Home / ರಾಜಕೀಯ / ಈಜಲು ಹೋದ ಇಬ್ಬರು ಬಾಲಕರು ಭೀಮಾ ನದಿ‌ಯಲ್ಲಿ ಮುಳುಗಿ ಸಾವು

ಈಜಲು ಹೋದ ಇಬ್ಬರು ಬಾಲಕರು ಭೀಮಾ ನದಿ‌ಯಲ್ಲಿ ಮುಳುಗಿ ಸಾವು

Spread the love

ಕಲಬುರಗಿ: ಈಜಲು‌ ಹೋದ‌ ಬಾಲಕರಿಬ್ಬರು ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ‌ ಘಟನೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

ಶನಿವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿರುವ ಭೀಮಾ ನದಿಗೆ ಈಜಲು ಬಾಲಕರಿಬ್ಬರು ತೆರಳಿದ್ದರು. ಆದರೆ ಕಾಲು ಜಾರಿ ಓರ್ವ ನೀರು ಪಾಲಾಗುವಾಗ ಇನ್ನೋರ್ವನನ್ನು ರಕ್ಷಣೆಗೆ ಇಳಿದಿದ್ದ. ಆತನೂ ಕೂಡ ಮೃತಪಟ್ಟಿದ್ದಾನೆ.

ದೇವಿಂದ್ರ ಹೊಸಮನಿ (17) ಹಾಗೂ ರಾಮು ದೊಡ್ಡಮನಿ(13) ಮೃತ ದುರ್ದೈವಿಗಳು. ನೀರಲ್ಲಿ‌ ಮುಳುಗಿ ಸಾವನ್ನಪ್ಪಿದ ವಿಷಯವನ್ನು ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಮೃತ ದೇಹಗಳನ್ನು‌ ನೀರಿನಿಂದ ಹೊರಗೆ‌ ತೆಗೆದಿದ್ದಾರೆ. ಮೃತ ದೇಹಗಳನ್ನು ಹೊರ ತರುತ್ತಿದ್ದಂತೆ ಬಾಲಕರು ಕುಟುಂಬಸ್ಥರ ಅಕ್ರಂದನ‌ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಂಬನಿ ಮಿಡಿದರು. ಈ‌ ಕುರಿತು ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈನ್​ ಮ್ಯಾನ್ ಸಾವು, ಜೆಸ್ಕಾಂ ಶಾಖಾಧಿಕಾರಿ ತಲೆದಂಡ: ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್​ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಅಫಜಲಪುರ ತಾಲೂಕಿನ ಬಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಸಂತೋಷ ಗುಜ್ಜಾ(29) ಮೃತ ದುರ್ದೈವಿ. ಇವರು ಚವಡಾಪುರ ಜೆಸ್ಕಾಂ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಬಟಗೇರಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಟಿಸಿ ಕಂಬದಲ್ಲಿ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದುರ್ಘಟನೆ ನಡೆದ ತಕ್ಷಣ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಚವಡಾಪುರ ರಾಜ್ಯ ಹೆದ್ದಾರಿ ತಡೆದು ಟೈರ್​ಗೆ ಬೆಂಕಿ ಹಚ್ಚಿ ಸುಮಾರು 3 ಗಂಟೆಗೂ ಅಧಿಕ ಕಾಲ ಪ್ರತಿಭಟಿಸಿದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ