ಬೆಳಗಾವಿ: ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಮುಖ್ಯಮಂತ್ರಿ ಆಗ್ತೀರಿ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದರು. ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವು ಲಾಗ ಹೊಡೆಯುತ್ತೀರಿ.
ಮೊನ್ನೆ ಅಧಿವೇಶನದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲಾ ಅಂತ ಯಡಿಯೂರಪ್ಪ ಭಾಷಣ ಮಾಡಿದ್ರು. ಹಾಗಾದ್ರೆ, ಸಿಎಂ ಆದ ವೇಳೆ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಿಲ್ಲ. ಮೀಸಲಾತಿಗಾಗಿ ಸೂಚಿಸಿದ್ದೇನೆ ಅಂದ್ರು, ಸಿಎಂ ಆಗಿದ್ದವರು ಸೂಚಿಸುತ್ತಾರಾ. ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗುತ್ತೀರಿ ಎಂದು ಎಚ್ಚರಿಕೆ ರವಾನಿಸಿದರು.
Laxmi News 24×7