ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಆಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.ಕಿನೋ ಟಾಕೀಸ್ ಬಳಿ ಅಂಡರ್ ಪಾಸ್ ನಲ್ಲಿ ಬಿಎಂಟಿಸಿ ಬಸ್ ಮುಳುಗಡೆಯಾಗಿ ಪ್ರಯಾಣಿಕರು ಪ್ರಾಣಭಯದಲ್ಲಿ ಇದ್ದರು ಇವಳೇ ಸ್ಥಳದಲ್ಲಿದ್ದ ಜನರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವೇಸ್ತವಾಗಿದ್ದು, ಕಿನೋ ಟಾಕೀಸ್ ಬಳಿ ಅಂಡರ್ ಪಾಸ್ ನಲ್ಲಿ BMTC ಬಸ್ ಸಿಲುಕಿ ಮುಳುಗಡೆಯಾಗಿದೆ. ನೆಲಮಂಗಲದಿಂದ ಮೆಜೆಸ್ಟಿಕ್ ಗೆ ಬರುತ್ತಿದ್ದ ಬಸ್ ಇದೀಗ ಸಂಪೂರ್ಣ ಮುಳುಗಡೆಯಾಗಿತ್ತು. ಈ ವೇಳೆ ಸ್ಥಳೀಯರ ನೆರವಿನಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ.