Breaking News

ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ : ಬೊಮ್ಮಾಯಿ

Spread the love

ಹಾವೇರಿ: ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಂಜನಗೂಡು ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂಜನಗೂಡು ಘಟನೆ ನಡೆದ ಬಳಿಕ ಅನೇಕರ ಬಳಿ ಈ ಕುರಿತು ಚರ್ಚೆ ಮಾಡಿದ್ದೇನೆ. ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ. ಅಲ್ಲಿನ ಭಕ್ತರಿಗೆ ಘಾಸಿಯಾಗಿದೆ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪಕ್ಷದ ಮಾರ್ಗದರ್ಶನ ಪಡೆದು ಆ ಭಾಗದ ಜನರ ಭಾವನೆಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತೇನೆ. ಎಲ್ಲರಿಗೂ ಒಪ್ಪಿಗೆ ಆಗುವಂತಹ ನಿರ್ಣಯ ತೆಗೆದುಕೊಳ್ತೇವೆ. ಈ ಸರ್ಕಾರ ನಮ್ಮ ಕಾರ್ಯಕರ್ತರದ್ದು, ಕಾರ್ಯಕರ್ತರ ಭಾವನೆ ನಮಗೆ ಅರ್ಥವಾಗುತ್ತೆ. ಅವರ ಭಾವನೆಗೆ ಬೆಲೆ ಕೊಡುವಂತಹ ನಿರ್ಣಯಗಳನ್ನು ತೆಗೆದುಕೊಳ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಮಂದಿರದ ತೆರವು ಬಗ್ಗೆ ಪರಿಣಾಮಗಳನ್ನು ಯೋಚನೆ ಮಾಡದೆ ಶಾಂತಿ ಕದಡುವ ಪ್ರಯತ್ನಗಳು ನಡೆದಿವೆ. ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿಯೂ ಇದು ನಡೆದಿದೆ. ದೇಶವನ್ನು ಅಭದ್ರ ಮಾಡುವ ಕೆಲ ಸಂಗತಿಗಳು ನಡೆಯುತ್ತಿವೆ. ಇದಕ್ಕೆ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು. ಮಂದಿರದ ವಿಚಾರದಲ್ಲಿ ಹಲವಾರು ನಾಯಕರು ಸಂಘಟನೆ, ಕಾನೂನು ಪಂಡಿತರೊಡನೆ ಚರ್ಚೆ ಮಾಡಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇನೆ. ಮಂದಿರದ ವಿಚಾರದಲ್ಲಿ ಕೆಲ ಭಕ್ತರಿಗೆ ನೋವಾಗಿದೆ. ಅಲ್ಲಿನ ಭಕ್ತರ ಮನಸ್ಸಿಗೆ ನೋವಾಗದಂತೆ ಸರಿಪಡಿಸುವ ಕೆಲಸ ಮಾಡುತ್ತೇವೆ. ನಮ್ಮ ಮಿತ್ರರಿಗೆ ಕರೆ ಕೊಡುತ್ತೇನೆ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಸರಿದೂಗಿಸುವ ಕೆಲಸ ಮಾಡುತ್ತೇವೆ. ನಿಮ್ಮದೇ ಹಿತಚಿಂತನೆಯ ಸರ್ಕಾರ ಎಂದರು


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ