Breaking News

ಅಪ್ಪನನ್ನೇ ಹೊಡೆದು ನದಿಗೆ ತಳ್ಳಿ ಕೊಂದ ಮಗ

Spread the love

ಬೆಂಗಳೂರು : ತಾಯಿಯನ್ನ ಅವಾಚ್ಯವಾಗಿ ನಿಂದಿಸುತ್ತಿದ್ದವನನ್ನ ಆಕೆಯ ಮಗ ಹತ್ಯೆ ಮಾಡಿರುವ ಘಟನೆ ಸೋಮವಾರ ಉಲ್ಲಾಳ ಉಪನಗರದಲ್ಲಿ ವರದಿಯಾಗಿದೆ. ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಅವಿನಾಶ್ (36) ಎಂಬಾತನನ್ನ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿ‌ ಕಾರ್ತಿಕ್‌ (26)ನನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಡಿಸಿಪಿ ಪ್ರತಿಕ್ರಿಯೆ ಹೀಗಿದೆ: ಈ ಕುರಿತು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ಮಾತನಾಡಿ, ಕಾರ್ತಿಕ್‌ನ ಸಂಬಂಧಿಯಾಗಿದ್ದ ಅವಿನಾಶ್ ಶಾಲಾ ಬಸ್‌, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಗಂಡನ ಮದ್ಯಪಾನದ ಚಟಕ್ಕೆ ಬೇಸತ್ತು ಅವಿನಾಶ್ ಪತ್ನಿ ದೂರವಾಗಿದ್ದಳು. ಕೆಲವು ದಿನಗಳಿಂದ‌ ಕೆಲಸಕ್ಕೆ ಹೋಗದ ಅವಿನಾಶ್, ಕಾರ್ತಿಕ್‌ ಮನೆಯ ಪಕ್ಕದಲ್ಲೇ ಸಣ್ಣ ರೂಮ್‌ನಲ್ಲಿ ವಾಸವಿದ್ದ. ಸಂಬಂಧಿಕನಾಗಿದ್ದರಿಂದ ಅವಿನಾಶ್‌ಗೆ ನಿತ್ಯ ಊಟ – ತಿಂಡಿಯನ್ನ ಕಾರ್ತಿಕ್‌ನ ಮನೆಯವರೇ ನೀಡುತ್ತಿದ್ದರು. ತಡರಾತ್ರಿ 10:30ರ ಸುಮಾರಿಗೆ ಕಾರ್ತಿಕ್ ಇರದಿದ್ದಾಗ ಪಾನಮತ್ತನಾಗಿ ಬಂದಿದ್ದ ಅವಿನಾಶ್, ಆತನ ತಾಯಿ ಹಾಗೂ ಅಜ್ಜಿಗೆ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ. ಅವಿನಾಶ್‌ನ ವರ್ತನೆಯಿಂದ ಬೇಸತ್ತ ಕಾರ್ತಿಕ್‌ನ ತಾಯಿ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೆಲ ಸಮಯದ ಬಳಿಕ ಮನೆಗೆ ಬಂದಿದ್ದ ಕಾರ್ತಿಕ್, ಕಬ್ಬಿಣದ ರಾಡ್‍ನಿಂದ ಅವಿನಾಶ್ ತಲೆ ಹಾಗೂ ಬೆನ್ನಿಗೆ ಹೊಡೆದಿದ್ದ. ಬಳಿಕ ಅಸ್ವಸ್ಥನಾಗಿದ್ದ ಅವಿನಾಶ್‌ಗೆ ತಾಯಿ – ಮಗ ಪ್ರಥಮ ಚಿಕಿತ್ಸೆ ನೀಡಲು ಯತ್ನಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿಸಿದ್ದಾರೆ.

ಅಪ್ಪನನ್ನೇ ಹೊಡೆದು ನದಿಗೆ ತಳ್ಳಿ ಕೊಂದ ಮಗ : ತಂದೆಯನ್ನು ಸ್ವಂತ ಮಗನೇ ಆಯುಧದಿಂದ ಗಾಯಗೊಳಿಸಿ ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ಅಕ್ಟೋಬರ್ 26, 2025 ರಂದು ನಡೆದಿತ್ತು.

ಗೋಪಿನಾಥಂ ಗ್ರಾಮದ ಶಂಕರನ್ (70) ಹತ್ಯೆಯಾದವರು. ಈತನ ಎರಡನೇ ಮಗ ಗೋವಿಂದರಾಜ್ ಆರೋಪಿ. ಎರಡು ದಿನಗಳ ಹಿಂದೆ ಶಂಕರನ್ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು.

ಶನಿವಾರ ಸಂಜೆ ಕಾವೇರಿ ನದಿಯಲ್ಲಿ ಶಂಕರನ್​ ಮೃತದೇಹ ಪತ್ತೆಯಾಗಿತ್ತು. ಮೃತನ ಪತ್ನಿ ಪಳನಿಯಮ್ಮ ತಮ್ಮ ಮಗ ಗೋವಿಂದರಾಜು ಅಪ್ಪನನ್ನು ಆಯುಧಗಳಿಂದ ಹೊಡೆದು ಕಾವೇರಿ ನದಿಗೆ ತಳ್ಳಿದ್ದಾನೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆ ಆತನ ಮಗ ಗೋವಿಂದರಾಜ್​ನನ್ನು ಪೊಲೀಸರು ಬಂಧಿಸಿದ್ದರು.


Spread the love

About Laxminews 24x7

Check Also

ಕ್ರೀಡಾಳುಗಳಿಗೆ ಒಲಿಂಪಿಕ್‌ ತರಬೇತಿಗೆ ಸರ್ಕಾರದಿಂದ 10ಲಕ್ಷ ರೂ‌ಪಾಯಿ ನೀಡುತ್ತೇವೆ: ಸಿಎಂ

Spread the love ಮಂಗಳೂರು: ರಾಜ್ಯ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಹಿ ಸುದ್ದಿಯೊಂದನ್ನು ತಿಳಿಸಿದ್ದಾರೆ. ಜನಸಂಖ್ಯೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ