Breaking News

ಶ್ರೀ ವಿಶ್ವಕರ್ಮ ಸ್ತೋತ್ರಗಳನ್ನು ಅನುಸರಿಸಿ ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಿ ಶ್ರೀ ಪ್ರಮೋದ ಮಹಾಸ್ವಾಮೀಗಳು ಹೇಳಿಕೆ

Spread the love

ಶ್ರೀ ವಿಶ್ವಕರ್ಮ ಸ್ತೋತ್ರಗಳನ್ನು ಅನುಸರಿಸಿ ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಿ
ಶ್ರೀ ಪ್ರಮೋದ ಮಹಾಸ್ವಾಮೀಗಳು ಹೇಳಿಕೆ
ಪುರಾಣಗಳ ಪ್ರಕಾರ ಶ್ರೀ ವಿಶ್ವಕರ್ಮ ಅವರು ಜಗತ್ತಿನ ಸೃಷ್ಟಿಕರ್ತರಾಗಿದ್ದಾರೆ, ವಿಶ್ವಕರ್ಮ ಸ್ತೋತ್ರಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸುವುದರ ಮೂಲಕ ಸುಂದರ, ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಿತ್ತೂರಿನ ಶ್ರೀ ವಿಶ್ವಕರ್ಮ ಏಕದಂಡಗಿ ಶ್ರೀ ಮಠದ ಶ್ರೀ ಸರಸ್ವತಿ ಪೀಠಾಧೀಶರಾದ ಶ್ರೀ ಆರ್. ಪ್ರಮೋದ ಮಹಾಸ್ವಾಮಿಗಳು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪನಿಷತ್ತುಗಳೇ ನಮಗೆ ಆಧಾರಗಳಾಗಿವೆ.
ಸೃಷ್ಟಿಕರ್ತ ವಿಶ್ವಕರ್ಮರ ಬಗ್ಗೆ ವೇದ ಉಪನಿಷತ್ತುಗಳಂದ ಬಹಳಷ್ಟು ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಂದು ಗ್ರಾಮದಲ್ಲಿನ ದೇವಸ್ಥಾನಗಳಲ್ಲಿ ಗ್ರಂಥಾಲಯನ್ನು ಸ್ಥಾಪಿಸಿ ಧಾರ್ಮಿಕ, ಸಾಹಿತ್ಯ, ವೇದ ಉಪನಿಷತ್ತುಗಳನ್ನು ಇಡುವುದರ ಮೂಲಕ ಜನರಿಗೆ ನಮ್ಮ ಇತಿಹಾಸದ ಬಗ್ಗೆ ಓದಲು ಅವಕಾಶ ಕಲ್ಪಸಬೇಕು ಎಂದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಅವರು ಮಾತನಾಡಿ ವಿಶ್ವಕರ್ಮ ಪುರಾಣದ ಆಧಾರದ ಮೇಲೆ ಗಾಂಧರ್ವ ಲೋಕ ಸೃಷ್ಟಿಕರ್ತರು ಎಂಬುದನ್ನು ನಾವು ಕಾಣಬಹುದು. ವಿಶ್ವಕರ್ಮಸಮಾಜದ ಜನ ತಮ್ಮ ವೃತ್ತಿ ಕೌಶಲ್ಯದೊಂದಿಗೆ ತಮ್ಮ ಮಕ್ಕಳಗೆ ಒಳ್ಳೆಯ ವಿದ್ಯಾಭ್ಯಾಸ, ಉತ್ತಮ ಸಂಸ್ಥಾರಗಳನ್ನು ತಿಳಿಸಿಕೊಟ್ಟರೆ ಸಮಾದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ ಎಂದರು.
ಮಹಾನಗರ ಪಾಲಕ ಉಪ ಆಯುಕ್ತ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿನರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮ ಭಾವಚಿತ್ರದ ಭವ್ಯ ಮೆರವಣಿಗೆಗೆ ಮಹಾನಗರ ಪಾಲಿಕೆ ಉಪ ಮಹಾ ಪೌರರಾದ ವಾಣಿ ಜೋಶಿ ಅವರು ಚಾಲನೆ ನೀಡಿದರು. ವಿವಿಧ ಜನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯು ಅಶೋಕ ವೃತ್ತದಿಂದ ಕುಮಾರ ಗಂಧರ್ವ ಕಲಾ ಮಂದಿರಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಮೊಹಮ್ಮದ್ ರೋಷನ್,ಉಮೇಶ್ ಪತ್ತಾರ, ವೈಶಾಲಿ ಸುತಾರ್, ಸಿ.ವೈ ಪತ್ತಾರ, ಮಂಜುನಾಥ್ ಬಡಿಗೇರ, ರಘು ಹಾವನೂರ ಸೇರಿದಂತೆ ಸಮಾಜದ ಮುಖಂಡರು, ಗಣ್ಯಮಾನ್ಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್- 21 ದಿನಗಳಲ್ಲಿ 106 ಕೋಟಿ ದಂಡ ಸಂಗ್ರಹ!

Spread the loveಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್- 21 ದಿನಗಳಲ್ಲಿ 106 ಕೋಟಿ ದಂಡ ಸಂಗ್ರಹ! ಸಂಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ