Breaking News
Home / ಜಿಲ್ಲೆ / ಹೆಚ್​ಎಎಲ್ ಪೊಲೀಸರು ಸಂತೋಷ್ ಸೇರಿ 9 ಜನರನ್ನು ಬಂಧನ ಮಾಡಿದ್ದಾರೆ.

ಹೆಚ್​ಎಎಲ್ ಪೊಲೀಸರು ಸಂತೋಷ್ ಸೇರಿ 9 ಜನರನ್ನು ಬಂಧನ ಮಾಡಿದ್ದಾರೆ.

Spread the love

ಬೆಂಗಳೂರು; ಕಳ್ಳತನ ಮಾಡಿದ್ದ ಹಣವನ್ನು ಹಂಚಿಕೊಳ್ಳೋ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜೆ.ಪಿ. ನಗರದ ರೌಡಿಶೀಟರ್ ಆಗಿದ್ದ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಂತೋಷ್ ಆ್ಯಂಡ್ ಟೀಂನಿಂದ ಈ ಕೊಲೆ ನಡೆದಿದ್ದು, ಸದ್ಯ ಹೆಚ್​ಎಎಲ್ ಪೊಲೀಸರು ಸಂತೋಷ್ ಸೇರಿ 9 ಜನರನ್ನು ಬಂಧನ ಮಾಡಿದ್ದಾರೆ.

ಜೂನ್ 6ರಂದು ಸಂತೋಷ್ ಆ್ಯಂಡ್ ಟೀಂನಿಂದ ಪಾಗಲ್ ಶ್ರೀನಿವಾಸ್ ಕೊಲೆ ಮಾಡಲಾಗಿತ್ತು. ಇನ್ನು ಪಾಗಲ್ ಸೀನ ಹಾಗೂ ಸಂತೋಷ್ ಇಬ್ಬರು ಸ್ನೇಹಿತರು ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸೇರಿ ಸಾಕಷ್ಟು ಮನೆಗಳ್ಳತನ ಮಾಡುತ್ತಿದ್ದರು. ಮನೆ ದೋಚಿದ ಬಳಿಕ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದರು. ನಂತರ ಕದ್ದ ಮಾಲನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಕೊಪ್ಪಳಕ್ಕೂ ಲಿಂಕಾಯ್ತೇ ಬಳ್ಳಾರಿಯ ಜಿಂದಾಲ್ ಸೋಂಕು?; ಜಿಲ್ಲೆಯಲ್ಲಿ ಮತ್ತೆ ಆವರಿಸಿದ ಭಯ

ಆದರೆ, ಇತ್ತೀಚೆಗೆ ಕಳ್ಳತನ ಮಾಡಿದ್ದ ಕೆಲವು ಪ್ರಕರಣಗಳ ಮಾಲನ್ನು ಹಂಚಿಕೊಳ್ಳುವಾಗ ಇಬ್ಬರಿಗೂ ಜಗಳ ಶುರುವಾಗಿದೆ. ನಂತರ ಒಬ್ಬರು ಹೊಡೆದಾಡಿಕೊಂಡು ದೂರವಾಗಿದ್ದರು. ನಂತರ ಇಬ್ಬರೂ ಜೊತೆಗೂಡಿ ಕಳ್ಳತನ ಮಾಡೋದು ಸಹ ನಿಲ್ಲಿಸಿದ್ದರು. ಆದರೆ ಪಾಗಲ್ ಸೀನ ಮಾತ್ರ ಬಳ್ಳಾರಿ ಶಿವ ಅನ್ನೋ ರೌಡಿ ಜೊತೆಗೂಡಿ ಕಳ್ಳತನ ಮಾಡಲು ಶುರು ಮಾಡಿದ್ದ. ಈ ಬಳ್ಳಾರಿ ಶಿವನಿಗೂ ಹಾಗೂ ಕೊಲೆ ಮಾಡಿದ್ದ ಸಂತೋಷ್​ಗೂ ಅಷ್ಟಕ್ಕಷ್ಟೆ. ಇನ್ನು ಇದನ್ನೇ ಮನಸಲ್ಲಿ ಇಟ್ಟುಕೊಂಡಿದ್ದ ಸಂತೋಷ ಏನಾದರೂ ಮಾಡಿ ಪಾಗಲ್ ಸೀನನಿಗೆ ಒಂದು ಗತಿ ಕಾಣಿಸಬೇಕು ಅಂತ ಪ್ಲಾನ್ ಮಾಡಿದ್ದ.

ಅದರಂತೆ, ತನ್ನ ಸಹಚರರ ಜೊತೆ ಪ್ಲಾನ್ ಮಾಡಿ, ಹೆಚ್​ಎಎಲ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಪಾಗಲ್ ಸೀನ ಇರೋದನ್ನ ಗಮನಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಎಲ್ಲಾ ಆರೋಪಿಗಳು ಎಸ್ಕೇಪ್ ಆಗಿದ್ದು, ಹೆಚ್ ಎ ಎಲ್ ಪೊಲೀಸರು ಹುಡುಕಾಡುತ್ತಿದ್ದರು. ಆದರೆ, ಕೊನೆಗೆ ಆರೋಪಿಗಳು ಬಳಸುತ್ತಿದ್ದ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಬಂದಿಸಿದ್ದಾರೆ. ಸದ್ಯ ಈಗ 9 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ