ಕಾಂಗ್ರೆಸ್ ಸರ್ಕಾರ ಬಂದು 2 ವರ್ಷ ಕಳೆದರೂ ಅಭಿವೃದ್ಧಿ ಶೂನ್ಯ
ಬರೀ ಗ್ಯಾರಂಟಿಯಲ್ಲೇ ಕಾಲಹರಣ ರಸ್ತೆಗಳ ಗುಂಡಿ ತುಂಬಲಿಕ್ಕೆ ಹಣವಿಲ್ಲ; ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪ
ಕಾಂಗ್ರೆಸ್ ಸರ್ಕಾರ ಬಂದು 2 ವರ್ಷ ಕಳೆದರೂ ಅಭಿವೃದ್ಧಿ ಶೂನ್ಯ
ಬರೀ ಗ್ಯಾರಂಟಿಯಲ್ಲೇ ಕಾಲಹರಣ ರಸ್ತೆಗಳ ಗುಂಡಿ ತುಂಬಲಿಕ್ಕೆ ಹಣವಿಲ್ಲ
ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪ
ಕೈ ಟಿಕೆಟ್ ಆಕಾಂಕ್ಷಿಗಳ ಬೆನ್ನಿಗೆ ಜೆ ಟಿ ಪಾಟೀಲ್ ಚೂರಿ ಹಾಕ್ತಿದ್ದಾರೆ
ಕಳೆದ ಬಾರಿ ಚುನಾವಣೆಯಲ್ಲಿ ಜೆ.ಟಿ. ಪಾಟೀಲ್, ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿ, ಕಣ್ಣೀರು ಹಾಕುವ ಮೂಲಕ ಜನರ ಆಶೀರ್ವಾದ ಪಡೆದಿದ್ದರು ಎಂದು ನಿರಾಣಿ ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪಿಸಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಇಂದು ಕೆರೂರಿನಲ್ಲಿ ಬೀಳಗಿ ಶಾಸಕ ಜೆ.ಟಿ. ಪಾಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಬಾರಿ ಚುನಾವಣೆಯಲ್ಲಿ ಪಾಟೀಲ್, ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿ, ಕಣ್ಣೀರು ಹಾಕುವ ಮೂಲಕ ಜನರ ಆಶೀರ್ವಾದ ಪಡೆದಿದ್ದರು ಎಂದು ನಿರಾಣಿ ಆರೋಪಿಸಿದರು. ಇದೇ ರೀತಿ, ಈಗಲೂ ಪಾಟೀಲ್ ಅವರು 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆಲವು ನಾಯಕರಿಗೆ ಹೇಳಿದ್ದಾರೆ. ಕೆಲವೊಂದು ಆಕಾಂಕ್ಷಿಗಳಿಗೆ ಮುಂದಿನ ಅಭ್ಯರ್ಥಿ ನೀವೇ ಎಂದು ಭರವಸೆ ನೀಡಿದ್ದಾರೆ. ಆದರೆ, ನಿರಾಣಿಯವರನ್ನು ಸವಾಲು ಹಾಕುವ ನೆಪದಲ್ಲಿ ಪಾಟೀಲ್ ಮತ್ತೆ ಚುನಾವಣೆಗೆ ಸ್ಪರ್ಧಿಸಲು ತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಅವರು ಕೈ ಟಿಕೆಟ್ ಆಕಾಂಕ್ಷಿಗಳ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ನಿರಾಣಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧವೂ ನಿರಾಣಿ ವಾಗ್ದಾಳಿ ನಡೆಸಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ಮೇಲೆ ಸರ್ಕಾರ ಅವಲಂಬಿತವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕೂಡ ಸರ್ಕಾರಕ್ಕೆ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.
ಬಾದಾಮಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಿರಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜೀವ ಕೊಟ್ಟ ಕ್ಷೇತ್ರ ಬಾದಾಮಿ. ನಮ್ಮ ಅಧಿಕಾರಾವಧಿಯಲ್ಲಿ ಕೆರೂರು ಲಿಫ್ಟ್ ಇರಿಗೇಷನ್, ಕೆರೆ ತುಂಬುವ ಯೋಜನೆ, ಅನವಾಲ, ಕಾಡರಕೊಪ್ಪ ಲಿಫ್ಟ್ ಇರಿಗೇಷನ್ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳನ್ನು ನಾವು ಮಾಡಿದ್ದೇವೆ. ಈ ಯೋಜನೆಗಳು ನಮ್ಮ ಅಧಿಕಾರಾವಧಿಯ ನಂತರವೂ ಮುಂದುವರಿಯದೆ ಸ್ಥಗಿತಗೊಂಡಿವೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದೇವೆ. ಇನ್ನೊಂದು ಬಾರಿ ಬಾದಾಮಿ ರೈತರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ನಾವು ಮಾಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮನವಿ ಮಾಡಿಕೊಳ್ಳುತ್ತೇವೆ ಎಂದು ನಿರಾಣಿ ಹೇಳಿದರು