Breaking News

ಪ್ರಗತಿಪರ ಯುವ ರೈತನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ ಸಚಿವ ಶಿವಾನಂದ ಪಾಟೀಲ

Spread the love

ಪ್ರಗತಿಪರ ಯುವ ರೈತನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ ಸಚಿವ ಶಿವಾನಂದ ಪಾಟೀಲ
ವರ್ಷಪೂರ್ತಿ ಹಣ್ಣು ಬಿಡುವ ಥೈಲ್ಯಾಂಡ್ ಮಾವು ಬೆಳೆದ ಸಾವಯವ ರೈತ
ಕಗ್ಗೋಡ ಪದವೀಧರ ಯುವರೈತ ನವೀನ ಸಾಧನೆಗೆ ಸಚಿವರಿಂದ ಮೆಚ್ಚುಗೆ
ವಿಜಯಪುರ ಜಿಲ್ಲೆಯ ಪದವೀಧರ ಯುವ ಪ್ರಗತಿಪರ ರೈತರೊಬ್ಬರು ಥೈಲ್ಯಾಂಡ್ ಮೂಲದ ಮಾವು ಬೆಳೆದು ಯಶಸ್ಸು ಸಾಧಿಸಿದ್ದಾರೆ. ಹಣ್ಣಿನ ಸ್ವಾದ ಸವಿದ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಪ್ರಗತಿಪರ ಯುವರೈತ ನವೀನ್ ನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಪದವೀಧರ ಯುವ ಪ್ರಗತಿಪರ ರೈತ ನವೀನ ರಾವುತಪ್ಪ ಮಂಗಾನವರ ತಾವು ಬೆಳೆದ ಮಾವಿನೊಂದಿಗೆ ಸಚಿವ ಶಿವಾನಂದ ಪಾಟೀಲ ಅವರ ಭೇಟಿಗೆ ಬಂದಿದ್ದರು. ನವೀನ್ ಶಿವಣಗಿ ಗ್ರಾಮದ ತಮ್ಮ 8 ರಲ್ಲಿ 7 ಎಕರೆ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಥೈಲ್ಯಾಂಡ್ ಮೂಲದ ಮಾವು ಬೆಳೆದಿದ್ದಾರೆ. ಈ ಮಾವಿನ ವಿಶೇಷ ಏನೆಂದರೆ ವರ್ಷಪೂರ್ತಿ ಹಣ್ಣು ಬಿಡುತ್ತದೆ ಎಂದು ಸಚಿವರಿಗೆ ವಿವರಿಸಿದರು. 2011 ಡಿಸೆಂಬರ್ ತಿಂಗಳಲ್ಲಿ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ನವೀನ ಚಳಿಗಾಲದಲ್ಲಿ ವೈವಿಧ್ಯಮಯ ಗಾತ್ರ, ಬಣ್ಣ, ಸ್ವಾದಗಳ ಮಾವಿನ ಹಣ್ಣುಗಳನ್ನು ಕಂಡು ಅಚ್ಚರಿಗೊಂಡು,
ಈ ಹಣ್ಣಿನ ಬಗ್ಗೆ ಕುತೂಹಲ ಬೆಳೆಸಿಕೊಂಡರು. ಇನ್ನೂ ಇದಕ್ಕಾಗಿ ಸತತ 6 ವರ್ಷಗಳ ಕಾಲ ಬೇರೆಬೇರೆ ಋತುಮಾನದಲ್ಲಿ ಥ್ಯೈಲೆಂಡಗೆ ಭೇಟಿ ನೀಡಿ, ವರ್ಷಪೂರ್ತಿ ಇಳುವರಿ ಕೊಡುವ ಮಾವಿನ ಅಸಲೀಯತ್ ಏನಿದೆ ಎಂಬ ಮಾಹಿತಿ ಸಂಗ್ರಹಿಸಿದರು. ಅಂತಿಮವಾಗಿ 2021 ರಲ್ಲಿ ವರ್ಷಪೂರ್ತಿ ಇಳುವರಿ ಕೊಡುವ ಥೈಲ್ಯಾಂಡ್ ಮೂಲದ ವಿವಿಧ 20 ತಳಿಯ 5500 ಮಾವಿನ ಸಸಿಗಳನ್ನು ವಿಜಯಪುರದ ಶಿವಣಗಿ ತೋಟಕ್ಕೆ ತಂದು ನಾಟಿ ಮಾಡಿದರು.
ಒಂದೂ ವರೆ ವರ್ಷದಲ್ಲಿ ಇಳುವರಿ ಆರಂಭಗೊಂಡರೂ ಸಂತೃಪ್ತನಾಗದ ಪ್ರಯೋಗಶೀಲ ಯುವ ರೈತ, ಪ್ರತಿ ತಳಿಯ ಬಣ್ಣ, ಗಾತ್ರ, ಸ್ವಾದಗಳ ಅವಲೋಕನದಲ್ಲಿ ತೊಡಗಿದರು. ಇದಕ್ಕಾಗಿ 5 ವರ್ಷ ಕಾಲ ಪ್ರತಿ ಗಿಡದ ಹಣ್ಣಿನ ಸ್ವಾದ ಪರೀಕ್ಷಿಸಿದ ಸಾವಯವ ಪ್ರಗತಿಪರ ರೈತ ನವೀನ ಗರಿಷ್ಠ ಗುಣಮಟ್ಟ ಹಾಗೂ ಗ್ರಾಹಕರ ಆಕರ್ಷಣೆಯ ತಳಿಯನ್ನು ಉಳಿಸಿಕೊಂಡು ಬಂದಿದ್ದಾಗಿ ಹಾಗೂ ಸ್ವಾದ ರಹಿತ ಗಿಡಗಳನ್ನು ಕಿತ್ತು ಹಾಕಿ ಗುಣಮಟ್ಟದ ಉತ್ಕೃಷ್ಟತೆಗೆ ಆದ್ಯತೆ ನೀಡಿದ್ದಾಗಿ ವಿವರ ನೀಡಿದರು.

Spread the love

About Laxminews 24x7

Check Also

ಮೈಸೂರು ದಸರಾ 2025: ಆಹಾರ ಮೇಳದಲ್ಲಿ ಆದಿವಾಸಿಗಳ ವಿಶೇಷ ಬಂಬೂ ಬಿರಿಯಾನಿ

Spread the loveಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಹಾರ ಮೇಳ ಆಯೋಜಿಸಿದ್ದು, ಬಂಬೂ ಬಿರಿಯಾನಿ ಜನರನ್ನು ಸೆಳೆಯುತ್ತಿದೆ. ಮೇಳಕ್ಕೆ ಬರುತ್ತಿರುವವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ