ಮೂಡಲಗಿ: ಕೇಂದ್ರ ಬಿಜೆಪಿ ಸರ್ಕಾರ ನವಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮ ನಿರ್ಭರ ಭಾರತ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ದೇಶದ ಜನರ ಆಶೋತ್ತರಗಳಿಗೆ ಸ್ಪಂಧಿಸುತ್ತಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 20 ಸಾವಿರ ಕೋಟಿ ಗ್ಯಾರಂಟಿ ಸ್ಕೀಂನ್ನು ಜಾರಿಗೊಳಿಸಿದೆ. ಇದರಿಂದ 2 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಮಸ್ಯೆಗಳ ಒತ್ತಡ ಕಡಿಮೆ ಮಾಡಲಾಗಿದೆ ಎಂದರು.
ಕೊರೊನಾದಿಂದ ಬಡವರಿಗೆ ಕೇಂದ್ರದಿಂದ ನವೆಂಬರ ತಿಂಗಳವರೆಗೆ ಉಚಿತ ಪಡಿತರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸೂಚಿಸಿದೆ. ಇದರ ಲಾಭವನ್ನ ದೇಶದ 80 ಕೋಟಿಗೂ ಅಧಿಕ ಕುಟುಂಬಗಳು ಪಡೆದುಕೊಳ್ಳಲಿದ್ದಾರೆ ಎಂದರು.
https://youtu.be/eP5kqN8ixFA
ಕೊರೊನಾ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದರಿಂದ ಸೋಂಕು ಹರಡುವಿಕೆಯನ್ನು ಹಾಗೂ ಸಾವಿನ ಪ್ರಮಾಣ ವಿಶ್ವಕ್ಕೇ ಹೊಲಿಸಿದ್ರೆ ದೇಶದಲ್ಲಿ ಕಡಿಮೆ ಇದೆ. ಮೋದಿ ಅವರು ಘೋಷನೆ ಮಾಡಿದ 20 ಲಕ್ಷ ಕೋಟಿಯ ಪ್ಯಾಕೇಜ್ ದೇಶದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯಾಗಿದೆ ಎಂದರು.
ಪ್ರಕಾಶ ಮಾದರ, ಈರಣ್ಣ ಅಂಗಡಿ, ಬಸವರಾಜ ಹುಳ್ಳೇರ, ಶ್ರೀಶೈಲ ತುಪ್ಪದ, ಬಸವರಾಜ ಹಿರೇಮಠ, ಪರಪ್ಪ ಗಿರೆಣ್ಣವರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಇತರರು ಇದ್ದರು.