ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ,ಸುಳಗಾ ಗ್ರಾಮದ ಸಾರ್ವಜನಿಕ ಗಣಪತಿ ದರ್ಶನ್ ಪಡೆದುಕೊಂಡ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್
-ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿ ಬೆನಕನಹಳ್ಳಿ ಗ್ರಾಮದ ಧರ್ಮವೀರ ಸಂಭಾಜಿ ಗಣೇಶೋತ್ಸವ ಮಂಡಳಿಯ ಶ್ರೀ ಗಣೇಶನ ದರ್ಶನ್ ಪಡೆದುಕೊಂಡು ಆರತಿ ನೇರವೇರಿಸಿದರು
ಈ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮದ ನಾರಾಯಣ ಕಾಲಕುಂದ್ರಿ, ಸುರೇಶ್ ರಾಜೂರ್ಕರ್, ಸುನೀಲ್ ಬುವಾನ್ ಸೇರಿದಂತೆ ಆರ್.ಎಂ.ಚೌಗಲೆ ಮಂಡಳದ ಪದಾಧಿಕಾರಿಗಳು, ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು
ತದನಂತರದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಸುಳಗಾ ಗ್ರಾಮದ ಅಂಜಲಿ ನಿಂಬಾಳ್ಕರ್ ಅವರ ಅಭಿಮಾನಿಗಳ ಮನೆಗೆ ಹೋಗಿ ಅವರನ್ನು ಭೇಟಿಯಾದರು
ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು ಎಐಸಿಸಿ ಕಾರ್ಯದರ್ಶಿ ಖಾನಾಪೂರದ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಗ್ರಾಮಿಣ ಕ್ಷೇತ್ರ ದಲ್ಲಿ ಪಾದಾರ್ಪಣೆ ಮಾಡಿದ್ದು ವಿಶೇಷವಾಗಿದೆ.