Breaking News

ಉಗಾರದ ಮಾಜಿ ಶಾಸಕ ರಾಜು ಕಾಗೆ ಸೇರಿ ೩೦ ರೈತರ ೧೦ ಲಕ್ಷ ರೂ ಮೌಲ್ಯದ ಪಂಪ ಸೆಟ್ ಗಳ ಕೇಬಲ್ ಕಳ್ಳತನ

Spread the love

ಕಾಗವಾಡ ತಾಲೂಕಿನ ಹಳ್ಳಿಗಳಲ್ಲಿ ಮನೆಗಳ ಕಳ್ಳತನ ಹಾವಳಿ ಹೆಚ್ಚಾಗಿದ್ದು, ಈಗ ಕಳ್ಳರು ನದಿಯಿಂದ ಗದ್ದೆಗಳಿಗೆ ನೀರು ಸೆಳೆಯಲು ಭಳಸಿರುವ ವಿದ್ಯೂತ್ ಪಂಪ ಸೆಟ್ ಗಳ ಕೇಬಲ್ ಕಳ್ಳತನ ಪ್ರಾರಂಭಿಸಿದ್ದಾರೆ. ಉಗಾರದ ಮಾಜಿ ಶಾಸಕ ರಾಜು ಕಾಗೆ ಸೇರಿ ೩೦ ರೈತರ ಪಂಪ ಸೆಟ್ ಗಳ ಕೇಬಲ ಕಳ್ಳತನ ಮಾಡಿದ್ದಾರೆ. ಸುಮಾರು ೧೦ ಲಕ್ಷ ರೂ ಮೌಲ್ಯದ ಕೇಬಲ್ ಕಳ್ಳತನವಾಗಿರುವದರಿಂದ ರೈತರು ಆತಂಕದಲ್ಲಿದ್ದಾರೆ.

ಉಗಾರ ಬುದ್ರುಕ್ ಗ್ರಾಮದ ರೈತರು ಒಂದುಗೂಡಿ ಗ್ರಾಮದ ಮುಖಂಡರು ಪಿಕೆಪಿಎಸ್ ಅಧ್ಯಕ್ಷ ಶೀತಲ ಪಾಟೀಲ ಇವರ ನೇತೃತ್ವದಲ್ಲಿ ನೂರಾರು ರೈತರು ಸ್ಥಳಿಯ ಪಿಕೆಪಿಎಸ್ ಸಂಸ್ಥೆಯಲ್ಲಿ ಸಭೆ ಸೇರಿ ಕೇಬಲ್ ಕಳ್ಳತನವಾಗುತ್ತಿರುವ ಬಗ್ಗೆ ಚರ್ಚಿಸಿ ಪೋಲೀಸ್ ಇಲಾಖೆಯ ನಿಷ್ಕಿçಯತೆಯ ಬಗ್ಗೆ ಆಕ್ರೋಶ ಹೊರಹಾಕಿದರು.
ಪಿಕೆಪಿಎಸ್ ಅಧ್ಯಕ್ಷ ಶೀತಲ ಪಾಟೀಲ ಮಾಹಿತಿ ನೀಡುವಾಗ ಕೃಷ್ಣಾ ನದಿ ತೀರದ ಉಗಾರ ಬುದ್ರುಕ್ ಗ್ರಾಮದಲ್ಲಿಯ ನೂರಾರು ರೈತರುತಮ್ಮ ಗದೆಗಳಿಗೆ ನೀರು ಪೂರೈಸಲು ಸ್ವಂತ ಖರ್ಚಿನಿಂದ ಕೆಲ ಸಂಘಗಳ ಮುಖಾಂತರ ಮೋಟಾರುಗಳನ್ನು ಅಳವಡಿಸಿದ್ದು, ಕಳೆದ ಮುರು ದಿನಗಳಲ್ಲಿ ೩೦ ಪಂಪಶೆಟ್‌ಗಳ ಕೇಬಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಇದರಿಂದ ಸುಮಾರು ೧೦ ಲಕ್ಷ ರೂಗಳಷ್ಟು ಆರ್ಥಿಕ ನಷ್ಟವಾಗಿದೆ. ಅಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗಿದೆ. ಈ ಕಳ್ಳರನ್ನು ಕೂಡಲೇ ಬಂದಿಸಿರಿ.

ಮಾಜಿ ಶಾಸಕ ರಾಜು ಕಾಗೆಯವರ ಪಂಪ ಸೆಟ್ ಕೇಬಲ್ ಕಳ್ಳತನವಾಗಿದೆ. ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಕಳ್ಳರ ಹಾವಳಿ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಕೇಬಲ್ ಕಳ್ಳರನ್ನು ಬಂಧಿಸಿ ಕ್ರಮ ಜರುಗಿಸಲು ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿರಿ ಎಂದು ಹೇಳಿ, ಈಗಾಗಲೇ ಐನಾಪುರ, ಮೋಳೆ, ಕೆಂಪವಾಡ, ಮದಬಾವಿ, ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದು ಲಕ್ಷಾಂತರ ಮೌಲ್ಯದ ಚಿನದನಾಭರಣ, ನಗದು ಹಣ, ಕಳ್ಳತನವಾಗಿದೆ. ಈಗ ಪೊಲೀಸರ ನಿಷ್ಕೃಇಯತೆ ಎದ್ದು ಕಾಣುತ್ತಿದೆ. ಕಳ್ಳರನ್ನು ಶೀಘ್ರದPಲ್ಲಿ ಬಂಧಿಸರೇ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ