Breaking News

ಚಿನ್ನಯ್ಯನಿಗೆ ಎಸ್​ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ

Spread the love

ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ (Dharmasthala) ಪ್ರಕರಣದಲ್ಲಿ ‘ಬುರುಡೆ ಗ್ಯಾಂಗ್‌’ನ ಬುರುಡೆಯಾಟ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರಿನ ಬಾಗಲುಗುಂಟೆ ಜಯಂತ್‌ ಮನೆ ಮತ್ತು ವಿದ್ಯಾರಣ್ಯಪುರ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ನಡೆಸಿದ ಬಳಿಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಬುರುಡೆ ಸಿಕ್ಕಿದ್ದು, ಬುರುಡೆ ರಿಹರ್ಸಲ್ ನಡೆದಿದ್ದ ಬಗ್ಗೆ ರೋಚಕ ಸಂಗತಿಗಳು ಎಸ್ಐಟಿ ತನಿಖೆಯಿಂದ ಬಹಿರಂಗೊಂಡಿದೆ.

ಬುರುಡೆ ಪ್ಲ್ಯಾನ್‌ಗೂ ಮುನ್ನ ವಿಡಿಯೋ ರೆಕಾರ್ಡ್

ನೂರಾರು ಶವ ಹೂತಿದ್ದೇನೆ. ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ ಚಿನ್ನಯ್ಯ, ಬುರುಡೆ ಬಿಟ್ಟಿದ್ದ. ಆದರೆ ಈಗ ಈ ಬುರುಡೆ ಎಲ್ಲಿಂದ ಬಂತು ಎಂಬ ಸ್ಫೋಟಕ ವಿಚಾರ ಗೊತ್ತಾಗಿದೆ. ಜಯಂತ್ ಮನೆಯಲ್ಲೇ ಚಿನ್ನಯ್ಯನ ಹೇಳಿಕೆಯನ್ನು ಮೊದಲು ವಿಡಿಯೋ ಮಾಡಲಾಗಿತ್ತಂತೆ. ವಿಡಿಯೋ ಹೇಳಿಕೆ ಪಡೆದು, ನಂತರ ಅದನ್ನ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಜಯಂತ್ ಡಿಲೀಟ್ ಮಾಡಿದ್ದ ಎನ್ನಲಾಗಿದೆ. ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್ ನಡೆದಿತ್ತು ಎನ್ನಲಾಗಿದೆ. ಈ ವಿಡಿಯೋಗಾಗಿ ಪೊಲೀಸರು ವಶಪಡಿಸಿಕೊಂಡಿರುವ ಫೋನ್‌ಗಳನ್ನ ರಿಟ್ರೀವ್ ಮಾಡುತ್ತಿದ್ದಾರೆ.

ಬುರುಡೆ ರಹಸ್ಯ ಬಾಯ್ಬಿಟ್ಟ ಚಿನ್ನಯ್ಯ

ಎಸ್ಐಟಿ ಮುಂದೆ ಸ್ಫೋಟಕ ವಿಚಾರ ಬಾಯ್ಬಿಟ್ಟಿರುವ ಚಿನ್ನಯ್ಯ, ಬುರುಡೆ ರಹಸ್ಯ ಹೇಳಿದ್ದಾನೆ. ಸ್ಯಾಟಲೈಟ್‌ ಬಸ್ ನಿಲ್ದಾಣದಿಂದ ಬಾಗಲುಗುಂಟೆ ಜಯಂತ್ ನಿವಾಸಕ್ಕೆ ನಾವೆಲ್ಲರು ಬಂದಿದ್ದೆವು. ಮೂರು ದಿನ ಜಯಂತ್ ಮನೆಯಲ್ಲೇ ಇದ್ದೆವು. ಮನೆಯ ಟೆರೇಸ್ ಮೇಲೆ ಕುಳಿತು ಚರ್ಚೆ ಮಾಡಿದ್ದೆವು. ಇದೇ ವಳೆ ಜಯಂತ್ ನನಗೆ ಬುರುಡೆ ಮತ್ತು ಮೂಳೆ ಕೊಟ್ಟಿದ್ದರು. ಜಯಂತ್ ಮನೆಯಲ್ಲೇ ಮೊದಲು ಬುರುಡೆ, ಮೂಳೆ ನೋಡಿದ್ದು ಎಂದು ಮೊದಲು ಬುರುಡೆ ತಗೆದುಕೊಂಡ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಎಸ್ಐಟಿ ಬೆಂಗಳೂರಿಗೆ ಕರೆತಂದು ಜಯಂತ್ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಜಯಂತ್ ಮನೆಯ ಬಳಿಕ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಗ್ಯಾಂಗ್ ಶಿಫ್ಟ್ ಆಗಿತ್ತು. ವಿದ್ಯಾರಣ್ಯಪುರದ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಹೋದೆವು, ‘ಆಪಾರ್ಟ್‌ಮೆಂಟ್‌ನಲ್ಲಿ ಮಟ್ಟಣ್ಣನವರ್, ಜಯಂತ್ ಹಲವರು ಸೇರಿದ್ವಿ ಅಂತಾ ಚಿನ್ನಯ್ಯ ಹೇಳಿದ್ದಾನೆ. ‘ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಕೋರ್ಟ್‌ನಲ್ಲಿ ತಾನೇ ಬುರುಡೆ ತಂದಿದ್ದು ಎಂದು ಕೋರ್ಟ್‌ನಲ್ಲಿ ಹೇಳಿದ್ದಾಗಿ ಚಿನ್ನಯ್ಯ ಎಸ್ಐಟಿ ಮುಂದೆ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.

2 ವರ್ಷದ ಹಿಂದೆಯೇ ನಡೆದಿತ್ತಾ ಬುರುಡೆ ಸಂಚು? ಧರ್ಮಸ್ಥಳ ಸುತ್ತಮುತ್ತ ಬುರುಡೆ ಗ್ಯಾಂಗ್‌ನಿಂದ ಟ್ರಯಲ್?

ಬುರುಡೆಯನ್ನ ಚಿನ್ನಯ್ಯನಿಗೆ ನೀಡುವ ಮುನ್ನ ಬುರುಡೆ ಗ್ಯಾಂಗ್ ರಿಹರ್ಸಲ್ ನಡೆಸಿರುವ ಬಗ್ಗೆಯೂ ತಿಳಿದುಬಂದಿದೆ. ಬಂಗ್ಲೆಗುಡ್ಡ, ನೆತ್ರಾವತಿ ತಟದಲ್ಲಿ ಚಿನ್ಯಯ್ಯ ಆ್ಯಂಡ್ ಗ್ಯಾಂಗ್ ರಿಹರ್ಸಲ್ ಮಾಡಿ, ಬ್ಲೂಪ್ರಿಂಟ್ ಹಾಕಿತ್ತು ಎಂಬುದು ಬಯಲಾಗಿದೆ.

ಬುರುಡೆ ಗ್ಯಾಂಗ್ ಬ್ಲೂಪ್ರಿಂಟ್!

ನೇತ್ರಾವತಿ ನದಿ ತೀರ ಮತ್ತು ಬಂಗ್ಲೆಗುಡ್ಡದಲ್ಲಿ ಕಾಡು ಸುತ್ತಿದ್ದ ಬುರುಡೆ ಗ್ಯಾಂಗ್ 30 ಜಾಗಗಳನ್ನು ಗುರುತು ಮಾಡಿ ನಕ್ಷೆ ರೆಡಿ ಮಾಡಿತ್ತು ಎನ್ನಲಾಗಿದೆ. ಚಿನ್ನಯ್ಯ ಶವ ಹೂಳದೇ ಇದ್ದ ಜಾಗಗಳನ್ನು ಗುರುತು ಮಾಡಿದ್ದ ಬುರುಡೆ ಪಡೆ, ಕನ್ಯಾಡಿ, ಬೋಳಿಯಾರು ಭಾಗದಲ್ಲಿ ‘ಬುರುಡೆ’ ಕಥೆ ಸೃಷ್ಟಿಸಲು ಕನ್ಯಾಡಿ, ಬೋಳಿಯಾರುನಲ್ಲೂ ಗುರುತು ಮಾಡಿತ್ತು. ಪ್ರತಿ ದಿನ ಶೋಧ ಕಾರ್ಯಾಚರಣೆ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚರ್ಚೆ ನಡೆಸಿದ್ದರು. ಸಿದ್ಧಪಡಿಸಲಾದ ನಕ್ಷೆ ಹಿಡಿದು ಚರ್ಚೆ ಮಾಡುವಾಗ,ಪ್ರತಿ ಬಾರಿಯೂ ನಾನು ಶವ ಹೂತಿದ್ದು ಪಕ್ಕಾ ಎಂದೇ ಚಿನ್ನಯ್ಯ ಹೇಳುತ್ತಿದ್ದ. ಆದರೆ, ಚಿನ್ನಯ್ಯನ ಲೆಕ್ಕಾಚಾರ ಉಲ್ಟಾ ಹೊಡೆದಾಗ ಗ್ಯಾಂಗ್ ತಲ್ಲಣಗೊಂಡಿದೆ.


Spread the love

About Laxminews 24x7

Check Also

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ,ಸುಳಗಾ ಗ್ರಾಮದ ಸಾರ್ವಜನಿಕ ಗಣಪತಿ ದರ್ಶನ್ ಪಡೆದುಕೊಂಡ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

Spread the love ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ,ಸುಳಗಾ ಗ್ರಾಮದ ಸಾರ್ವಜನಿಕ ಗಣಪತಿ ದರ್ಶನ್ ಪಡೆದುಕೊಂಡ ಎಐಸಿಸಿ ಕಾರ್ಯದರ್ಶಿ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ