Breaking News

ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಯುವಕನ ಮೊಬೈಲ್ ಒಡೆದು, ಕಪಾಳಮೋಕ್ಷ ಮಾಡಿದ ಜಿಲ್ಲಾಧಿಕಾರಿ

Spread the love

ರಾಯಪುರ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರ ಬಂದಿದ್ದ ಯುವಕನನ್ನು ಜಿಲ್ಲಾಧಿಕಾರಿಯೊಬ್ಬರು ತಡೆದಿದ್ದು, ಕಪಾಳಮೋಕ್ಷ ಮಾಡಿ ಮೊಬೈಲ್‌ ಕಸಿದು ಅದನ್ನು ಒಡೆದು ಹಾಕಿದ ಪ್ರಸಂಗ ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿವೆ.

 

ವೈರಲ್ ಆಗಿರುವ ವಿಡಿಯೋದಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ವ್ಯಕ್ತಿಯೋರ್ವನ ಬಳಿಗೆ ಬಂದು ಆತನ ಬಳಿಯಿದ್ದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಮೊಬೈಲ್ ಫೋನ್ ಕೇಳಿ, ಆತ ಮೊಬೈಲ್​ ಕೊಟ್ಟ ತಕ್ಷಣ ಅದನ್ನು ನೆಲಕ್ಕೆಸೆಯುತ್ತಾರೆ. ನಂತರ ಸಿಟ್ಟಿಗೆದ್ದು ವ್ಯಕ್ತಿಯ ಕಪಾಳಕ್ಕೂ ಹೊಡೆಯುತ್ತಾರೆ.

https://twitter.com/Anurag_Dwary/status/1396148617686044673?ref_src=twsrc%5Etfw%7Ctwcamp%5Etweetembed%7Ctwterm%5E1396148617686044673%7Ctwgr%5E%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-kanowcom%2Flaakdounniyamaullanghanemaadidhayuvakanamobailodedukapaalamokshamaadidhajillaadhikaari-newsid-n282247280

 

 

ಈ ವ್ಯಕ್ತಿಯನ್ನು ಸಾಹಿಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಸಿದ ಕಾರಣಕ್ಕೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಔಷಧ ತರಲು ಹೋಗಿದ್ದ ಎಂದು ತಿಳಿದು ಬಂದಿದೆ.

 


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ