Breaking News

ಡಿಬಾಸ್‌ ʼಕ್ರಾಂತಿʼ ಅಬ್ಬರಕ್ಕೆ ಯೂಟ್ಯೂಬ್‌ ಧೂಳಿಪಟ…!

Spread the love

ಇಷ್ಟು ದಿನ ಹಬ್ಬ ಮಾಡಲು ಕಾಯುತ್ತಿದ್ದ ಡಿಬಾಸ್‌ ಅಭಿಮಾನಿಗಳಿಗೆ ಇಂದು ನಿಜವಾಗಿಯೂ ಸ್ಪೆಷಲ್‌ ದಿನವಾಗಿದೆ. ಸಾಕಷ್ಟು ವಾದ ವಿವಾದಗಳು, ಅವಮಾನಗಳ ಅನುಭವದ ನಡುವೆ ಬಿಡುಗಡೆಯಾದ ದಚ್ಚು ಕ್ರಾಂತಿ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.

ಅಲ್ಲದೆ, ರಿಲೀಸ್‌ ಆದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್‌ನಲ್ಲಿ ಬರ್ಜರಿ ವೀಕ್ಷಣೆ ಪಡೆಯುತ್ತಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ನೋಡುತ್ತಿದ್ದಾರೆ.

ಹೌದು.. ಕ್ರಾಂತಿ ಹಬ್ಬ ಶುರುವಾಗಿದೆ. ದಾಸನ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಷ್ಟು ದಿನ ಯಾವಾಗಪ್ಪಾ ಕ್ರಾಂತಿ ಟ್ರೇಲರ್‌ ಬಿಡುಗಡೆಯಾಗುತ್ತೇ ಅಂತ ಯಾವಾಗ ನೋಡ್ತೀವಿ ಅಂತ ಕಾಯುತ್ತಿದ್ದ ಅಭಿಮಾನಿಗಳ ಕಾತುರಕ್ಕೆ ಪುಲ್‌ ಸ್ಟಾರ್‌ ಇಟ್ಟಾಗಿದೆ. ವಿ. ಹರಿಕೃಷ್ಣ ನಿರ್ದೇಶನ ಸಿನಿಮಾ ಮೇಲೆ ಜಾಸ್ತಿ ನಿರೀಕ್ಷೆ ಹುಟ್ಟಿದೆ. ಅಲ್ಲದೆ, ದರ್ಶನ್‌ ಡೈಲಾಗ್‌ ಕೇಳಿದ್ರೆ ವಿಶಲ್‌ ಹೊದೆದಂತು ಗ್ಯಾರಂಟಿ.

ಟ್ರೇಲರ್‌ನಲ್ಲಿ ಇಷ್ಟೇ.. ಪಿಕ್ಚರ್‌ ಅಭಿ ಬಾಕಿ ಹೈ ಎನ್ನುವಂತಿದೆ ಕ್ರಾಂತಿ ಸಿನಿಮಾದ ಟ್ರೇಲರ್‌. ಅಲ್ಲದೆ, ರವಿಶಂಕರ್‌ ವಿಲನ್‌ ಪಾತ್ರದಲ್ಲಿ ದಚ್ಚು ಎದುರು ಅಬ್ಬರಿಸಿದ್ದು ನೋಡಿದ್ರೆ ಸಿನಿ ಪ್ರೇಕ್ಷನಿಗೆ ಇದೊಂದು ಪಕ್ಕಾ ಮಾಸ್‌ ಎಂಟರ್‌ಟೈನರ್‌ ಅನಿಸುತ್ತದೆ. ಅಲ್ಲದೆ, ಈ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಸಾಮಾಜಿಕ ಕಳಕಳಿಯನ್ನು ಎತ್ತಿಹಿಡಿದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ರಚಿತಾ ರಾಮ್‌ ಕ್ಯೂಟ್‌ ಸ್ಮೈಲ್‌, ರವಿಚಂದ್ರನ್‌ ಅರ್ಥಗರ್ಭಿತ ಮಾತುಗಳು, ಸಾದುಕೋಕಿಲ್‌ ಅವರ ಹಾಸ್ಯ ಟ್ರೇಲರ್‌ನ ಹೈಲೆಟ್‌ ಆಗಿದೆ.

ದುಷ್ಟನ ಕೈಯಿಂದ ಶಾಲೆಯನ್ನು ರಕ್ಷಿಸಲು ಶ್ರೀಮಂತನೊಬ್ಬ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೊಂಡು ಬಂದು ಶತ್ರುಗಳ ಜೊತೆ ಹೋರಾಡುವ ಕಥೆಯನ್ನು ಟ್ರೇಲರ್‌ ಹೊಂದಿದೆ. ಆದ್ರೆ, ಆ ಸ್ಕೂಲ್‌ಗೂ ಮತ್ತು ಅಲ್ಲಿ ನಡೆಯುವ ಕಥೆಗೂ ದರ್ಶನ್‌ ಯಾವ ರೀತಿಯ ಸಂಬಂಧ, ರವಿಚಂದ್ರನ್‌ ಯಾರು, ರವಿಶಂಕರ್‌ ಯಾರು, ಸುಮಲತಾ ಅಂಬರೀಷ್‌ ಯಾಕೆ ಬಂದ್ರು, ಶ್ರೀಮಂತನಾಗಿದ್ದ ದರ್ಶನ್‌ ಒಂದು ಸಣ್ಣ ಶಾಲೆಗಾಗಿ ಏಕೆ ಹೋರಾಟ ಮಾಡಿದ್ರು ಎನ್ನುವುದೇ ʼಕ್ರಾಂತಿʼ ರಹಸ್ಯ.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ