ಯಳ್ಳೂರು ಐತಿಹಾಸಿಕ ಗ್ರಾಮ…ಸ್ವಾತಂತ್ರ್ಯಪೂರ್ವದಿಂದಲೂ ಇಲ್ಲಿ ನಡೆದಿದೆ ಶಿಕ್ಷಣ ಕ್ರಾಂತಿ; ಮಹಾ ಮಾಜಿ ಸಿಎಂ ಶರದ್’ಚಂದ್ರ ಪವಾರ್
ಯಳ್ಳೂರ ಗ್ರಾಮದ ಸರ್ಕಾರಿ ಮರಾಠಿ ಮಾದರಿ ಶಾಲೆಯ 150ನೇ ವಾರ್ಷಿಕೋತ್ಸವ
ಯಳ್ಳೂರ ಗ್ರಾಮವು ಇತಿಹಾಸವನ್ನು ನಿರ್ಮಿಸುವ ಗ್ರಾಮವಾಗಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕಾಗಿ ಒತ್ತು ನೀಡಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಶರದ್’ಚಂದ್ರಜೀ ಪವಾರ್ ಹೇಳಿದರು.
ಇಂದು ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಸರ್ಕಾರಿ ಮರಾಠಿ ಮಾದರಿ ಶಾಲೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ವೇದಿಕೆ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪೂರದ ಶಾಸಕರಾದ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯದಾರ ಚನ್ನರಾಜ್ ಹಟ್ಟಿಹೊಳಿ, ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಮಾಜಿ ಶಾಸಕರಾದ ಅರವಿಂದ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಸಿಎಂ ಶರದ್’ಚಂದ್ರಜೀ ಪವಾರ್ ಅವರು 150 ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸೇವೆಯನ್ನು ನೀಡುವುದು ಸಾಮಾನ್ಯ ಕಾರ್ಯವಲ್ಲ. ಇಲ್ಲಿ ಕಲಿತ ಮಕ್ಕಳ ದೇಶ ವಿದೇಶದಲ್ಲಿ ಬೆಳಗಾವಿಯ ಯಳ್ಳೂರಿನ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಇದಕ್ಕಾಗಿ ಇಲ್ಲಿನ ಶಿಕ್ಷಕರು ಪಟ್ಟ ಶ್ರಮ ಅಮೂಲ್ಯವಾಗಿದೆ. ಛತ್ರಪತಿ ಶಿವಾಜೀ ಮಹಾರಾಜರು ನಿರ್ಮಿಸಿದ್ದು, ರೈತರ ರಾಜ್ಯವನ್ನ, ಹಿಂದವಿ ಸ್ವರಾಜ್ಯವನ್ನು.
ಅಲ್ಲಿ ಎಲ್ಲರಿಗೂ ಸರಿಸಮಾನ ಹಕ್ಕನ್ನು ನೀಡಲಾಯಿತು. ಅವರ ಪ್ರೇರಣೆಯನ್ನು ಪಡೆದು, ಎಲ್ಲರಿಗೂ ಶಿಕ್ಷಣವನ್ನು ಪಡೆಯಲು ಸರಿಸಮಾನ ಹಕ್ಕನ್ನು ನೀಡಬೇಕು ಎಂದರು. ಯಳ್ಳೂರು ಹೋರಾಟಗಾರರ ಭೂಮಿ. ಸ್ವಾತಂತ್ರ್ಯಪೂರ್ವದಿಂದಲೂ ಇಲ್ಲಿ ಶಿಕ್ಷಣದ ಕ್ರಾಂತಿ ನಿರಂತರವಾಗಿದೆ. ಅಂದು ಅಕ್ಷರದವ್ವ ಸಾವಿತ್ರಿಬಾಯಿ ಫೂಲೆ ಅವರು ಪಟ್ಟ ಕಷ್ಟದಿಂದಲೇ ಇಂದು ಇಲ್ಲಿ ಮಹಿಳಾ ಶಿಕ್ಷಕಿಯರು ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದರು.
ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗ್ರಾಮೀಣ ಭಾಗದ ಪ್ರತಿಯೊಬ್ಬರ ಮನದಲ್ಲಿ ಬಾರಾಮತಿಯನ್ನು ನಿರ್ಮಿಸಲಾಗಿದೆ. ನಮ್ಮೆಲ್ಲರ ಪ್ರೇರಣಾಸ್ಥಾನವಾದ ಛತ್ರಪತಿ ಶಿವಾಜೀ ಮಹಾರಾಜ್ ಇಂದಿನ ದಿನಗಳಲ್ಲಿ 1-2 ವರ್ಷ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಸಂಗತಿ.
ಆದರೇ 150 ವರ್ಷ ಯೆಳ್ಳೂರಿನಲ್ಲಿ ಶಿಕ್ಷಣದ ಜ್ಯೋತಿಯನ್ನು ಸತತವಾಗಿ ಬೆಳಗಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಈ ಶಾಲೆಯಲ್ಲಿ ಕಲಿತ ಮಕ್ಕಳು ದೇಶ-ವಿದೇಶದಲ್ಲಿ ಸೇವೆ ಸಲ್ಲಿಸಿ ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಅಲ್ಲದೇ, ಪಕ್ಷದ ಭೇದ ಮರೆತು ಬೆಳಗಾವಿಯ ಅಭಿವೃದ್ಧಿಗಾಗಿ ಸದಾ ಸಿದ್ಧರಾಗಿರುವುದಾಗಿ ತಿಳಿಸಿದರು. ನಂತರ ಈ ಶಾಲೆಯಲ್ಲಿ ಕಲಿತ ಹಳೆದ ಹಿರಿಯ ವಿದ್ಯಾರ್ಥಿಗಳನ್ನು ಗಣ್ಯರು ಸತ್ಕರಿಸಿದರು.
ಈ ಸಂದರ್ಭದಲ್ಲಿ ರಾವಜಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ವಾಗತಾಧ್ಯಕ್ಷರಾಗಿ ಎನ್.ಡಿ. ಗೋರೆ ಮತ್ತು ಗೌರವಾಧ್ಯಕ್ಷರಾಗಿ ಸತೀಶ್ ಪಾಟೀಲ್ ಉಪಸ್ಥಿತದ್ಥರಿದ್ಧರು. ಅತಿಥಿಗಳಾಗಿ ಪ್ರಕಾಶ ಮರಗಾಳೆ, ರಮಾಕಾಂತ್ ಕೊಂಡೂಸ್ಕರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.