ವಿಜಯನಗರ : ಬಸ್ ಪ್ರಯಾಣದ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಆಭರಣ ಕಳ್ಳತನ ಮಾಡಿದ ಆರೋಪದ ಹಿನ್ನೆಲೆ ಸಾರಿಗೆ ಬಸ್‌ನಲ್ಲಿ ಭಾರಿ ಹೈಡ್ರಾಮ ನಡೆಯಿತು. 80 ಪ್ರಯಾಣಿಕರಿದ್ದ ಸಾರಿಗೆ ಬಸ್ ಅನ್ನು ಚಾಲಕ ಮತ್ತು ನಿರ್ವಾಹಕ ಪೊಲೀಸ್ ಠಾಣೆಗೆ ತಂದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಮೂಲದ ಅಂಬಮ್ಮ ಎನ್ನುವ ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮುನಿರಾಬಾದ್‌ನಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿಕೊಂಡಾಗ 90 ಗ್ರಾಂ ಬಂಗಾರ ಕಳ್ಳತನ ಆಗಿರೋದು ಗಮನಕ್ಕೆ ಬಂದಿದೆ.ಕೂಡಲೇ ಬಸ್ ನಿಲ್ಲಿಸಿ’ ಎಂದು ಬಂಗಾರ ಕಳ್ಳತನವಾದ ಮಹಿಳೆ ಅಂಬಮ್ಮ ಹಾಗೂ ಮಗಳು ಕೂಗಾಡಿದ್ದಾರೆ. ಮಹಿಳೆ ರಾದ್ಧಾಂತ ಹಿನ್ನೆಲೆ 80 ಜನ ಪ್ರಯಾಣಿಕರ ಸಮೇತ ಸಾರಿಗೆ ಬಸ್ ಅನ್ನು ಚಾಲಕ ಮತ್ತು ನಿರ್ವಾಹಕ ಹೊಸಪೇಟೆ ನಗರ ಠಾಣೆಗೆ ತಂದಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PI ಲಖನ್ ಮಸುಗುಪ್ಪಿ ನೇತೃತ್ವದಲ್ಲಿ ಬಸ್‌ನಲ್ಲಿದ್ದ 80 ಜನ ಪ್ರಯಾಣಿಕರನ್ನ ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ ತಪಾಸಣೆ ನಡೆಸಿದರೂ ಚಿನ್ನಾಭರಣ ಪತ್ತೆಯಾಗಿಲ್ಲ. ಘಟನೆ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7