Breaking News

ನದಿ ತೀರದ ಗ್ರಾಮಗಳಿಗೆ ಪ್ರವಾಹ ಬೀತಿ ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ

Spread the love

ಮೂಡಲಗಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಗುರುವಾರದಂದು ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆ ಮೈದುಂಬಿ ಸುರಿಯುತ್ತಿರುವ ಘಟಪ್ರಭೆ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲೂಕಿನ ಸುಣಧೋಳಿ, ಕಮ¯ದಿನ್ನಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅವರಾದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ ಸೇರಿ 6 ಸೇತುವೆ ಜಲಾವೃತವಾಗಿ ರಸ್ತೆ ಸಂಚಾರ ಸ್ಥಗಿವಾಗಿಗೊಂಡಿದೆ.

ಸುಣಧೋಳಿಯಿಂದ ಮೂಡಲಗಿ ತಾಲೂಕಾ ಕೇಂದ್ರಕ್ಕೆ ಸಂಚಾರ ಸ್ಥಗಿತವಾಗಿ ಪ್ರಯಾನಿಕರ ಪರದಾಟ. ಜನಜೀವನ ಅಸ್ಥವ್ಯಸ್ತವಾಗಿ ಢವಳೇಶ್ವರ, ಅವರಾದಿ ಸೇತುವೆಗಳು ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರ ಸೇರಿದಂತೆ ಹಲವು ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ.

ಮೂಡಲಗಿ ತಾಲೂಕಿನ ಘಟಪ್ರಭೆ ನದಿ ತೀರದ ಹುಣಶ್ಯಾಳ(ಪಿ.ಜಿ) ತಿಗಡಿ, ಮಸಗುಪ್ಪಿ. ಪಟಗುಂದಿ. ಕಮಲದಿನ್ನಿ, ಸುಣಧೋಳಿ, ,ಬೈರನಟ್ಟಿ, ಮುನ್ಯಾಳ, ಹುಣಶ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಹಾಗೂ ಇನ್ನೂ ಕೇಲವು ಗ್ರಾಮಗಳ ಪ್ರವಾಹ ಬೀತಿ ಎದುರಾಗಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿವೆ.


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ