಟಡ ನಿರ್ಮಿಸಿಕೊಂಡರು ಪೂರ್ಣವಾದ ಇನ್ನೂ ಅನುದಾನ ಬಿಡುಗಡೆಯಾಗದೆ ಇರುವುದರಿಂದ ನಾವು ದಿನನಿತ್ಯ ಪರದಾಡುವಂತಾಗಿದೆ ಸಾಲ ಕೊಟ್ಟವರು ದಿನನಿತ್ಯ ನಮ್ಮ ಮನೆಗೆ ಬರುತ್ತಿದ್ದಾರೆ ನಮ್ಮ ಪರಿಸ್ಥಿತಿ ಯಾರಿಗೆ ಹೇಳೋಣ ನಮಗೆ ಹಣ ಬರದೇ ಇದ್ದರೆ ಸಾಮೂಹಿಕ ಆತ್ಮಹತ್ಯೆ ಒಂದೇ ದಾರಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮದಿಂದ ಬರಬೇಕಾದ ಹಣ ಫಲಾನುಭವಿಗಳಿಗೆ ನೀಡಬೇಕೆಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಂಗಪ್ಪ ಕುಂದಗೋಳ, ಬಸವರಾಜ ಗುಡ್ಡೋಡಗಿ ನಗರಸಭಾ ಸದಸ್ಯರು, ದುಂಡಪ್ಪ ಕುಂಬಾರ, ರಾಜು ಶಾಸ್ತ್ರಿ ಗೊಲ್ಲರ ನಗರಸಭಾ ಸದಸ್ಯರು, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.