ನವದೆಹಲಿ: ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಈ ನಡುವೆಯೇ ರಾಜಕೀಯ ನಾಯಕರಿಗೆ ತಲೆಬಿಸಿ ಉಂಟಾಗಿದೆ. ಇದಕ್ಕೆ ಕಾರಣ, ಸಂಸತ್ತಿನಲ್ಲಿ ಬಳಸಲೇಬಾರದಾದ ಕೆಲವು ಶಬ್ದಗಳನ್ನು ಪಟ್ಟಿ ಮಾಡಿ ಕೈಬಿಡಿ ಬಿಡುಗಡೆ ಮಾಡಲಾಗಿದೆ.
ಇನ್ನುಮುಂದೆ ಈ ಶಬ್ದಗಳನ್ನು ನಾಯಕರು ಸಂಸತ್ತಿನಲ್ಲಿ ಬಳಸುವಂತಿಲ್ಲ. ಇವುಗಳನ್ನು ಅಸಂಸದೀಯ ಪದಗಳು ಎಂದು ಕರೆಯಲಾಗುತ್ತದೆ.
ನೂರಕ್ಕೂ ಅಧಿಕ ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಪೈಕಿ ಹಲವು ದಿನನಿತ್ಯ ಬಳಸುವ ಪದಗಳಾಗಿವೆ. ಆದ್ದರಿಂದ ರಾಜಕಾರಣಿಗಳು ಈ ಮಾತುಗಳನ್ನಾಡಿದರೆ ಅವು ಅಸಂಸದೀಯ ಅಂದರೆ ಕೆಟ್ಟ ಪದಗಳು ಎನಿಸಿಕೊಳ್ಳಲಿವೆ. ಆದ್ದರಿಂದ ಇನ್ನುಮುಂದೆ ರಾಜಕಾರಣಗಳಿಗೆ ಮಾತನಾಡುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.
ಒಂದು ವೇಳೆ ಸಂಸತ್ತಿನ ಕಲಾಪದ ಸಮಯದಲ್ಲಿ ಇವುಗಳನ್ನು ಬಳಸಿದರೆ ಅವುಗಳನ್ನು ರಾಜ್ಯಸಭೆ ಅಥವಾ ಲೋಕಸಭೆ ಕಲಾಪದಲ್ಲಿ ಸದಸ್ಯರು ಬಳಸಿದರೆ ಅವು ಕಡತ ಸೇರುವುದಿಲ್ಲ. ಅಂದರೆ ರೆಕಾರ್ಡ್ನಿಂದ ಡಿಲೀಟ್ ಮಾಡಲಾಗುತ್ತದೆ. ಅಂದರೆ ಈ ಶಬ್ದಗಳನ್ನು ಬಳಸಿ, ರಾಜಕಾರಣಿಗಳು ಮಾತನಾಡಿದರೆ ಅವರು ನೀಡುವ ಹೇಳಿಕೆಗಳಿಗೆ ಮಾನ್ಯತೆ ಇರುವುದಿಲ್ಲ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಕಲಾಪದ ಸಂದರ್ಭದಲ್ಲಿ ಸದನದಲ್ಲಿ ಬಳಕೆಯಾಗುವ ಪದಗಳ ಮೇಲೆ ಗಮನ ಇಟ್ಟಿರುತ್ತಾರೆ. ಯಾವುದೇ ಅಸಂಸದೀಯ ಪದ ಬಳಕೆಯಾದರೆ ಅದನ್ನು ಅಧ್ಯಕ್ಷರು ದಾಖಲೆಗಳಿಂದ ತೆಗೆದುಹಾಕುತ್ತಾರೆ.
ಕೆಲವೊಂದು ಪದಗಳನ್ನು ಇಲ್ಲಿ ನೀಡಲಾಗಿದೆ:
ನಾಚಿಕೆಗೇಡು, ಬೂಟಾಟಿಕೆ, ಭ್ರಷ್ಟ, ಅಸಮರ್ಥ, ದ್ರೋಹ ಬಗೆದ, ಬಾಲಬುದ್ಧಿ, ನಾಟಕ, ಕಿವುಡ ಸರ್ಕಾರ, ತಮಟೆ ಬಾರಿಸುವುದು, ಕೋವಿಡ್ ಸ್ಪ್ರೆಡರ್, ಅರಾಜಕತಾವಾದಿ, ವಿನಾಶ್ ಪುರುಷ್, ಲೈಂಗಿಕ ಕಿರುಕುಳ, ರಕ್ತಪಾತ, ಕ್ರೂರಿ, ದ್ರೋಹ ಬಗೆದ, ನಾಚಿಕೆಗೇಡು, ನಿಂದಿಸಿದ, ಮೋಸಮಾಡಿದ, ಚಮಚಾಗಿರಿ, ಚೇಲಾಗಳು, ಬಾಲಿಶ, ಹೇಡಿ, ಅಪರಾಧಿ, ಮೊಸಳೆ ಕಣ್ಣೀರು, ಅವಮಾನ, ಕತ್ತೆ, ಕಣ್ಣೊರೆಸು ಹೀಗೆ ನೂರಾರು ಪದಗಳನ್ನು ಈ ಕೈಪಿಡಿ ಒಳಗೊಂಡಿದೆ.
ಶಕುನಿ, ವಿನಾಶ ಪುರುಷ್, ಅರಾಜಕತಾವಾದಿ, ಸರ್ವಾಧಿಕಾರಿ, ಖಲಿಸ್ತಾನಿ, ರಕ್ತದಿಂದ ಕೃಷಿ, ಡಬಲ್ ರೋಲ್, ಕೆಲಸಕ್ಕೆ ಬಾರದವ ಹೀಗೆ ಅನೇಕ ಶಬ್ದಗಳೂ ಅಸಂಸದೀಯ ಶಬ್ದಗಳ ಪಟ್ಟಿಯಲ್ಲಿ ಸೇರಿವೆ.
ಹಿಂದಿ ಮತ್ತು ಇಂಗ್ಲಿಷ್ ಪದಗಳ ಬಗ್ಗೆ ಹೇಳುವುದಾದರೆ: ದಂಗಾ, ದಾದಾಗಿರಿ, ದೋಹ್ರ ಚರಿತ್ರಾ, ಬೇಚಾರ, ಬಾಬ್‌ಕಟ್, ಲಾಲಿ ಪಾಪ್, ವಿಶ್ವಾಸಘಾತ್, ಸಂವೇದನಾಹೀನ್, ಮೂರ್ಖ್, ಬ್ಲಡ್‌ಶೆಡ್, ಬ್ಲಡಿ, ಬಿಟ್ರೇಯ್ಡ್, ಅಶೇಮ್ಡ್, ಅಬ್ಯೂಸ್ಡ್, ಚೀಟೆಡ್, ಚಮ್ಚ, ಚಮಚಾಗಿರಿ, ಚೇಲಾಸ್, ಚೈಲ್ಡಿನೆಸ್, ಕರಪ್ಟ್, ಕವರ್ಡ್, ಕ್ರಿಮಿನಲ್, ಕ್ರೊಕೊಡೈಲ್ ಟಿಯರ್ಸ್, ಡಿಸ್‌ಗ್ರೇಸ್, ಡಾಂಕಿ, ಡ್ರಾಮಾ, ಐವಾಶ್, ಫಡ್ಜ್, ಹೂಲಿಗಾನಿಸಂ, ಹಿಪೋಕ್ರಸಿ, ಇನ್‌ಕಾಂಪಿಟೆಂಟ್, ಮಿಸ್ಲೀಡ್, ಲೈ ಮತ್ತು ಅನ್‌ಟ್ರೂ ಮುಂತಾದವು.