Breaking News

ಬಾಕ್ಸ್​ ಆಫೀಸ್​ನಲ್ಲಿ Gadar 2 vs OMG 2 ಫೈಟ್​: 7ನೇ ದಿನದ ಕಲೆಕ್ಷನ್​ ಎಷ್ಟು?

Spread the love

Gadar 2 vs OMG 2- Collection Day 7: ಬಿಡುಗಡೆಯಾದ ಏಳನೇ ದಿನದಂದು ಗದರ್​ 2 ಮತ್ತು ಓಎಂಜಿ 2 ಸಿನಿಮಾಗಳು ಗಳಿಸಿದೆಷ್ಟು?

ಆಗಸ್ಟ್​ 11ರಂದು ಬಿಡುಗಡೆಯಾದ ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿವೆ. ಸೂಪರ್​ಸ್ಟಾರ್​ ಸನ್ನಿ ಡಿಯೋಲ್​ ಅಭಿನಯದ ಗದರ್​ 2 ಮತ್ತು ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ನಟನೆಯ ಓಎಂಜಿ 2 ಸಿನಿಮಾಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದೆ.

ವಾರದ ದಿನಗಳಲ್ಲಿಯೂ ಸಿನಿ ಪ್ರೇಮಿಗಳನ್ನು ಥಿಯೇಟರ್​ಗೆ ಸೆಳೆಯುವಲ್ಲಿ ಈ ಚಿತ್ರಗಳು ಯಶಸ್ವಿಯಾಗಿದೆ.

ಗದರ್ 2 vs ಓಎಂಜಿ 2: ಕಳೆದ ಶುಕ್ರವಾರ ಅಕ್ಷಯ್​​ ಕುಮಾರ್​ ಮತ್ತು ಸನ್ನಿ ಡಿಯೋಲ್​​ ಮುಖ್ಯಭೂಮಿಕೆಯ ಓಎಂಜಿ 2 ಮತ್ತು ಗದರ್​ 2 ಚಿತ್ರಗಳು ತೆರೆಕಂಡಿವೆ. ಇವರೆಡೂ ಕೂಡ ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್ಸ್. ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​​ ನಟನೆಯ ಗದರ್​ 2 ಮೇಲೆ ಭಾರಿ ನಿರೀಕ್ಷೆ ಹೊಂದಲಾಗಿತ್ತು. 20 ವರ್ಷಗಳ ಬಳಿಕ ಬಂದ ಸೀಕ್ವೆಲ್‌ಗೆ ವಿಮರ್ಶಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ನು, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಸಿನಿಮಾ ಕಥೆಗೂ ವಿಮರ್ಷಕರು, ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಲೆಕ್ಷನ್​ ಅಂಕಿ ಅಂಶ ಉತ್ತಮವಾಗಿದೆ.

 

ಗದರ್ 2 ಬಾಕ್ಸ್ ಆಫೀಸ್​ ಕಲೆಕ್ಷನ್​: ಅನಿಲ್​ ಶರ್ಮಾ ನಿರ್ದೇಶನದ ಗದರ್​ 2 ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆಗೆ ಸಾಟಿ ಮತ್ತೊಂದಿಲ್ಲ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಗದರ್​ 2 ಬಿಡುಗಡೆಯಾದ ಏಳನೇ ದಿನದಂದು 22 ಕೋಟಿ ರೂಪಾಯಿ ಗಳಿಸಿದೆ. ಜೈಲರ್​ಗಿಂತಲೂ ಉತ್ತಮ ಮಟ್ಟದಲ್ಲಿ ಕಲೆಕ್ಷನ್​ ಮಾಡಿದೆ. ಈ ಮೂಲಕ ಗದರ್​ 2ನ ಒಟ್ಟು ದೇಶೀಯ ಗಳಿಕೆ 283.35 ಕೋಟಿ ರೂಪಾಯಿ ತಲುಪಿದೆ. ಶುಕ್ರವಾರವಾದ ಇಂದು ಸರಿಸುಮಾರು 17 ಕೋಟಿ ರೂ. ಗಳಿಸಲಿದೆ ಎನ್ನಲಾಗಿದೆ. ಈ ಮೂಲಕ ಎಂಟನೇ ದಿನ 300 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಓಎಂಜಿ 2 ಕಲೆಕ್ಷನ್​: ಅಕ್ಷಯ್​ ಕುಮಾರ್​ ನಟನೆಯ ಓ ಮೈ ಗಾಡ್​ ಸಿನಿಮಾ ಕೂಡ ಬಹು ನಿರೀಕ್ಷೆಗಳೊಂದಿಗೆ ತೆರೆ ಕಂಡಿತು. ಈ ಸಿನಿಮಾ ತಕ್ಕಮಟ್ಟಿಗೆ ಪ್ರದರ್ಶನ ಕಾಣುತ್ತಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಏಳನೇ ದಿನ 5.25 ಕೋಟಿ ಗಳಿಸಿದೆ. ಈ ಮೂಲಕ ಚಿತ್ರವು ಭಾರತದಲ್ಲಿ ಒಟ್ಟು 84.75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ವಿಶ್ವದಾದ್ಯಂತ ಪ್ರಸ್ತುತ ಗಳಿಕೆಯು 111.8 ಕೋಟಿ ರೂ. ಆಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 18 ಕೋಟಿ ರೂ. ಕಲೆಕ್ಷನ್​ ಮಾಡಿದೆ


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡ ಕ್ಷಣಗಳು.

Spread the love ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ