ಮೈಸೂರು: ನಮಗೆ ಸದ್ಯದಮಟ್ಟಿಗೆ ದೇವರೇ ಗತಿ…..ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರಬರುತ್ತೇನೆ ಎಂದು ಶಾಸಕ ಹೆಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ನನಗೆ ದೇವರು ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ.
ನಮಗೆ ನ್ಯಾಯ ಸಿಗಲಿದೆ ಎಂದರು.
ಇನ್ನು ಮಗ ಪ್ರಜ್ವಲ್ ನನ್ನು ನೋಡಲು ಜೈಲಿಗೆ ಹೋಗುವುದಿಲ್ಲ. ಒಂದುವೇಳೆ ಹೋದರೆ ಏನೋ ಹೇಳಿಕೊಡಲು ಹೋಗಿದ್ದಾನೆ ಎನ್ನುತ್ತಾರೆ. ನಮ್ಮ ಕುಟುಂಬದ ವಿರುದ್ಧ ಹಾಕಿರುವ ಕೇಸ್ ಗಳು ತನಿಖಾ ಹಂತದಲ್ಲಿ ಹಾಗಾಗಿ ಈ ಬಗ್ಗೆ ಏನೂ ಮಾತನಾಡಲ್ಲ ಎಂದರು.