Breaking News

ಭಕ್ತಿ ಭಾವದ ಪ್ರತೀಕ ಬೂದಿಹಾಳ ಅಡಿವೆಪ್ಪ ಮಹಾರಾಜರು

Spread the love

ಹೂವಿನಹಿಪ್ಪರಗಿ: ಭಕ್ತಿಯಿಂದ ನಡೆದು ಗುರುವಿನ ದಾಸನಾಗಿ ದುಡಿದು ಗುರು ಮಿರಿಸಿ ತನ್ನ ಭಕ್ತ ಬಳಗಕ್ಕೆ ಬೇಡಿದ ವರವನ್ನು ನೀಡಿ ಭಕ್ತಿ ಭಾವದ ಪ್ರತೀಕವಾಗಿ ಇಂದು ಸಾವಿರಾರು ಜನರಿಗೆ ದಾರಿ ದೀಪವಾಗಿರುವ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರು ಎಂದು ಸರೂರ ರೇವಣಸಿದ್ದೇಶ್ವರ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

 

ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರ ಶ್ರಾವಣ ಮಾಸದ ಜಾತ್ರೆಯಲ್ಲಿ ಮಾತನಾಡಿದ ಅವರು, ಭಕ್ತರನ್ನು ಸಮನಾದ ದೃಷ್ಟಿಯಿಂದ ಕಂಡು ನಂಬಿ ಬಂದವರಿಗೆ ಬಾ ಎಂದು ಕರೆದು ಕೃಪೆ ತೋರುವ ಗುರುವಿನ ನಂಬಿ ನಡೆಯಿರಿ ಎಂದರು.

15ಕ್ಕೂ ಹೆಚ್ಚು ಗ್ರಾಮಗಳ ವಿವಿಧ ದೇವಾನು ದೇವತೆಗಳ ಪಲ್ಲಕ್ಕಿಗಳ ಸಂಗಮವಾಗಿ ಬೆಳಗ್ಗೆ 5ಕ್ಕೆ ಕರಿಸಿದ್ದೇಶ್ವರ ಕತೃì ಗದ್ದುಗೆಗೆ ರುದ್ರಾಭಿಷೇಕ ಮಾಡಲಾಯಿತು. 9ಕ್ಕೆ ಸಕಲ ಪಲ್ಲಕ್ಕಿಗಳ ಸಂಗಮವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ, ವಾದ್ಯ ವೈಭಗಳೊಂದಿಗೆ ಮೆರೆವಣಿಗೆ ಮೂಲಕ ಹಾಯ್ದು ಗಂಗಸ್ಥಳಕ್ಕೆ ಹೋಗಿ, ನಂತರ ಮತ್ತೆ ಮಠಕ್ಕೆ ಬಂದವು. ನಂತರ 11ಕ್ಕೆ ಸಮಸ್ತ ಭಕ್ತಾದಿಗಳಿಂದ ಸಿದ್ದಪುರುಷ ಅಡಿವೆಪ್ಪ ಮಹಾರಾಜ ಪಾದಪೂಜೆ, ತುಲಾಭಾರ ಹಾಗೂ
ಗುರುವಂದನಾ ಕಾರ್ಯಕ್ರಮ ನಡೆಯಿತು.

ನಂತರ ಅಡಿವೆಪ್ಪ ಮಹಾರಾಜರು ಸೇರಿ ವಿವಿಧ ಸತು³ರುಷರಿಂದ ನುಡಿ ಮುತ್ತುಗಳು ನಡೆದವು. ಜಾತ್ರೆಯಲ್ಲಿ ಸರೂರು ಗ್ರಾಮದ ಖೆಂಡಯ್ಯ ಸ್ವಾಮೀಜಿ, ಶಿವಣಗಿಯ ಖೆಂಡಯ್ಯ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ, ಜಿಪಂ ಮಾಜಿ ಸದಸ್ಯ ಬೀರಪ್ಪ ಸಾಸನೂರ, ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ಸಂಗಮೇಶ ಓಲೇಕಾರ, ಜಕ್ಕಣ್ಣ ಮಾಸ್ತಾರ, ವಿಕಾಸ ಜೋಗಿ ಸೇರಿದಂತೆ ಬಾಗಲಕೋಟೆ, ಗದಗ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಜಾತ್ರೆಗೆ ಸಾಕ್ಷಿಯಾದರು.

ಸತ್ಪುರುಷರ ನುಡಿಗಳು: ಜಾತ್ರೆಯಲ್ಲಿ ಹಲವು ಪೂಜಾರಿಗಳು ತಮ್ಮ ನುಡಿನಮನ ಸಲ್ಲಿಸಿದರು. ದೇವರಲ್ಲಿ ಭಕ್ತಿ ಇಟ್ಟಿಕೊಂಡು ನಂಬುಗೆಯಿಂದ ನಡೆದರೆ ಬೇಕಾದ ವರವನ್ನು ಆ ಭಗವಂತ ಕರುಣಿಸುತ್ತಾನೆ. ಮುಂದೆ ಬರುವ ಮಳೆಗಳು ಉತ್ತಮವಾಗಿ ಸುರಿಯಲಿವೆ.

ಮುಂಗಾರಿ ಸಾಧಾರಣ ಬೆಳೆದರೆ ಹಿಂಗಾರಿ ಉತ್ತಮ ರೀತಿಯಲ್ಲಿ ಬೆಳಯಲಿವೆ ಹಾಗೂ ಹತ್ತಿ ಸಾಲಾಗ ಬಂಗಾರ ಕಡೆ ಇದೆ, ಯಾವ ಭಕ್ತರು ಧೈರ್ಯ ಬೀಡಬೇಡಿ, ನಿಮ್ಮ ಹಿಂದೆ ನಾ ಅದೀನಿ ಅಂತ ಮುತ್ಯಾ ಹೇಳುತ್ತಾನೆ ಎಂದು ಹೇಳಿದರು.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ