Breaking News

ವಿಜಯಪುರ–ಮಂಗಳೂರು ನಡುವೆ ವಿಶೇಷ ರೈಲು ಇಂದಿನಿಂದ ಖಾಯಂ: ಟಿಕೆಟ್​ ವಿವರ ಇಲ್ಲಿದೆ

Spread the love

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ರೈಲು ಸಂಖ್ಯೆ 07377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಇಂದಿನಿಂದ ಅಂದರೆ ಸೆಪ್ಟೆಂಬರ್ 1ರಿಂದ ಹಾಗೂ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್‌-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 2ರಿಂದ ಖಾಯಂ ಸಂಚಾರ ಮಾಡಲಿದೆ. ಹೊಸ ದರ ಪಟ್ಟಿಯನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ.

ಈಗಾಗಲೇ ರೈಲು ಸಂಖ್ಯೆ ಬದಲಾವಣೆಯೊಂದಿಗೆ ರೈಲು ಸಂಖ್ಯೆ 17377/78 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್​ ಬುಕ್ಕಿಂಗ್ ಆರಂಭಗೊಂಡಿದೆ. ಕಾಯ್ದಿರಿಸಿದ ದರ್ಜೆಯ ದರಗಳು, ಪ್ರಸ್ತುತ ಇರುವ ಮತ್ತು ನೂತನ ದರದ ಪಟ್ಟಿ ಈ ಕೆಳಗಿನಂತಿದೆ.

ವಿಜಯಪುರ/ಬಾಗಲಕೋಟೆಯಿಂದ ಮಂಗಳೂರು ಸೆಂಟ್ರಲ್​ಗೆ:

  • SL: ಹಳೇ ದರ 570 ಹೊಸ ದರ 440 ರೂ (₹130 ಕಡಿಮೆ)
  • 3A: ಹಳೇ ದರ 1530 ಹೊಸ ದರ 1185 ರೂ (₹345 ಕಡಿಮೆ)
  • 2A: ಹಳೇ ದರ 2110 ಹೊಸದರ 1690 ರೂ (₹420 ಕಡಿಮೆ)

ಗದಗ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್​ಗೆ:

  • SL: ಹಳೇ ದರ 480 ಹೊಸ ದರ 375 ರೂ (₹105 ಕಡಿಮೆ)
  • 3A: ಹಳೇ ದರ 1295 ಹೊಸದರ 1005 ರೂ (₹290 ಕಡಿಮೆ)
  • 2A: ಹಳೇ ದರ 1835 ಹೊಸದರ 1425 ರೂ (₹410 ಕಡಿಮೆ)

ಶ್ರೀಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್​ಗೆ:

  • SL: ಹಳೇ ದರ 445 ಹೊಸದರ 345 ರೂ (₹100 ಕಡಿಮೆ)
  • 3A: ಹಳೇ ದರ 1210 ಹೊಸದರ 940 ರೂ (₹270 ಕಡಿಮೆ)
  • 2A: ಹಳೇ ದರ 1715 ಹೊಸದರ 1335 ರೂ (₹380 ಕಡಿಮೆ)

ಶ್ರೀ ಮಹಾದೇವಪ್ಪ ಮೈಲಾರ ಹಾವೇರಿಯಿಂದ ಮಂಗಳೂರು ಸೆಂಟ್ರಲ್‌ಗೆ:

  • SL: ಹಳೇ ದರ 410 ಹೊಸದರ 320 ರೂ (₹90 ಕಡಿಮೆ)
  • 3A: ಹಳೇ ದರ 1120 ಹೊಸದರ 855 ರೂ (₹265 ಕಡಿಮೆ)
  • 2A: ಹಳೇ ದರ 1560 ಹೊಸದರ 1215 ರೂ (₹345 ಕಡಿಮೆ)

ದಾವಣಗೆರೆಯಿಂದ ಮಂಗಳೂರು ಸೆಂಟ್ರಲ್​ಗೆ:

  • SL: ಹಳೇ ದರ 390 ಹೊಸದರ 280 ರೂ (₹110 ಕಡಿಮೆ)
  • 3A: ಹಳೇ ದರ 1060 ಹೊಸದರ 750 ರೂ (₹310 ಕಡಿಮೆ)
  • 2A: ಹಳೇ ದರ 1455 ಹೊಸದರ 1060 ರೂ (₹395 ಕಡಿಮೆ)

ಅರಸೀಕೆರೆ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್​ಗೆ:

  • SL: ಹಳೇ ದರ 390 ಹೊಸದರ 205 ರೂ (₹185 ಕಡಿಮೆ)
  • 3A: ಹಳೇ ದರ 1060 ಹೊಸದರ 515 ರೂ (₹545 ಕಡಿಮೆ)
  • 2A: ಹಳೇ ದರ 1455 ಹೊಸದರ 720 ರೂ (₹735 ಕಡಿಮೆ)

ಹಾಸನ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ:

  • SL: ಹಳೇ ದರ 390 ಹೊಸದರ 185 ರೂ (₹205 ಕಡಿಮೆ)
  • 3A: ಹಳೇ ದರ 1060 ಹೊಸದರ 515 ರೂ (₹545 ಕಡಿಮೆ)
  • 2A: ಹಳೇ ದರ 1455 ಹೊಸದರ 720 ರೂ (₹735 ಕಡಿಮೆ)

ಕಾಯ್ದಿರಿಸದ/ಸಾಮಾನ್ಯ ದರ್ಜೆಯ ದರಗಳು ಪ್ರಸ್ತುತ ಮತ್ತು ಹೊಸ ದರಗಳ ವಿವರ:

  • ವಿಜಯಪುರದಿಂದ ಮಂಗಳೂರು ಸೆಂಟ್ರಲ್: ಹಳೇ ದರ 270 ಹೊಸದರ ₹255
  • ಗದಗ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 220 ಹೊಸದರ ₹205
  • ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಹಳೇ ದರ
    210 ಹೊಸದರ ₹195
  • ಶ್ರೀ ಮಹಾದೇವಪ್ಪ ಮೈಲಾರ ಹಾವೇರಿಯಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 185 ಹೊಸದರ ₹170
  • ದಾವಣಗೆರೆಯಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 170 ಹೊಸದರ ₹155
  • ಅರಸೀಕೆರೆ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 125 ಹೊಸದರ ₹110
  • ಹಾಸನ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 110 ಹೊಸದರ ₹95
  • ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 65 ಹೊಸದರ ₹50
  • ಕಬಕ ಪುತ್ತೂರುನಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 45 ಹೊಸದರ ₹30
  • ಬಂಟ್ವಾಳದಿಂದ ಮಂಗಳೂರು ಸೆಂಟ್ರಲ್‌ಗೆ: ಹಳೇ ದರ 45 ಹೊಸದರ ₹30

ಈ ರೈಲು ಪ್ರಸ್ತುತ ನಿಲ್ಲುವ ನಿಲ್ದಾಣಗಳ ವಿವರಗಳು ಈ ಕೆಳಗಿನಂತಿವೆ:

ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಅರಸೀಕೆರೆ ಜಂಕ್ಷನ್, ಕಡೂರು, ಬಿರೂರು ಜಂಕ್ಷನ್, ಚಿಕ್ಕಜಾಜೂರು ಜಂಕ್ಷನ್, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಶ್ರೀ ಮಹಾದೇವಪ್ಪ ಮೈಲಾರ ಹಾವೇರಿ, ಯಲವಿಗಿ, ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್​, ಅಣ್ಣಿಗೇರಿ, ಗದಗ ಜಂಕ್ಷನ್, ಮಲ್ಲಾಪುರ, ಹೊಳೆ ಆಲೂರು, ಬಾದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ.

ಸಾರ್ವಜನಿಕರು ಹೆಚ್ಚಿನ ವಿವರಗಳು ಮತ್ತು ಸೀಟು ಲಭ್ಯತೆಗಾಗಿ ಐಆರ್‌ಟಿಸಿ ಅಥವಾ ರೈಲ್ ಓನ್(RailOne) ಆ್ಯಪ್​ ಬಳಸಿ ವಿವರ ಪಡೆಯಬಹುದು ಮತ್ತು ರೈಲು ವೇಳಾಪಟ್ಟಿ ಹಾಗೂ ಓಡಾಟದ ಸಮಯಕ್ಕಾಗಿ ಎನ್‌ಟಿಇಎಸ್ ಜಾಲತಾಣ ಅಥವಾ ಆ್ಯಪ್​ ಬಳಸಬಹುದು.

ಖಾಯಂಗೊಂಡ ನಂತರ, ಎಕ್ಸ್‌ಪ್ರೆಸ್ ವರ್ಗದ ಸೀಸನಲ್ ಪಾಸ್ ಹೊಂದಿರುವವರು ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸದೆ ಈ ರೈಲಿನಲ್ಲಿ ಪ್ರಯಾಣಿಸಬಹುದು, ಖಾಯಂಗೊಂಡ ನಂತರ ಕಾಯ್ದಿರಿಸದ ದರವು ಎಕ್ಸ್‌ಪ್ರೆಸ್ ವರ್ಗದಲ್ಲಿ ಬರುವ ಕಾರಣ ಈ ರೈಲಿನ ಟಿಕೆಟ್​ ದರಗಳು ಎಕ್ಸ್‌ಪ್ರೆಸ್ ವರ್ಗದ ಟಿಕೆಟ್​ ದರ ಆಗಿರುತ್ತದೆ ಎಂಬುದಾಗಿಯೂ
ದಕ್ಷಿಣ ನ್ಯೆರುತ್ಯ ಮುಖ್ಯ ಸಾರ್ವಜನಿಕ ಸಂಪರ್ಕಣಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.


Spread the love

About Laxminews 24x7

Check Also

ವಿರಾಟ ಹಿಂದೂ ಸಮ್ಮೇಳನ ಹಿನ್ನೆಲೆ: ಶ್ರೀ ಸಾಯಿ ಮಂದಿರದಲ್ಲಿ ಆಕರ್ಷಕ ರಂಗೋಲಿ ಸ್ಪರ್ಧೆ; 120ಕ್ಕೂ ಹೆಚ್ಚು ಮಹಿಳೆಯರು ಭಾಗಿ

Spread the love ವಿರಾಟ ಹಿಂದೂ ಸಮ್ಮೇಳನ ಹಿನ್ನೆಲೆ: ಶ್ರೀ ಸಾಯಿ ಮಂದಿರದಲ್ಲಿ ಆಕರ್ಷಕ ರಂಗೋಲಿ ಸ್ಪರ್ಧೆ; 120ಕ್ಕೂ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ