ಬೆಂಗಳೂರು: ನ್ಯೂ ತಿಪ್ಪಸಂದ್ರದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ 17 ವರ್ಷದ ಯುವಕನನ್ನು ಜೀವನ್ ಭೀಮಾನಗರ ಪೊಲೀಸರು ವಶಕ್ಕೆ ಪಡೆದುಕೊಂಡು, ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ದೇವರ ವಿಗ್ರಹ ವಿರೂಪಗೊಂಡಿರುವ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದಾಗ ವಿಗ್ರಹ ವಿರೂಪಗೊಳಿಸಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಎಂಬುದು ಗೊತ್ತಾಗಿದೆ. ಆತನನ್ನು ಬಾಲನ್ಯಾಯ ಮಂಡಳಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಯುವಕ …
Read More »Yearly Archives: 2024
ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತಗಟ್ಟೆ ಬಳಿ ಚಪ್ಪಲಿಗಳಿಗೆ ನಿಷೇಧ ಹೇರಬೇಕೆಂಬ ವಿಚಿತ್ರ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ. ಪರಂದ ಕ್ಷೇತ್ರದ ಅಭ್ಯರ್ಥಿಯಾಗಿರುವ ಗುರುದಾಸ್ ಸಂಭಾಜಿ ಕಾಂಬ್ಳೆ ಚಪ್ಪಲಿಯ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ, ಅದನ್ನು ಧರಿಸಿದರೆ ಮಾದರಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮತಗಟ್ಟೆಯ ಸುತ್ತ 200 ಮೀ. ಚಪ್ಪಲಿಗಳನ್ನು ನಿಷೇಧಿಸಬೇಕು ಎಂದು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ ಮತಗಟ್ಟೆಯ ಸಮೀಪ ಅಭ್ಯರ್ಥಿ ತಮ್ಮ ಚಿಹ್ನೆಯ …
Read More »ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
ಬೆಳಗಾವಿ: ಸುಮಾರು 20 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ನಡೆದಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ 15 ಅಧಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ರವಿವಾರ ರಾತ್ರಿ ಬೆಳಗಾವಿ ತಾಲೂಕಿನ ಯಳ್ಳೂರ ಬಳಿಯ ಸುಳಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಅರವಿಂದ ಪಾಟೀಲ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಳ್ಳೂರು ಗ್ರಾಮದಲ್ಲಿರುವ 20 ಗುಂಟೆ …
Read More »ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : ‘GPF’ ಹಿಂತೆಗೆದುಕೊಳ್ಳುವ ಮಿತಿ ಶೇ.90ಕ್ಕೆ ಹೆಚ್ಚಳ!
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿನ ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90% ಅನ್ನು ಮಂಜೂರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಶೇ.90ರಷ್ಟು GPF ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅದರಲ್ಲಿ ಭವಿಷ್ಯ ನಿಧಿಗಳ …
Read More »ಗಾಣಗಾಪುರ ದತ್ತಾತ್ರೇಯ ದೇವಾಲಯದಲ್ಲಿ ಹೊಡೆದಾಟ: ಅರ್ಚಕರ ವಿರುದ್ಧ ಎಫ್‌ಐಆರ್
ಕಲಬುರಗಿ: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿಯೇ ಅರ್ಚಕರು ಹೊಡೆದಾಡಿಕೊಂಡಿದ್ದಾರೆ. ದತ್ತ ಮಂದಿರದ ಪ್ರಾಂಗಣದಲ್ಲಿ ವಲ್ಲಭ ಪೂಜಾರಿ ಮೇಲೆ ಗುಂಡು ಪೂಜಾರಿ, ಕಿರಣ್ ಪೂಜಾರಿ ಹಲ್ಲೆ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದೆ. ಈ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೇವಸ್ಥಾನದ ಪೂಜಾ ಕೈಂಕರ್ಯವನ್ನು ಪ್ರತಿ ವರ್ಷ ಒಂದೊಂದು ಕುಟುಂಬಕ್ಕೆ ವಹಿಸುವ ಪದ್ಧತಿ ಇದೆ. ಈ ವರ್ಷ ವಲ್ಲಭ ಪೂಜಾರಿ …
Read More »ಮೈಸೂರಿನಲ್ಲಿ ನೇಣು ಬಿಗಿದುಕೊಂಡು `ಬೆಮೆಲ್ ಅಧಿಕಾರಿ’ ಆತ್ಮಹತ್ಯೆ!
ಮೈಸೂರು: ಮೈಸೂರಿನಲ್ಲಿ ಬೆಮೆಲ್ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೈಸೂರಿನ ದಟ್ಟಗಳ್ಳಿ ಹೊರ ವರ್ತುಲ ರಸ್ತೆಯ ಕೆಇಬಿ ಸಮುದಾಯಭವನದ ವಾಚ್ ಮನ್ ಶೆಡ್ ನಲ್ಲಿ ಬೆಮೆಲ್ ಅಧಿಕಾರಿ ಎಲ್. ಮೋಹನ್ ರಾವ್(54) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋಹನ್ ರಾವ್ ಬೆಮಲ್ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಕರ್ತವ್ಯಕ್ಕೆ ತೆರಳುವುದಾಗಿ ಮನೆಯಿಂದ ಹೊರಗೆ ಹೋಗಿದ್ದಾರೆ. ಮಧ್ಯಾಹ್ನದವರೆಗೂ ಅವರು ಕುಟುಂಬದವರೊಂದಿಗೆ ಫೋನ್ ನಲ್ಲಿ ಅವರು ಮಾತನಾಡಿದ್ದು, ನಂತರ ಅವರ …
Read More »ಮೂವರ ಬಲಿ ಪಡೆದ ಸ್ವಿಮ್ಮಿಂಗ್ ಪೂಲ್! ತನಿಖೆ ಮುಗಿಯೋವರೆಗೂ ರೆಸಾರ್ಟ್ ಕ್ಲೋಸ್
ಮಂಗಳೂರು: ನಗರದ ಹೊರವಲಯದಲ್ಲಿರುವ ಉಚ್ಚಿಲ ಬೀಚ್ ಬಳಿಯ ಖಾಸಗಿ ರೆಸಾರ್ಟ್‌ವೊಂದರ (Resort) ಈಜುಕೊಳದಲ್ಲಿ (Swimming Pool) ಮೂವರು ಯುವತಿಯರು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ (Death) ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಈ ಪ್ರಕರಣದ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್‌ಡೌನ್ ಮಾಡಲಾಗಿದೆ. ರೆಸಾರ್ಟ್‌ನ ಉದ್ದಿಮೆ ಪರವಾನಿಗೆ ರದ್ದು ರೆಸಾರ್ಟ್ ನಲ್ಲಿ ನ್ಯೂನ್ಯತೆಗಳು ಇರೋ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ರೆಸಾರ್ಟ್‌ನ ಉದ್ದಿಮೆ ಪರವಾನಿಗೆ ರದ್ದು ಪಡಿಸಿ ಉಳ್ಳಾಲ ಪುರಸಭೆ ಆದೇಶ ಹೊರಡಿಸಿದೆ. …
Read More »ಹಾವೇರಿಯಲ್ಲಿ ಹೋರಿ ಬೆದರಿಸುವ ವೇಳೆ ಕಿತ್ತು ಬಂತು ಓರ್ವನ ಕಣ್ಣುಗುಡ್ಡೆ, 30 ಮಂದಿಗೆ ಗಾಯ!
ಹಾವೇರಿ: ಜಿಲ್ಲೆಯಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓರಿ ತಿವಿದು 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವಂತ ಘಟನೆ ನಡೆದಿದೆ. ಅದರಲ್ಲೂ ಓರ್ವನಿಗೆ ಕಣ್ಣೇ ಕಿತ್ತುಬಂದು ಗಂಭೀರ ಗಾಯವಾಗಿದೆ. ಹಾವೇರಿ ಜಿಲ್ಲೆಯ ನಾಗೇಂದ್ರಮಟ್ಟಿಯಲ್ಲಿ ಭಾನುವಾರ ರಾಜ್ಯಮಟ್ಟದ ಹೋರಿ ಬೆದರಿಸುವಂತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಿ ಹಿಡಿಯೋದಕ್ಕೆ ಸ್ಪರ್ಧಿಗಳು ಆಗಮಿಸಿ ಭಾಗವಹಿಸಿದ್ದರು. ಇಂದು ನಡೆದಂತ ಹೋರಿ ಬೆದರಿಸುವಂತ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೋರಿಯೊಂದು ಕೊಂಬಿನಲ್ಲಿ ವ್ಯಕ್ತಿಯೊಬ್ಬರಿಗೆ ತಿವಿದ …
Read More »ಚನ್ನಮ್ಮನ ಕಿತ್ತೂರು ಮನಗೆದ್ದ ಶಾಸ್ತ್ರೀಯ ಸಂಗೀತ ಕಛೇರಿ
ಚನ್ನಮ್ಮನ ಕಿತ್ತೂರು: ಖ್ಯಾತ ತಬಲಾ ವಾದಕರಾಗಿದ್ದ ಎಲ್ಲಪ್ಪ ಭಜಂತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಂಡಿತ ಅಶೋಕ ಹುಗ್ಗಣ್ಣವರ ಪ್ರಸ್ತುತ ಪಡಿಸಿದ ಶಾಸ್ತ್ರೀಯ ಗಾಯನ ಶ್ರೋತೃಗಳ ಮನಗೆದ್ದಿತು. ರಾಗ ಮಾಲಕೌಂಸದೊಂದಿಗೆ ಗಾಯನ ಆರಂಭಿಸಿದರು. ಗಾಯನಕ್ಕೆ ಮನಸೋತ ಪ್ರೇಕ್ಷಕರು ಮಧ್ಯೆದಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಪಟ್ಟರು. ಭೈರವಿ ರಾಗದಲ್ಲಿ ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ’ ಗೀತೆ ಪ್ರಸ್ತುತ ಪಡಿಸಿ ಕೊನೆಗೊಳಿಸಿದರು. ಪಂ.ವಸಂತ ಭಜಂತ್ರಿ ಟ್ರಂಪೆಟ್ ನುಡಿಸಿ ರಂಜಿಸಿದರು. ಪಂಡಿತ ಅಲ್ಲಮಪ್ರಭು ಕಡಕೋಳ …
Read More »ಕರಡಿಗುದ್ದಿ ಗ್ರಾಮದ ಕಾಮಗಾರಿ ಪರಿಶೀಲಿಸಿದ ಹಟ್ಟಿಹೊಳಿ
ಬೆಳಗಾವಿ: ತಾಲ್ಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಸ್ಥಳೀಯರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯರ ಸಲಹೆ ಪಡೆದು, ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು ಎಂದು ಚನ್ನರಾಜ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿರೇಬಾಗೇವಾಡಿ ಬ್ಲಾಕ್ …
Read More »