Breaking News

Daily Archives: ಅಕ್ಟೋಬರ್ 5, 2025

ಸಿಎಂ ಭೇಟಿಯಾದ ಐಫೋನ್ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿಯ ಭಾರತದ ಮುಖ್ಯಸ್ಥ: ಹೂಡಿಕೆ ಬಗ್ಗೆ ಚರ್ಚೆ

ಬೆಂಗಳೂರು: ಐಫೋನ್‌ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್‌ ವೂ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಐಫೋನ್ ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್‌ನ ರಾಬರ್ಟ್‌ ವೂ ಅವರು ಸಿಎಂ ಜೊತೆಗಿನ ಭೇಟಿಯ ವೇಳೆ, ರಾಜ್ಯದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಸೇರಿದಂತೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು. ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಫಾಕ್ಸ್‌ಕಾನ್‌ ಕಂಪನಿಯು ದೇವನಹಳ್ಳಿಯ …

Read More »

ಸಿನಿಮಾ ಟಿಕೆಟ್ ಸಿಗದೆ ಈಜಲು ಕಾಲುವೆಗಿಳಿದ ಇಬ್ಬರು ಯುವಕರು ನೀರುಪಾಲು

ರಾಯಚೂರು: ಸಿನಿಮಾ ನೋಡಲು ಹೋಗಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ನಿವಾಸಿಗಳಾದ ಯಲ್ಲಾಲಿಂಗ (28), ವೆಂಕಟೇಶ ಮೋಚಿ (30) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಮಸ್ಕಿ ಪಟ್ಟಣದ ಬಳಗಾನೂರು ರಸ್ತೆಗೆ ಬರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಈ ಇಬ್ಬರು ಈಜಲು ತೆರಳಿದ್ದರು. ಮುದಗಲ್ ಪಟ್ಟಣದ ನಾಲ್ವರು ಸ್ನೇಹಿತರು ಶನಿವಾರ ಮಸ್ಕಿ ಪಟ್ಟಣಕ್ಕೆ …

Read More »

ಧರ್ಮಸ್ಥಳದ ಅಪಪ್ರಚಾರ ವಿರುದ್ಧ ಒಗ್ಗಟ್ಟಿನ ಹೋರಾಟ ಅವಶ್ಯಕ: ವಿದಿತ ಮುನಿ ಮಹಾರಾಜ್​

ಹಾವೇರಿ: “ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಒಗ್ಗಟ್ಟಿನ ಹೋರಾಟದ ಅವಶ್ಯಕತೆ ಇದೆ” ಎಂದು 108 ಶ್ರೀ ವಿದಿತ ಮುನಿ ಮಹಾರಾಜ್​ ಹೇಳಿದರು. ಹಾವೇರಿಯ ಜೈನ ಬಸದಿಯಲ್ಲಿ ಇಂದು ನಡೆದ 7ನೇ ದೀಕ್ಷಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು. “ಭಾರತದಲ್ಲಿ ಎಲ್ಲಾ ವರ್ಗದ ಜನರಿದ್ದಾರೆ. ಹಿಂದೂ ಎಂದರೆ ಹಿಂಸೆಯಿಂದ ದೂರ ಉಳಿದವನು ಎಂದರ್ಥ. ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ನಮ್ಮ ಪೂರ್ವಜರಾದ ರಾಮ, …

Read More »

ಕೌಟುಂಬಿಕ ಕಲಹದಿಂದ ನೊಂದು ಪತ್ನಿ ಎದುರೇ ನದಿಗೆ ಹಾರಿದ ಪತಿ: 3 ದಿನಗಳ ಬಳಿಕ ಶವ ಪತ್ತೆ

ಚಾಮರಾಜನಗರ: ದಾಂಪತ್ಯ ಕಲಹ ವಿಕೋಪಕ್ಕೆ ತಿರುಗಿ ಪತ್ನಿ ಎದುರೇ ಪತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ಶುಕ್ರವಾರ ಸಂಜೆ ನಡೆದಿತ್ತು. ಮೂರು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಇಂದು (ಭಾನುವಾರ) ಮೃತದೇಹ ಸಿಕ್ಕಿದೆ. ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ಗ್ರಾಮದ ಮಂಜುನಾಥ್(40) ಮೃತಪಟ್ಟವರು. ಬೆಳಕವಾಡಿ ಹೊಸಳ್ಳಿ ಗ್ರಾಮದ ರಾಜೇಶ್ವರಿ ಎಂಬವರ ಜೊತೆ ಕಳೆದ 13 ವರ್ಷಗಳ ಹಿಂದೆ ಮಂಜುನಾಥ್ ಮದುವೆಯಾಗಿತ್ತು. ದಂಪತಿಗೆ …

Read More »

ನಾಳೆ ಚಿಂತಾಮಣಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್: ಬೃಹತ್ ವೇದಿಕೆ ನಿರ್ಮಾಣ, ಬಿಗಿ ಭದ್ರತೆ

ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್​​​​​​​ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರ ಪ್ರದೇಶ ಡಿಸಿಎಂ ಪವನ್​​​ ಕಲ್ಯಾಣ್ ನಾಳೆ ಜಿಲ್ಲೆಗೆ​​​ ಆಗಮಿಸುತ್ತಿದ್ದು, ಪೊಲೀಸ್​ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ​ ಮಾಡಿದೆ. ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರ ಸಮೀಪ ಕಾರ್ಯಕ್ರಮ ನಡೆಯಲಿದೆ. ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ …

Read More »

ಸಂಕೇಶ್ವರದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಬಾಯ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ಜರುಗಿತು.

ಸಂಕೇಶ್ವರದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಬಾಯ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ಜರುಗಿತು. ನಿಡಸೋಸಿಯ ಶ್ರೀ ಡಾ! ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಸಂಕೇಶ್ವರದ ಶಂಕರಲಿಂಗ ಮಠದ ಶ್ರೀ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಸ್ವಾಮೀಜಿಗಳು ವಿದ್ಯ ಸಾನಿದ್ಯವನ್ನು ವಹಿಸಿದರು. ಈ ವೇಳೆ ಕಾರ್ಖಾನೆ ಮಾರ್ಗದರ್ಶಕರಾದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ , ನಿಪ್ಪಾಣ್ಣಿ ಶಾಸಕಿ ಶಶಿಕಲಾ ಜೊಲ್ಲೆ, ಸೇರಿದಂತೆ ಮುಖಂಡರು ನಿರ್ದೇಶಕ ಮಂಡಳಿಯವರು ಹಾಜರಿದ್ದರು.

Read More »

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ಸ್ಪರ್ಧೆ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್’ನಿಂದ ಆಯೋಜನೆ ವಿಜೇತರಿಗೆ ಪ್ರಶಸ್ತಿ ವಿತರಣೆ ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಮಾರ್ಗದರ್ಶನ ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್ ವತಿಯಿಂದ ಬೆಳಗಾವಿ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ …

Read More »

ವಚನಕಾರ ಶ್ರೀ ಶಿವಶರಣ ನೂಲಿ ಚಂದಯ್ಯ ಅವರ ಜಯಂತಿ ಕಾರ್ಯಕ್ರಮ

ಇಂದು ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರ ಗ್ರಾಮದ ಶ್ರೀ ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕಾಯಕಯೋಗಿ, ವಚನಕಾರ ಶ್ರೀ ಶಿವಶರಣ ನೂಲಿ ಚಂದಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಾಯಿತು. ವಚನ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಸೇವಾ ಧೋರಣೆಯನ್ನು ಬಿತ್ತರಿಸಿದ ಕಾಯಕಯೋಗಿ ನೂಲಿ ಚಂದಯ್ಯ ಅವರು ಜನಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, “ಕಾಯಕವೇ ಕೈಲಾಸ” ಎಂಬ ಬಸವ ತತ್ತ್ವದ ಜೀವಂತ …

Read More »

ಬಸವ ಸಂಸ್ಕೃತಿ ಅಭಿಯಾನ: ಮೊಳಗಿದ ಪ್ರತ್ಯೇಕ ಧರ್ಮದ ಕೂಗು; 5 ನಿರ್ಣಯ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ‘ಧರ್ಮ’ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದೂ ಸೇರಿ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ವಿಶ್ವಗುರು ಬಸವಣ್ಣ ಅವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮುದಾಯದ ಸುಮಾರು ಸಾವಿರಾರು …

Read More »

ಕರ್ನಾಟಕದಲ್ಲಿ 2,14,234 ಅಪರಾಧ; ಬೆಂಗಳೂರಲ್ಲೂ ನಿರಂತರ ಏರುಗತಿ!

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಭಾರತದಲ್ಲಿನ ಅಪರಾಧಗಳ ಕುರಿತಾದ ಅಂಕಿ-ಅಂಶಗಳ ಒಳಗೊಂಡ 2023ರ ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ವರದಿಯ ವಿಶ್ಲೇಷಣೆ ಹೀಗಿದೆ. NCRBಯ ಭಾರತದಲ್ಲಿ ಅಪರಾಧ-2023 ವರದಿಯು 71ನೇ ಆವೃತ್ತಿಯಾಗಿದ್ದು, 2023ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ 1ರಿಂದ ಡಿಸೆಂಬರ್ 31, 2023ರವರೆಗೆ) ನಡೆದ ಅಪರಾಧ ದತ್ತಾಂಶಗಳ ಮಾಹಿತಿ ನೀಡಲಾಗಿದೆ. ಕರ್ನಾಟಕದಲ್ಲಿ ಅಪರಾಧ ಪ್ರಮಾಣದಲ್ಲಿ ವಿಶೇಷವಾಗಿ ಸೈಬರ್ …

Read More »