Breaking News

Monthly Archives: ಸೆಪ್ಟೆಂಬರ್ 2025

ಹುಕ್ಕೇರಿಯಲ್ಲಿ ಅಭಿವೃದ್ಧಿಯ ಹಬ್ಬ – 25 ಕೋಟಿ ರೂ. ಅನುದಾನ ಬಿಡುಗಡೆ

ಹುಕ್ಕೇರಿಯಲ್ಲಿ ಅಭಿವೃದ್ಧಿಯ ಹಬ್ಬ – 25 ಕೋಟಿ ರೂ. ಅನುದಾನ ಬಿಡುಗಡೆ ಹುಕ್ಕೇರಿ ತಾಲೂಕಿನಲ್ಲಿ ಅಂದಾಜು ರೂ. 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನದ ಆದೇಶ ಪತ್ರಗಳನ್ನು ಇಂದು ಹುಕ್ಕೇರಿ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಮುದಾಯಗಳ ಮುಖಂಡರಿಗೆ ವಿತರಿಸಲಾಯಿತು. ಸಾರಾಪೂರ ಗ್ರಾಮದ ಶಾಂತಿನಾಥ ದಿಗಂಬರ್ ಜೈನ ಮಂದಿರಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 50 ಲಕ್ಷ, ಬೆಲ್ಲದ ಬಾಗೇವಾಡಿಯ ಆದಿನಾಥ ಭಸ್ತಿ ದೇವಾಲಯ ಸಮಿತಿಗೆ ರೂ. …

Read More »

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿರುವ ಹೈಕೋರ್ಟ್, ಎಲ್ಲ ದತ್ತಾಂಶವನ್ನು ಸೋರಿಕೆಯಾಗದಂತೆ ಸಂರಕ್ಷಣೆ ಮಾಡಬೇಕು ಎಂಬುದಾಗಿ ಷರತ್ತು ವಿಧಿಸಿದೆ. ರಾಜ್ಯಲ್ಲಿ ನಾಗರಿಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ …

Read More »

ವಿಶೇಷಚೇತನರ ಕೋಟಾದಡಿ ನಕಲಿ ಪ್ರಮಾಣಪತ್ರ ಸೃಷ್ಟಿಸಿ ವಂಚನೆ: ಇಬ್ಬರು ಸರ್ಕಾರಿ ವೈದ್ಯರು, ಶಿಕ್ಷಕ ಸೇರಿ ಐವರು ಸೆರೆ

ಬೆಂಗಳೂರು: ವಿಶೇಷಚೇತನರ ಕೋಟಾದಡಿ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ವೈದ್ಯಕೀಯ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಸರ್ಕಾರಿ ವೈದ್ಯರು ಸೇರಿ ಐವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ್‌ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಾದ ಶಿಕ್ಷಕ ಭರಮಪ್ಪ, ವಿಜಯನಗರದ ಹೊಸಪೇಟೆಯ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ಮಕ್ಕಳ ತಜ್ಞ ಡಾ.ಶ್ರೀನಿವಾಸ್, ಕೊಪ್ಪಳದ …

Read More »

ಚಿನ್ನಯ್ಯ ಹಿಂದಿದ್ದ ಟೀಂನ ಮತ್ತೊಂದು ಕಳ್ಳಾಟ ಬಯಲು

ನವದೆಹಲಿ/ಮಂಗಳೂರು, ಸೆಪ್ಟೆಂಬರ್​ 25: ಧರ್ಮಸ್ಥಳ ತಲೆಬುರುಡೆ ಕೇಸ್​ಗೆ ಮತ್ತೊಂದು ಹೊಸ ಟ್ವಿಸ್ಟ್​ ಸಿಕ್ಕಿದೆ. 1995ರಿಂದ 2004ರ ವರೆಗಿನ ಪ್ರಕರಣಗಳ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ PIL, 2025 ಮೇ5 ರಂದು ವಜಾಗೊಂಡಿರುವ ವಿಷಯವನ್ನೇ ಮರೆಮಾಚಿ ಚಿನ್ನಯ್ಯ ಹಿಂದಿದ್ದ ಟೀಂ ಸರ್ಕಾರಕ್ಕೆ ತನಿಖೆ ಬಗ್ಗೆ ಮನವಿ ಮಾಡಿತ್ತು ಎಂಬುದು ಈಗ ಬಹಿರಂಗಗೊಂಡಿದೆ. ತನಿಖೆಗೆ ಕೋರಿ ಸಲ್ಲಿಸಿದ್ದ PIL ವಜಾಗೊಳಿಸಿದ್ದ ಕೋರ್ಟ್​, ಇಂತಹ ಪಿಐಎಲ್ ದಾಖಲಿಸಿರುವುದೇ ನಿಷ್ಫಲವೆಂದು ಅಭಿಪ್ರಾಯಪಟ್ಟಿತ್ತು. ಇದು ಪಬ್ಲಿಕ್ ಇಂಟರೆಸ್ಟ್ …

Read More »

ಓದುವ ವಯಸ್ಸಲ್ಲಿ ಪ್ರೀತಿ-ಪ್ರೇಮ: ಹೆದರಿ ದುರಂತ ಅಂತ್ಯ

ಕೋಲಾರ, (ಸೆಪ್ಟೆಂಬರ್ 25): ಅಪ್ರಾಪ್ತ ಪ್ರೇಮಿಗಳ ಪ್ರೀತಿ-ಪ್ರೇಮ ಸಾವಿನಲ್ಲಿ ಅಂತ್ಯವಾಗಿದೆ. ಹೌದು…ಕುಟುಂಬದ ಭಯದಿಂದ ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿಯಲ್ಲಿ ನಡೆದಿದೆ. ಮುಂಜಾನೆ ಎದ್ದು ತನ್ನ ತಾಯಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ತಾನು ಪ್ರೀತಿಸಿದ್ದ ಹುಡುಗಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸತೀಶ್ ಮತ್ತು ಶ್ವೇತ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.   ಮನೆಯವರು ತಮ್ಮ ಪ್ರೀತಿಯನ್ನು …

Read More »

ಬೆಳಗಾವಿ ಪೊಲೀಸರಿಂದ ಡ್ರೋನ್ ಕ್ಯಾಮರಾ ತರಬೇತಿ – ಕಾನೂನು ಸುವ್ಯವಸ್ಥೆಗೆ ಹೊಸ ಆಯಾಮ!”

ಬೆಳಗಾವಿ ಪೊಲೀಸರಿಂದ ಡ್ರೋನ್ ಕ್ಯಾಮರಾ ತರಬೇತಿ – ಕಾನೂನು ಸುವ್ಯವಸ್ಥೆಗೆ ಹೊಸ ಆಯಾಮ!” ದೊಡ್ಡ ಸಮಾವೇಶ, ರ್ಯಾಲಿಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡೋನ್ ಕ್ಯಾಮರಾ ಬಳಸುವ ಕುರಿತು ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರು ಡೋನ್ ಹಾರಿಸುವುದು ಹೇಗೆ ಮತ್ತು ಅದನ್ನು ಹೇಗೆ ಮಾನಿಟರ್ ಮಾಡಬೇಕು ಎಂಬುದರ …

Read More »

ಮನೆ ಮನೆಗೆ ತೆರಳಿ ಮತ ಬೇಟೆಗೆ ಇಳಿದ ದಿ.ಅಪ್ಪಣಗೌಡ ಪಾಟೀಲ ಪೆನಲ್ ..!

ಮನೆ ಮನೆಗೆ ತೆರಳಿ ಮತ ಬೇಟೆಗೆ ಇಳಿದ ದಿ.ಅಪ್ಪಣಗೌಡ ಪಾಟೀಲ ಪೆನಲ್ ..! ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆಯಲ್ಲಿ ಜಾರಕಿಹೊಳಿಗೆ & ಜೊಲ್ಲೆ ಬಣದ ದಿವಂಗತ ಅಪ್ಪಣಗೌಡ ಪಾಟೀಲರ ಪೆನಲ್ ನಿಂದ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿರುವ ಅಪ್ಪಾಸಾಹೇಬ್ ಶಿರಕೋಳಿ ಅವರ ಪುತ್ರ ಸಂಜಯ ಶಿರಕೋಳಿ, ಅತ್ಯಂತ ಚಿರಪರಿಚಿತ ಕುಟುಂಬ, ನಲವಡೆ ಮನೆತನದ ಅಮರ ನಲವಡೆ ಹಾಗೂ ಹಾಲುಮತ …

Read More »

ಬೆಳಗಾವಿಯಲ್ಲಿ ನವರಾತ್ರಿಯ ನಾಲ್ಕನೇ ದಿನ ಶ್ರೀ ದುರ್ಗಾಮಾತಾದೌಡ್ – ಯುವಜನರಲ್ಲಿ ಧರ್ಮ ರಕ್ಷಣೆಯ ಜಾಗೃತಿ!

ಬೆಳಗಾವಿಯಲ್ಲಿ ನವರಾತ್ರಿಯ ನಾಲ್ಕನೇ ದಿನ ಶ್ರೀ ದುರ್ಗಾಮಾತಾದೌಡ್ – ಯುವಜನರಲ್ಲಿ ಧರ್ಮ ರಕ್ಷಣೆಯ ಜಾಗೃತಿ! ಬೆಳಗಾವಿಯಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ವತಿಯಿಂದ ಇಂದು ನವರಾತ್ರಿಯ ನಾಲ್ಕನೇಯ ದಿನ ಶ್ರೀ ಕುಷ್ಮಾಂಡಾದೇವಿಯ ಆರಾಧನೆಯೊಂದಿಗೆ ಶ್ರೀ ದುರ್ಗಾಮಾತಾದೌಡ್ ಆರಂಭಿಸಲಾಯಿತು. ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ಚೌಕನಿಂದ ಆರಂಭಗೊಂಡ ದೌಡ್ ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ, ಸಾಮ್ರಾಟ್ ಅಶೋಕ ಚೌಕ್, ಬಸವಾಣ್ ಗಲ್ಲಿ ಲಕ್ಷ್ಮೀ ದೇವಾಲಯ, ನರಗುಂದಕರ್ ಭಾವೆ ಚೌಕ, ಗಣಪತ ಗಲ್ಲಿ, ಕಡೋಲ್ಕರ್ …

Read More »

ಎಸ್​.ಎಲ್​. ಭೈರಪ್ಪ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಘೋಷಣೆ

ಬೆಂಗಳೂರು: ಹಿರಿಯ ಸಾಹಿತಿ ಎಸ್​.ಎಲ್​. ಭೈರಪ್ಪ ಅವರು ಇಹಲೋಕ ತ್ಯಜಿಸಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸೇರಿದಂತೆ ಗಣ್ಯರು ಎಸ್​. ಎಲ್​. ಭೈರಪ್ಪ ಅವರ ಅಂತಿಮ ದರ್ಶನ ಪಡೆದರು. ಎಸ್. ಎಲ್. ಬೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾಹಿತ್ಯಾಸಕ್ತರು, ಅವರ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು …

Read More »

ಬದುಕಿನ ‘ಯಾನ’ ಮುಗಿಸಿದ ಭೈರಪ್ಪನವರನ್ನು ನೆನೆದ ಮನೆ ಕೆಲಸದವರು; ಮೈಸೂರಿನಲ್ಲಿ ನಾಳೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಮೈಸೂರು : ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರ ಗೌರವಗಳೊಂದಿಗೆ ನಾಳೆ (ಶುಕ್ರವಾರ) ಮಧ್ಯಾಹ್ನ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಬುಧವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದವರಾದ ಭೈರಪ್ಪ, ಕೆಳದ 50 ವರ್ಷಗಳಿಂದ ಮೈಸೂರಿನ ಉದಯರವಿ ರಸ್ತೆಯಲ್ಲಿರುವ …

Read More »