ಶಿವಮೊಗ್ಗ, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 4 ದಿನದ ಮಗುವನ್ನು ತುರ್ತು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಮಣಿಪಾಲ್ ತನಕ ಅಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮಗುವನ್ನು ಬುಧವಾರ ಝಿರೋ ಟ್ರಾಫಿಕ್ ಮೂಲಕ ಕರೆದುಕೊಂಡು ಹೋಗಲಾಯಿತು. ಶಿವಮೊಗ್ಗದಿಂದ ಹೊರಟ ಅಂಬ್ಯುಲೆನ್ಸ್ ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಮಣಿಪಾಲ್ ತಲುಪಿತು.
ಶಿವಮೊಗ್ಗ-ಬೆಂಗಳೂರು: 7 ದಿನದ ಮಗು ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್
ಭದ್ರಾವತಿಯ ದೇವೇಂದ್ರ ಮತ್ತು ಸುಪ್ರಿಯಾ ದಂಪತಿಗಳಿಗೆ 4 ದಿನದ ಹಿಂದೆ ಹೆಣ್ಣು ಮಗು ಜನಿಸಿತ್ತು.
ಹುಟ್ಟುವಾಗಲೇ ಮಗುವಿಗೆ ರಕ್ತದ ಕ್ಯಾನ್ಸರ್ ಇತ್ತು. ಇದನ್ನು ಪತ್ತೆ ಹಚ್ಚಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು.
ಶಿವಮೊಗ್ಗ ಪೊಲೀಸರಿಗೆ ಸಲಾಂ, ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ
ಮಗುವನ್ನು ಕರೆದುಕೊಂಡು ಹೋಗಲು ಶಿವಮೊಗ್ಗ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಶಿವಮೊಗ್ಗದಿಂದ ಉಡುಪಿ ಗಡಿಯ ತನಕ ಪೊಲೀಸ್ ಎಸ್ಕಾರ್ಟ್ ಜೊತೆ ಅಂಬ್ಯುಲೆನ್ಸ್ ಸಾಗಿತು. ಬಳಿಕ ಉಡುಪಿ ಜಿಲ್ಲಾ ಪೊಲೀಸರು ಝಿರೋ ಟ್ರಾಫಿಕ್‌ನಲ್ಲಿ ಕರೆದುಕೊಂಡು ಹೋದರು.
ಝಿರೋ ಟ್ರಾಫಿಕ್ ಬೇಡ : ಗೃಹ ಸಚಿವರ ಜನ ಮೆಚ್ಚುಗೆಯ ನಡೆ
ಮಾರ್ಗದುದ್ದಕ್ಕೂ ವಾಹನ ಸವಾರರು ವಾಹನವನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಅಂಬ್ಯುಲೆನ್ಸ್ ಯಾವುದೇ ತಡೆ ಇಲ್ಲದೇ ಸಾಗಲು ಅವಕಾಶ ಮಾಡಿಕೊಟ್ಟರು. ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸಿದರು.
ವಿಡಿಯೋ ವೈರಲ್ : ಶಿವಮೊಗ್ಗದಿಂದ ಹೊರಟ ಮಗುವಿದ್ದ ಅಂಬ್ಯುಲೆನ್ಸ್ ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಮಣಿಪಾಲ್ ಆಸ್ಪತ್ರೆ ತಲುಪಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.