Breaking News

ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ

Spread the love

ಚಿಕ್ಕಮಗಳೂರು: ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ರಾತ್ರಿ 50 ಮಂದಿಯ ಮೇಲೆ ದೂರು ದಾಖಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಾಗದ ವಿಚಾರಕ್ಕೆ ಇಡೀ ಗ್ರಾಮವೇ ರಣರಂಗವಾದಂತಾಗಿದೆ.

Chikkamagaluru: ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ

ಸರ್ಕಾರಿ ಜಾಗದಲ್ಲಿ ದೇವಾಲಯ ಕಟ್ಟಲು ಲಂಬಾಣಿ ಜನಾಂಗದವರು ಜಾಗಕ್ಕೆ ತಂತಿ ಬೇಲಿ ಹಾಕಿದ್ದರು. ಇದನ್ನು ವಿರೋಧಿಸಿ ಸಮುದಾಯ ಭವನ ಕಟ್ಟಲು ಇನ್ನೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ಗಲಾಟೆ ನಡುವೆಯೇ ಗ್ರಾಮದ ಕೆಲವರು ತಂತಿ ಬೇಲಿ ಕಿತ್ತು ಬಿಸಾಕಿದ್ದರು. ಹೀಗೆ ಎರಡೂ ಸಮುದಾಯದವರ ನಡುವೆ ಗಲಾಟೆ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ